Advertisement

ಪಶ್ಚಿಮ ಘಟ್ಟ ಸಂರಕ್ಷಣೆಗೆ ಹಸಿರು ಸೇನೆ ತಯಾರಿ

10:17 AM Feb 14, 2018 | |

ಮಹಾನಗರ: ನಮ್ಮ ಪಶ್ಚಿಮ ಘಟ್ಟವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಹಸಿರು ಸೈನಿಕರಾದರೆ ಹೇಗೆ? ಒಳ್ಳೆಯದೆ ತಾನೇ. ಇದೇ ಕೆಲಸವನ್ನು ಮಾಡುತ್ತಿದೆ ಸಹ್ಯಾದ್ರಿ ಸಂಚಯ ಬಳಗ. ಬಳಗದ ಸದಸ್ಯರು ‘ಪಶ್ಚಿಮ ಘಟ್ಟ ಸುರಕ್ಷತಾ ಅಭಿಯಾನ’ ಹೆಸರಿನಡಿ ವಿದ್ಯಾರ್ಥಿಗಳಿಗೆ ಪಶ್ಚಿಮ ಘಟ್ಟ ಕುರಿತು ಪಾಠ ಮಾಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳನ್ನು ಕಾಡಿನೊಳಗೆ ಕರೆದೊಯ್ದು ವಸ್ತು ಸ್ಥಿತಿ ವಿವರಿಸುವ ನೈಜ ಪಾಠವಿದು.

Advertisement

ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು
2016ರಿಂದ ಆರಂಭವಾದ ಈ ಪಶ್ಚಿಮ ಘಟ್ಟ ಸುರಕ್ಷತಾ ಅಭಿಯಾನದಲ್ಲಿ ದ.ಕ., ಉಡುಪಿ ಹಾಗೂ ಕಾಸರಗೋಡಿನ ಕಾಲೇಜು ಮಕ್ಕಳು ಭಾಗವಹಿಸುತ್ತಿದ್ದಾರೆ. 2016ರಲ್ಲಿ 6 ಕಾಲೇಜು, 2017ರಲ್ಲಿ 14 ಕಾಲೇಜುಗಳು, 2018 ಈವರೆಗೆ 7 ಕಾಲೇಜಿನ ನೂರಾರು ಮಕ್ಕಳು ಇದರ ಅನುಭವ ಪಡೆದಿದ್ದಾರೆ.

ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ನಡೆದ ಅನೇಕ ಹೋರಾಟಗಳಲ್ಲಿ ಜಿಲ್ಲೆಯ ಜನರು ಸ್ತಬ್ಧವಾಗಿದ್ದರು.
ವಿದ್ಯಾರ್ಥಿಗಳೂ ತಣ್ಣಗಿದ್ದರು. ಈ ಹಿನ್ನೆಲೆಯಲ್ಲಿ ಬಳಗವು ಮಕ್ಕಳಲ್ಲಿ ಪರಿಸರ ಪ್ರೇಮ ಬಿತ್ತಲು ಹೊರಟಿತು. ಪ್ರತಿ ಶಾಲಾ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳಿಗೆ ಪರಿಸರ ಕುರಿತು ಮಾಹಿತಿ ನೀಡಲಾಯಿತು. ಬಳಿಕ ಚಾರಣ- ಅಧ್ಯಯನದಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನಾವು ಹೀಗೆ ಹೋಗುವಾಗ ಸ್ಥಳೀಯ ಅಧಿಕಾರಿಗಳ ಅನುಮತಿ ಪಡೆಯಲು ಮರೆಯುವುದಿಲ್ಲ ಎನ್ನುತ್ತಾರೆ ದಿನೇಶ್‌ ಹೊಳ್ಳ.

ಎಲ್ಲೆಲ್ಲಿ ಮಾಹಿತಿ?
ಮೊದಲಿಗೆ ಕಾಲೇಜಿಗೆ ತೆರಳಿ ತರಗತಿಯಲ್ಲಿ ಜೀವ ಜಲ, ಪಶ್ಚಿಮ ಘಟ್ಟ , ಪರಿಸರ ಜಾಗೃತಿಯ ಕುರಿತಾಗಿ ತರಗತಿ ನಡೆಸಲಿದೆ. ಬಳಿಕ ಪಶ್ಚಿಮ ಘಟ್ಟಕ್ಕೆ ಕರೆದೊಯ್ದು ವಿವರಿಸಲಾಗುತ್ತದೆ. ಚಾರ್ಮಾಡಿಯ ಜೇನುಕಲ್ಲುಗುಡ್ಡ,
ಕೊಡೆಕಲ್ಲು, ಬಿದಿರುತಳ ಟ್ರೈಬಲ್‌ ವಿಲೇಜ್‌, ಎತ್ತಿನ ಭುಜ, ಸೊಪ್ಪಿನಗುಡ್ಡ, ಶಿರಾಡಿಯ ವೆಂಕಟಗಿರಿ, ಮುಗಿಲಗಿರಿ, ಕಳಸ ಸಮೀಪದ ಹೊರನಾಡುವಿನ ಗಾಳಿಗುಡ್ಡ, ಅಬ್ಬಿನೆತ್ತಿ, ಹಣತೆಬೆಟ್ಟ,ಬಲಿಗೆಖಾನ, ಎಳನೀರು ಘಾಟಿ, ಹಿರಿಮರಿಗುಪ್ಪೆ, ಕೃಷ್ಣಗಿರಿ, ಬಿಸಿಲೆಘಾಟ್‌ ಮೊದಲಾದೆಡೆ ಭೇಟಿ ನೀಡಲಾಗುತ್ತದೆ.

ಹಸಿರು ಸೈನಿಕರು ಬೇಕಾಗಿದ್ದಾರೆ
ದೇಶವನ್ನು ಕಾಯಲು ಗಡಿಯಲ್ಲಿ ಸೈನಿಕರಿರುವಂತೆ ಪಶ್ಚಿಮ ಘಟ್ಟವನ್ನು ಸಂರಕ್ಷಿಸಲು ಹಸಿರು ಸೈನಿಕರ ಆವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಾವು ಯುವ ಜನತೆಯನ್ನು ಪರಿಸರ ಸಂರಕ್ಷಣಾ ಯೋಧರನ್ನಾಗಿ ಪರಿವರ್ತಿಸಬೇಕಿದೆ.
-ದಿನೇಶ್‌ ಹೊಳ್ಳ

Advertisement

ಅರಣ್ಯಾಧಿಕಾರಿಯಾಗುವ ಗುರಿ
ಪಶ್ಚಿಮ ಘಟ್ಟದ ಬಗ್ಗೆ ಸರಕಾರದ ನಿರ್ಲಕ್ಷ್ಯತನ ಮತ್ತು ಮಾಫಿಯಾಗಳ ಒಡೆತನದ ಬಗ್ಗೆ ಕೇಳಿದ್ದೆ. ಈ ತರಗತಿಯಿಂದ ಸ್ಪಷ್ಟ ಮಾಹಿತಿ ದೊರಕಿತು. ನಮ್ಮ ಬದುಕಿಗೆ ಚೇತನವಾಗಿರುವ ಪಶ್ಚಿಮಘಟ್ಟವನ್ನು ಸಂರಕ್ಷಿಸಲು ಅರಣ್ಯ
ಅಧಿಕಾರಿ ಆಗಬೇಕೆಂದಿರುವೆ.
– ಅಕ್ಷತಾ, ವಿವಿ ಕಾಲೇಜು ಮಂಗಳೂರು 

ಪಶ್ಚಿಮಘಟ್ಟದ ರೋದನಕ್ಕೆ ಕಿವಿಯಾಗಬೇಕು
ಪ್ರಕೃತಿಯ ಕುರಿತು ನನ್ನ ಪ್ರೀತಿ ಮತ್ತು ಗೌರವ ಇಂಥ ಕಾರ್ಯಕ್ರಮ ಪ್ರೇರಣೆ ನೀಡಬಲ್ಲದು. ಪಶ್ಚಿಮಘಟ್ಟದ ರೋದನಕ್ಕೆ ಕಿವಿಯಾಗಿ ನನ್ನಿಂದಾದಷ್ಟು ಒಳಿತು ಮಾಡಬೇಕೆಂಬ ಜಾಗೃತಿ ನನ್ನಲ್ಲಿ ಮೂಡಿದೆ.
ಮಹಾಲಕ್ಷ್ಮೀ, ಭಂಡಾರ್‌ಕಾರ್
   ಕಾಲೇಜು ಕುಂದಾಪುರ

 ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next