Advertisement

ತಾಯಿ-ಶಿಶು ಮರಣ ವರದಿ ತಯಾರಿಸಿ: ಜಿಲ್ಲಾಧಿಕಾರಿ

04:16 PM Oct 07, 2020 | Suhan S |

ರಾಯಚೂರು: ಜಿಲ್ಲೆಯಲ್ಲಿ ಶಿಶುಹಾಗೂ ತಾಯಿ ಮರಣ ಪ್ರಕರಣಗಳನ್ನುಕೂಲಂಕಷವಾಗಿ ಪರಿಶೀಲಿಸಿ, ತಜ್ಞರೊಂದಿಗೆಚರ್ಚಿಸಿ ಮುಂದಿನ ಸಭೆಯೊಳಗೆ ವರದಿ  ನೀಡುವಂತೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ತಿಳಿಸಿದರು.

Advertisement

ನಗರದ ಡಿಸಿ ಕಚೇರಿಯಲ್ಲಿ ಮಂಗಳವಾರ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ವಿವಿಧ ಸೂಚ್ಯಂಕಗಳಡಿ ಸಾಧಿಸಬೇಕಾದ ಪ್ರಗತಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ಈ ಸೂಚ್ಯಂಕದಪ್ರಮಾಣ ಹೆಚ್ಚಿಸಲು ನವಜಾತ ಶಿಶುಗಳುಹಾಗೂ ಗರ್ಭಿಣಿಯರ ಸಾವಿನ ಪ್ರಮಾಣಕುಗ್ಗಿಸಬೇಕಿದೆ. ಆರೋಗ್ಯ ಕೇಂದ್ರಗಳು, ಉಪಕೇಂದ್ರಗಳಲ್ಲಿ ಗರ್ಭಿಣಿಯರ ಆರೋಗ್ಯಪರಿಶೀಲಿಸಿ ವಿವರ ಸಂಗ್ರಹಿಸಬೇಕು. ಅವರಿಗೆ ಅಗತ್ಯ ಔಷಧ, ಚಿಕಿತ್ಸೆ, ಮಾರ್ಗದರ್ಶನ, ಪೌಷ್ಟಿಕ ಆಹಾರ ಸಿಗುವಂತೆ ನೋಡಿಕೊಳ್ಳಿ ಎಂದರು.

ಜಿಲ್ಲೆಯ ಗರ್ಭಿಣಿಯರ ಆರೋಗ್ಯ ಸ್ಥಿತಿ-ಗತಿ, ಸುಸೂತ್ರವಾಗಿ ಹೆರಿಗೆಯಾಗಲು ಆರೋಗ್ಯ ಕೇಂದ್ರಗಳಲ್ಲಿ ಮಾಡಿಸಿಕೊಳ್ಳುವ ತಪಾಸಣೆ ಹಾಗೂ ಪ್ರಸವ ಪೂರ್ವ ವಹಿಸಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳಬಗ್ಗೆ ನಿಗದಿ ಪಡಿಸಿದ ನಮೂನೆಯಲ್ಲಿ ವರದಿ ದಾಖಲಿಸುವಂತೆ ತಿಳಿಸಿದರು.

ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡುವ ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಭರಿಸಲಾಗುವ ಅನುದಾನದ ವಿವರ ಪರಿಶೀಲಿಸಬೇಕು, ಅದನ್ನು ಅಂಗನವಾಡಿ ಮಟ್ಟದಿಂದಲೇ ಟ್ರಾಫಿಕ್‌ ಮಾಡಬೇಕು ಎಂದರು.

Advertisement

ಮಹತ್ವಾಕಾಂಕ್ಷಿ ಜಿಲ್ಲೆಯ ಯೋಜನೆಯಡಿ ಕೃಷಿ ಚಟುವಟಿಕೆಗಳ ಉತ್ತೇಜನಕ್ಕಾಗಿ ಹನಿ, ತುಂತುರು ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಕೈಗೊಂಡಿರುವ ಪ್ರದೇಶಗಳ ಮಣ್ಣಿನ ವರದಿ ನೀಡಬೇಕು. ಶಾಲೆಗಳಲ್ಲಿ ಸುಸ್ಥಿತಿ ಹಾಗೂ ದುಸ್ಥಿತಿಯಲ್ಲಿರುವ ಶೌಚಗೃಹಗಳ ವರದಿ ಸಂಗ್ರಹಿಸಿ.ಅಸಮರ್ಪಕ ಶೌಚಗೃಹಗಳ ವಿವರ ನೀಡುವಂತೆ ಡಿಡಿಪಿಐಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕ್ಷಯರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕರ ಸಹಯೋಗದಲ್ಲಿಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಷಯರೋಗಿಗಳ ವಿವರ ಸಂಗ್ರಹಿಸಿ. ಮುದ್ರಾ ಯೋಜನೆಯಡಿ ನಿಗದಿ ಪಡಿಸಿದ ಗುರಿಸಾಧಿ ಸುವಲ್ಲಿ ಜಿಲ್ಲೆಯ ಹಲವು ಬ್ಯಾಂಕ್‌ಗಳು ವಿಫಲವಾಗಿವೆ. ಕಡಿಮೆ ಪ್ರಮಾಣದ ಗುರಿ ಸಾಧಿಸಿದ ಬ್ಯಾಂಕ್‌ಗಳ ಪಟ್ಟಿ ನೀಡುವಂತೆ

ಸಂಬಂಧಿಸಿದ ಅಧಿಕಾರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ, ಮಹತ್ವಾಕಾಂಕ್ಷಿ ಜಿಲ್ಲೆಗಳ ಆರೋಗ್ಯ ಕ್ಷೇತ್ರದ ನೋಡಲ್‌ ಅಧಿಕಾರಿ ಸಂತೋಷ್‌ ರಾಣಿ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅನುಷ್ಠಾನಾಧಿಕಾರಿ ಡಾ| ವಿಜಯ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next