Advertisement
ಬದಲಾದ ಪರೀಕ್ಷಾ ಪದ್ಧತಿಯಲ್ಲಿ ಜಿಲ್ಲೆಯಲ್ಲಿ 77 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ. ಈ ಮೊದಲು 51 ಕೇಂದ್ರಗಳಿದ್ದವು. ಈಗ 26 ಹೊಸ ಕೇಂದ್ರಗಳನ್ನು ರಚನೆ ಮಾಡಿದೆ. 289 ಪ್ರೌಢ ಶಾಲೆಗಳಿಂದ ಒಟ್ಟು 14,380 ಮಕ್ಕಳು ಬರೆಯಲಿದ್ದಾರೆ. ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರತೀ ಕೇಂದ್ರದಲ್ಲಿ ಒಂದು ಮೀಸಲು ಕೊಠಡಿ ಇರುತ್ತದೆ.
Related Articles
Advertisement
ಜೂ. 1ರಿಂದ 14ರ ವರೆಗೆ ತಾಲೂಕು ಹಂತದ ಮುಖ್ಯ ಶಿಕ್ಷಕರ ಗೂಗಲ್ ಮೀಟ್ ಅನ್ನು ಡಿಡಿಪಿಐ, ಬಿಇಒ ನಡೆಸುತ್ತಿದ್ದಾರೆ. ಪ್ರತೀ ಶಾಲೆಯ ವಿಷಯ ಶಿಕ್ಷಕರು ತಮ್ಮ ಶಾಲೆಯ ಮಕ್ಕಳಿಗೆ ಬದಲಾದ ಪರೀಕ್ಷಾ ಪದ್ಧತಿಯ ಕುರಿತು ಹಾಗೂ ಕಲಿಕಾ ವಿಧಾನದ ಬಗ್ಗೆ ತಿಳಿಸುತ್ತಿದ್ದಾರೆ. ಜೂ. 15ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ಡಿಡಿಪಿಐ ಅಧ್ಯಕ್ಷತೆಯಲ್ಲಿ ಫೋನ್ ಇನ್ ಕಾರ್ಯಕ್ರಮ ನಡೆಸಿ ಪಾಲಕರಿಗೆ, ಮಕ್ಕಳಿಗೆ ಈ ಪರೀಕ್ಷೆಯ ಬಗ್ಗೆ ತಿಳಿಸಿಕೊಡಲಾಗುತ್ತದೆ.
ಆನ್‌ಲೈನ್ ಕಲಿಕೆ :
2021-22ನೇ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿಯಿಂದ 10ನೇ ತರಗತಿಗಳಿಗೆ ಆನ್‌ಲೈನ್ ಮೂಲಕ ಕಲಿಕೆಯನ್ನು ಮಾಡುವ ವಿಧಾನವನ್ನು ವಿಷಯವಾರು ಆನ್‌ಲೈನ್ ವಿಧಾನದ ಬೋಧನೆಗೆ ಆನ್‌ಲೈನ್ ಚಟುವಟಿಕೆಗಳ ಮೂಲಕ ಕಲಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೂ.15ರಿಂದ ಶಾಲಾ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಶಿಕ್ಷಕರು ಬೋಧನೆಗೆ ಸಿದ್ಧತೆ ಮಾಡುತ್ತಿದ್ದಾರೆ. ಜು.1ರಿಂದ ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಬೋಧನಾ ಕಾರ್ಯ ಆರಂಭವಾಗಲಿದೆ.
ಜಿಲ್ಲೆಯಲ್ಲಿನ ಹೊಸ ಪರೀಕ್ಷಾ ಕೇಂದ್ರಗಳು :
ಬ್ರಹ್ಮಾವರ :
ನಿರ್ಮಲಾ ಪ್ರೌಢ ಶಾಲೆ, ಬ್ರಹ್ಮಾವರ
ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆ, ಕಲ್ಯಾಣಪುರ
ಕರ್ನಾಟಕ ಪಬ್ಲಿಕ್ ಶಾಲೆ, ಕೊಕ್ಕರ್ಣೆ
ಬೈಂದೂರು :
ಎಚ್.ಎಂ.ಎಂ.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆ, ಬೈಂದೂರು
ತೌಹೀದ ಆಂಗ್ಲ ಮಾಧ್ಯಮ ಶಾಲೆ, ಶಿರೂರು
ಸಂದೀಪನ್ ಅಂಗ್ಲ ಮಾಧ್ಯಮ ಶಾಲೆ, ಕಂಬದಕೋಣೆ
ಶ್ರೀ ಮೂಕಾಂಬಿಕಾ ಪ್ರೌಢ ಶಾಲೆ, ಮಾವಿನಕಟ್ಟೆ
ಗ್ರೆಗರಿ ಪ್ರೌಢ ಶಾಲೆ, ನಾಡ
ಕಾರ್ಕಳ :
ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕಾರ್ಕಳ
ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ, ಗಣಿತನಗರ ಕುಕ್ಕುಂದೂರು
ಕರ್ನಾಟಕ ಪಬ್ಲಿಕ್ ಶಾಲೆ, ಹೊಸಮಾರು
ಸಂತ ಜೋಸೆಫ್ ಪ್ರೌಢ ಶಾಲೆ, ಬೆಳ್ಮಣ್
ಜ್ಯೋತಿ ಪ್ರೌಢ ಶಾಲೆ, ಅಜೆಕಾರು
ಸರಕಾರಿ ಪದವಿ ಕಾಲೇಜು ಹೆಬ್ರಿ
ಕುಂದಾಪುರ :
ಸರಕಾರಿ ಪದವಿಪೂರ್ವ
ಕಾಲೇಜು ತೆಕ್ಕಟ್ಟೆ
ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಸಿದ್ದಾಪುರ
ಮದರ್‌ತೆರೆಸಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಶಂಕರನಾರಾಯಣ
ಶಾರದಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬಸ್ರೂರು
ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕುಂದಾಪುರ (ಖಾಸಗಿ ಅಭ್ಯರ್ಥಿ ಕೇಂದ್ರ)
ಉಡುಪಿ :
ಸರಕಾರಿ ಪ.ಪೂ.ಕಾಲೇಜು, ಉಡುಪಿ
ಮಹಿಳೆಯರ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು
ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕುಂಜಿಬೆಟ್ಟು
ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಮೂಳೂರು
ದಂಡತೀರ್ಥ ಆಂಗ್ಲ ಮಾಧ್ಯಯ ಪ್ರೌಢ ಶಾಲೆ, ಉಳಿಯಾರಗೋಳಿ, ಕಾಪು
ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಉದ್ಯಾವರ
ಸೈಂಟ್ ಜೋನ್ಸ್ ಪ್ರೌಢ ಶಾಲೆ, ಶಂಕರಪುರ
ಜುಲೈ 3ನೇ ವಾರದಿಂದ ಪರೀಕ್ಷೆ ಆರಂಭ ವಾಗುವ ಸಾಧ್ಯತೆ ಇದೆ. ಈಗಾಗಲೇ ಪ್ರತೀ ಶಾಲಾವಾರು ಗೂಗಲ್ ಮೀಟ್ ಮಾಡಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮಾಹಿತಿ ನೀಡಲಾಗುತ್ತಿದೆ. ಕೋವಿಡ್ ಕಾರಣ ದಿಂದಾಗಿ ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ 26 ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ಕಳೆದ ಬಾರಿ 51 ಪರೀಕ್ಷಾ ಕೇಂದ್ರಗಳಿತ್ತು. ಈ ಬಾರಿ 77 ಪರೀಕ್ಷಾ ಕೇಂದ್ರಗಳಿವೆ. -ಎನ್.ಎಚ್. ನಾಗೂರ, ಡಿಡಿಪಿಐ ಉಡುಪಿ