Advertisement

ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಸಿದ್ಧತೆ

04:40 PM Dec 21, 2018 | |

ಕಲಬುರಗಿ: ಜಿಲ್ಲೆಯ ಎಲ್ಲ ಸರ್ಕಾರಿ ಇಲಾಖೆಗಳಲ್ಲಿರುವ ಕ್ರೀಡಾಪಟುಗಳು ಕಡ್ಡಾಯವಾಗಿ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್‌. ರಾಚಪ್ಪ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ಮಟ್ಟದ ಎಲ್ಲ ಸರ್ಕಾರಿ ಇಲಾಖೆಗಳಿಗೆ ಮುಂಚಿತವಾಗಿ ಕ್ರೀಡಾಕೂಟದ ದಿನಾಂಕ, ಮಾಹಿತಿ ನೀಡಬೇಕು. ಅಂದರೆ ಸ್ಪರ್ಧೆಗಳಿಗೆ ಸಿದ್ಧತೆಮಾಡಿಕೊಳ್ಳಲು ಅನುಕೂಲವಾಗುವುದು ಎಂದರು.

ನೌಕರ ಸಂಘದ ಸದಸ್ಯರು ಎಲ್ಲ ಇಲಾಖೆಗಳಲ್ಲಿದ್ದಾರೆ. ಅವರು ತಮ್ಮ ಕಚೇರಿಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವವರ ಪಟ್ಟಿಯನ್ನು ಕ್ರೀಡಾ ಇಲಾಖೆಗೆ ಸಲ್ಲಿಸಬೇಕು. ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಕ್ರೀಡೆಗಳು ನಡೆಯಲಿವೆ. ಮಹಾನಗರ ಪಾಲಿಕೆಯಿಂದ ಕ್ರೀಡಾಂಗಣವನ್ನು ಸ್ವತ್ಛಗೊಳಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮ ಉದ್ಘಾಟನೆಗೆ ಸಚಿವರು, ಶಾಸಕರು, ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಶೀಘ್ರವೇ ಕ್ರೀಡಾಕೂಟದ ದಿನಾಂಕ ನಿಗದಿಪಡಿಸಿ ಎಲ್ಲರಿಗೂ ತಿಳಿಸಬೇಕು ಎಂದರು.

ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭೀಮರಾವ ನಾಂದ್ರೆ ಮಾತನಾಡಿ, 45 ವರ್ಷ ಒಳಪಟ್ಟ ಪುರುಷರಿಗೆ ಓಟ, ಉದ್ದಜಿಗಿತ, ಡಿಸ್ಕಸ್‌ ಎಸೆತ, ಜಾವೆಲಿನ್‌ ಎಸೆತ, ರಿಲೇ, ಹಾಪ್‌ ಸ್ಟೆಪ್‌ ಜಂಪ್‌, ಹ್ಯಾಮರ್‌
ಥ್ರೋ, ಎತ್ತರ ಜಿಗಿತ, ಗುಂಡು ಎಸೆತ ಸ್ಪರ್ದೆಗಳು, 45 ವರ್ಷ ಮೇಲ್ಪಟ್ಟ ಪುರುಷರಿಗೆ ಓಟ, ಗುಂಡು ಎಸೆತ, ಡಿಸ್ಕಸ್‌ ಎಸೆತ ಸ್ಪರ್ದೆಗಳನ್ನು, 40 ವರ್ಷ ಒಳಪಟ್ಟ ಮಹಿಳೆಯರಿಗೆ ಓಟ, ಉದ್ದಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಡಿಸ್ಕಸ್‌ ಎಸೆತ, ಜಾವೆಲಿನ್‌ ಎಸೆತ, ರಿಲೇ ಸ್ಪರ್ದೆಗಳನ್ನು, 40ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಓಟ, ಗುಂಡು ಎಸೆತ, ಡಿಸ್ಕಸ್‌ ಎಸೆತ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದರು.
 
ಗುಂಪು ಆಟಗಳಲ್ಲಿ ಪುರುಷರಿಗೆ ಫುಟ್‌ಬಾಲ್‌, ವಾಲಿಬಾಲ್‌, ಹಾಕಿ, ಕಬ್ಬಡ್ಡಿ, ಟೇಬಲ್‌ ಟೆನ್ನಿಸ್‌ ಸಿಂಗಲ್ಸ್‌ ಮತ್ತು ಡಬಲ್ಸ್‌, ಬ್ಯಾಡ್ಮಿಂಟನ್‌, ಕೇರಂ, ಕ್ರಿಕೆಟ್‌, ಬಾಸ್ಕೆಟ್‌ಬಾಲ್‌, ಚೆಸ್‌, ಬಾಲ್‌ಬಾಡ್ಮಿಂಟನ್‌, ಈಜು ಸ್ಪರ್ಧೆಗಳನ್ನು, ಮಹಿಳೆಯರಿಗೆ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಮತ್ತು ಡಬಲ್ಸ್‌, ಟೇಬಲ್‌ ಟೆನ್ನಿಸ್‌ ಸಿಂಗಲ್ಸ್‌ ಮತ್ತು ಡಬಲ್ಸ್‌, ಕೇರಂ ಸಿಂಗಲ್ಸ್‌ ಮತ್ತು ಡಬಲ್ಸ್‌,
ಟೆನಿಕಾಯ್‌r ಸಿಂಗಲ್ಸ್‌ ಮತ್ತು ಡಬಲ್ಸ್‌, ಥ್ರೋಬಾಲ್‌ ಹಾಗೂ ಈಜು ಸ್ಪರ್ಧೆ ಏರ್ಪಡಿಸಲಾಗುವುದು. ವೈಯಕ್ತಿಕ ಸ್ಪರ್ಧೆಗಳಲ್ಲಿ ಪುರುಷರಿಗೆ ಕುಸ್ತಿ, ಭಾರ ಎತ್ತುವಿಕೆ, ಪವರ್‌ ಲಿಪ್ಟಿಂಗ್‌, ಉತ್ತಮ ದೇಹರ್ದಾಡ್ಯ ಸ್ಪರ್ದೆಗಳನ್ನು ಏರ್ಪಡಿಸಲಾಗುವುದು ಎಂದರು. 

ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹಿಂದೂಸ್ತಾನಿ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜಾನಪದ ನೃತ್ಯ, ಭರತನಾಟ್ಯ, ಕಥಕ್‌, ಕಥಕಳಿ. ಮಣಿಪುರಿ, ಕೂಚುಪುಡಿ, ಓಡಿಸ್ಸಿ ನೃತ್ಯ, ವಾದ್ಯ ಸಂಗೀತ, ಜಾನಪದ ಗೀತೆಗಳು, ಕರಕುಶಲ ವಸ್ತುಗಳ ಪದರ್ಶನ, ಕಿರುನಾಟಕ. ಸಂಗೀತ, ಚೆಸ್‌ ಮತ್ತು ನಾಟಕ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು. ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next