Advertisement
ವಿನಾಶದ ಅಂಚಿನಲ್ಲಿರುವ ಕಾಡು ಪ್ರಾಣಿಗಳನ್ನು ವೇಷಗಳ ಮೂಲಕ ನಾಡಿನ ಜನತೆಗೆ ಪರಿಚಯಿಸುವ ಜತೆಗೆ ಯಕ್ಷಗಾನ, ಯಮ, ನಾರದ, ಋಷಿ, ನಪ್ಪು ಬಾಲೆ ಇತ್ಯಾದಿ ವೇಷಗಳ ಮೂಲಕ ಕಲಾವಿದರು ಜನರಿಗೆ ಮನೋರಂಜನೆಯನ್ನೂ ನೀಡುತ್ತಾರೆ.
ಗ್ರಾಮೀಣ ಭಾಗದ ಕಲಾವಿದರಿಗೆ ನವರಾತ್ರಿಯ ವೇಷ ಒಂದು ಉತ್ತಮ ಅವಕಾಶವನ್ನೂ ಕಲ್ಪಿಸಿಕೊಟ್ಟಿದೆ. ಕೆಲವರು ಇದನ್ನು ಧಾರ್ಮಿಕ ಕಟ್ಟುಪಾಡಿನ ಆಚರಣೆಯಾಗಿ ಬಳಸಿಕೊಂಡರೆ, ಮತ್ತೆ ಕೆಲವರು ಹರಕೆಯ ರೂಪದಲ್ಲಿ ಕೈಗೊಂಡು, ಧಾರ್ಮಿಕ ಸೇವೆ ಮಾಡುತ್ತಾರೆ. ಒಂದಿಷ್ಟು ಸಂಪಾದನೆಯ ಆಸೆಯಿಂದ ವೇಷ ಹಾಕುವವರೂ ಇದ್ದಾರೆ. ದಸರಾ ರಜೆಯಲ್ಲಿ ಮಕ್ಕಳೂ ವೇಷ ಹಾಕಿ ತಾಸೆ ಪೆಟ್ಟಿಗೆ ಹೆಜ್ಜೆ ಹಾಕುತ್ತಾರೆ. ಪ್ರಮುಖ ವೇಷಗಳು
ಹುಲಿ, ಕರಡಿ, ಸಿಂಹ ಪ್ರಮುಖ ಗುಂಪು ವೇಷಗಳಾದರೆ, ಬೇಟೆಗಾರ, ಪೈಂಟರ್, ಬೇಲಿ ಹಾಕುವವರು, ಗಾರೆ ಕೆಲಸಗಾರರು, ನಪ್ಪು ಬಾಲೆ, ಯಕ್ಷಗಾನ, ಯಮ, ನಾರದ, ಋಷಿ – ಹೀಗೆ ಒಂಟಿ ವೇಷಗಳನ್ನು ಧರಿಸಿ, ದುರ್ಗೆಯ ಆರಾಧನೆ ಮಾಡುವುದು ವಾಡಿಕೆ.
Related Articles
ಹಲವು ವರ್ಷಗಳ ಹಿಂದೆ ನವರಾತ್ರಿ ವೇಷಗಳಿಗೆ ವಿಶೇಷವಾದ ಗೌರವವಿತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಇದರ ಮಹತ್ವ ಬಹಳಷ್ಟು ಕಡಿಮೆಯಾಗಿದೆ. ಟಿ.ವಿ., ಮೊಬೈಲ್‌ಗಳ ಪ್ರಭಾವದಿಂದಾಗಿ ಜನ ಆಕರ್ಷಣೆ ಕಳೆದುಕೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ವೇಷಧಾರಿಗಳ ಸಂಖ್ಯೆಯೂ ಕಡಿಮೆಯಾಗಿದೆ. ವೇಷಧಾರಿಗಳು ನಿತ್ಯ 2,000 ರೂ. ಆದಾಯ ನಿರೀಕ್ಷಿಸುತ್ತಿದ್ದಾರೆ.
Advertisement
ವೆಚ್ಚ ನಿಭಾಯಿಸುವುದು ಕಷ್ಟಒಂದು ಹುಲಿ ಅಥವಾ ಕರಡಿ ವೇಷದ ಏಳು ಜನರ ತಂಡಕ್ಕೆ 14 ಸಾವಿರ ರೂ. ಸಂಬಳ ಭರಿಸಿ, ಪ್ರಯಾಣ, ಊಟ-ತಿಂಡಿ ಖರ್ಚು, ಇತರ ವೆಚ್ಚಗಳನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಹಲವು ವೇಷದ ತಂಡಗಳು ನೇಪಥ್ಯಕ್ಕೆ ಸರಿದಿವೆ. ದೇವರ ಹೆಸರಲ್ಲಿ ಹರಕೆ
ತಮ್ಮ ಕೃಷಿಗೆ ಕಾಡು ಪ್ರಾಣಿಗಳ ವಿಪರೀತ ಉಪಟಳ, ಆರೋಗ್ಯದ ಸಮಸ್ಯೆ, ದೈನಂದಿನ ವ್ಯವಹಾರಗಳಲ್ಲಿ ಸಮಸ್ಯೆಯಿದ್ದರೆ ತುಳುನಾಡಿನ ಜನ ದೇವರ ಮೊರೆ ಹೋಗುತ್ತಾರೆ. ನವರಾತ್ರಿಯ ಸಮಯದಲ್ಲಿ ವಿಶೇಷ ವೇಷ ಧರಿಸುವ ಮೂಲಕ ತಮ್ಮ ಸಮಸ್ಯೆಗಳನ್ನು ನಿವಾರಿಸಿದ ದುರ್ಗೆಗೆ ಹರಕೆಯನ್ನು ಸಂದಾಯ ಮಾಡುತ್ತಾರೆ. ವೇಷಧಾರಿಗಳು ಮೊದಲ ದಿವಸ ಬಣ್ಣ ಬಳಿದ ಬಳಿಕ ಕೊನೆಯ ದಿನ ದೇವಾಸ್ಥಾನದಲ್ಲಿ ಸೇವೆ ನಡೆದ ಬಳಿಕವೇ ಬಣ್ಣವನ್ನು ತೆಗೆಯುವ ಪದ್ಧತಿ ಇಟ್ಟುಕೊಂಡಿದ್ದಾರೆ. ಭಕ್ತಿಯಿಂದ ಸೇವೆ ಸಲ್ಲಿಸುತ್ತಾರೆ. ರಾತ್ರಿ ವೇಳೆ ತೆಂಗಿನ ಗರಿಗಳಿಂದ ಮಾಡಿದ ಚಾಪೆ ಮೇಲೆ ನಿದ್ರಿಸುತ್ತಾರೆ. ಮಾಂಸಾಹಾರ ಸಂಪೂರ್ಣ ವರ್ಜ್ಯ.ಸಸ್ಯಾಹಾರ ಹಾಗೂ ಶುಚಿತ್ವಕ್ಕೆ ಮಹತ್ವ ನೀಡುತ್ತಾರೆ.