Advertisement

ಕೋವಿಡ್‌ ಲಸಿಕೆ ವಿತರಣೆಗೆ ಸನ್ನದ್ಧರಾಗಿ

03:36 PM Dec 09, 2020 | Suhan S |

ಜಗಳೂರು: ಕೋವಿಡ್ ಲಸಿಕೆ ವಿತರಣೆಗೆ ತಾಲೂಕು ಮಟ್ಟದ ಅಧಿಕಾರಿಗಳು ಸಮರೋಪಾದಿಯಲ್ಲಿಕಾರ್ಯ ನಿರ್ವಹಿಸಬೇಕು ಎಂದು ತಹಶೀಲ್ದಾರ್‌ ಡಾ| ನಾಗವೇಣಿ ಸೂಚಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆ ವತಿಯಿಂದ ನಡೆದ ಟಾಸ್ಕ್ ಫೋರ್ಸ್‌ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್‌ -19 ಲಸಿಕೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಲಸಿಕೆಯನ್ನುಮೊದಲು ಆರೋಗ್ಯ ಸೇವಾ ಕಾರ್ಯಕರ್ತೆಯರಿಗೆ ನೀಡಲಾಗುತ್ತದೆ.ನಂತರ ಎಲ್ಲಾ ವಾರಿಯರ್ಸ್ ಗೆ ನೀಡಲಾಗುವುದು. ಇದಾದ ಬಳಿಕ ಪ್ರತಿಯೊಬ್ಬ ನಾಗರಿಕರಿಗೆ ನೀಡುವ ಚಿಂತನೆಯನ್ನು ಸರ್ಕಾರ ಹೊಂದಿದೆ. ಹಾಗಾಗಿ ತಾಲೂಕು ಮಟ್ಟದಲ್ಲಿ ಲಸಿಕೆ ವಿತರಿಸುವ ಸಂದರ್ಭದಲ್ಲಿ ಟಾಸ್ಕ್ ಫೋಸ್‌ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕಾರ ನೀಡಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಜಿ.ಒ. ನಾಗರಾಜ್‌ ಮಾತನಾಡಿ, ಲಸಿಕೆ ಬಗೆಗಿನ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು.ಗ್ರಾಪಂ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸರ್ಕಾರ ಸೂಚನೆ ನೀಡಿದೆ. ಇತರೆಲಸಿಕೆ ಕಾರ್ಯಕ್ರಮಗಳನ್ನು ಎಂದಿನಂತೆ ನಡೆಸಲಾಗುವುದು ಎಂದರು.

ಸಭೆಯಲ್ಲಿ ತಾಪಂ ಇಒ ಮಲ್ಲಾ ನಾಯ್ಕ, ಸರಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ| ನೀರಜ್‌, ಬೆಸ್ಕಾಂ ಎಇಇ ಪ್ರವೀಣ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಹೇಮೋಜಿ ನಾಯ್ಕ, ಪಶು ಸಂಗೋಪನೆ ಇಲಾಖೆಯ ಲಿಂಗರಾಜ್‌, ಪಪಂನ ಸಂತೋಷ್‌ಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

ಶಾಂತಮ್ಮ ಹರಿಹರ ತಾಪಂ ಉಪಾಧ್ಯಕ್ಷೆ  :

Advertisement

ಹರಿಹರ: ತಾಲೂಕು ಪಂಚಾಯಿತಿ ನೂತನ ಉಪಾಧ್ಯಕ್ಷೆಯಾಗಿ ಎಳೆಹೊಳೆ ಕ್ಷೇತ್ರದ ಸದಸ್ಯೆ ಮರಳಹಳ್ಳಿ ಶಾಂತಮ್ಮ ಗದಿಗೆಪ್ಪ ಅವಿರೋಧವಾಗಿ ಆಯ್ಕೆಯಾದರು.

ಜಯಮ್ಮ ಬಸಲಿಂಗಪ್ಪ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಶಾಂತಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಘೋಷಿಸಿದರು.

ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಆದಾಪುರ ವೀರಭದ್ರಪ್ಪ, ತಾಪಂ ಸದಸ್ಯರಾದ ರತ್ನಮ್ಮ ರಂಗಪ್ಪ, ಲಕ್ಷ್ಮೀ ಮಹಾಂತೇಶ್‌, ಭಾಗ್ಯಲಕ್ಷ್ಮೀ ಚಂದ್ರಪ್ಪ, ಜಯಮ್ಮ ಬಸಲಿಂಗಪ್ಪ ಗೌಡ್ರು, ಬಸಲಿಂಗಪ್ಪ ಎಂ.ಪಿ., ಬಸವನಗೌಡ ಮತ್ತಿತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next