Advertisement

ಲೋಪವಿಲ್ಲದೇ ಶಿಕ್ಷಕರ ಕ್ಷೇತ್ರದ ಮತಪಟ್ಟಿ ಸಿದ್ಧಪಡಿಸಿ

07:04 AM Jun 12, 2020 | Lakshmi GovindaRaj |

ದೇವನಹಳ್ಳಿ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರ ಪಟ್ಟಿಯನ್ನು ಯಾವುದೇ ಲೋಪದೋಷ ವಿಲ್ಲದೆ ಸಿದ್ಧಪಡಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ತಿಳಿಸಿದರು. ತಾಲೂಕಿನ ಜಿಲ್ಲಾಡಳಿತ ಭವನದ  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ  ಪರಿಷ್ಕರಣಾ ಪಟ್ಟಿತಯಾರಿಸಲು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೋಡೆಲ್‌ ಅಧಿಕಾರಿಗಳನ್ನಾಗಿ ಈಗಾಗಲೇ ನೇಮಿಸಿಲಾಗಿದ್ದು ಶೀಘ್ರದಲ್ಲೇ ಮತದಾರರ ಪಟ್ಟಿ ತಯಾರಿಸಲು ಕ್ರಮವಹಿಸಬೇಕೆಂದರು. ನೆಲಮಂಗಲ  ತಾಲೂಕಿನಲ್ಲಿ 517, ಹೊಸಕೋಟೆ ತಾಲೂಕಿನಲ್ಲಿ 1054,

ದೇವನಹಳ್ಳಿ 458 ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 725 ಮಂದಿ ಶಿಕ್ಷಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು  ಸೇರ್ಪಡೆಯಾಗದ ಅರ್ಹ ಶಿಕ್ಷಕರಿಗೆ ಗಡುವು ನೀಡಿ ಹೆಸರು ಸೇರ್ಪಡೆಗೆ ಕ್ರಮ ವಹಿಸಬೇಕು. ಕನಿಷ್ಠ ಮೂರು ವರ್ಷ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದವರನ್ನು ಮಾತ್ರ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಸುವಾಗ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್‌. ಕೆ.ನಾಯಕ್‌, ಉಪವಿಭಾಗಾಧಿಕಾರಿ ಅರುಳ್‌ ಕುಮಾರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಗಂಗಯ್ಯ, ದೇವನಹಳ್ಳಿ ತಹಶೀಲ್ದಾರ್‌ ಅಜೀತ್‌  ಕುಮಾರ್‌, ದೊಡ್ಡಬಳ್ಳಾಪುರ ತಹಶೀಲ್ದಾರ್‌ ಶಿವರಾಜ್‌.ಕೆ, ಹೊಸಕೋಟೆ ತಹಶೀಲ್ದಾರ್‌ ಗೀತಾ, ನೆಲಮಂಗಲ ತಾಲೂಕು ತಹಶೀಲ್ದಾರ್‌ಶಿÅàನಿವಾಸಯ್ಯ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ  ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next