Advertisement
ಕಳೆದ ಭಾನುವಾರ (ಅ.30) ನಾಪತ್ತೆಯಾಗಿದ್ದ ಚಂದ್ರಶೇಖರ್ ಅವರು ಗುರುವಾರ ಎಚ್. ಕಡದಕಟ್ಟೆ ತುಂಗಾ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಗುರುವಾರ ರಾತ್ರಿಯೇ ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ತಡರಾತ್ರಿಯೇ ಪಾರ್ಥಿವ ಶರೀರವನ್ನು ಹೊನ್ನಾಳಿಗೆ ತೆಗೆದುಕೊಂಡು ಹೋಗಿ ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು.
Related Articles
Advertisement
ಹೊನ್ನಾಳಿಯ ಹಿರೇಮಠದ ವೃತ್ತದಿಂದ, ಮರಳೋಣಿ ರಸ್ತೆ, ದುರ್ಗಿಗುಡಿ ಸರ್ಕಲ್ ನಿಂದ ಪೇಟೆ ಹಳದಮ್ಮ ದೇಸ್ಥಾನದಿಂದ ಕೆನರಾಬ್ಯಾಂಕ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ದೇವನಾಯ್ಕನಹಳ್ಳಿ, ಗೊಲ್ಲರಹಳ್ಳಿ ಮಾರ್ಗವಾಗಿ ಮಾಸಡಿ, ತರಗನಹಳ್ಳಿ ಸಿಂಗಟಗೆರೆ, ಹನುಮನಹಳ್ಳಿಗೆ ಪಾರ್ಥಿವ ಶರೀರ ತಲುಪಿದೆ. ಬಳಿಕ ರೇಣುಕಾಚಾರ್ಯರ ಹುಟ್ಟೂರು ಕುಂದೂರು ತಲುಪಿ, ಕುಂದೂರಿನ ಪ್ರಮುಖ ರಸ್ತೆಯಲ್ಲಿ ಅಂತಿಮ ಯಾತ್ರೆ ನಡೆಯಲಿದೆ.
ಕುಂದೂರಿನಲ್ಲಿರುವ ರೇಣುಕಾಚಾರ್ಯರ ತೆಂಗಿನತೋಟದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ರೇಣುಕಾಚಾರ್ಯರ ತಂದೆ, ತಾಯಿ ಹಾಗೂ ಚಂದ್ರುವಿನ ಅಜ್ಜ ಅಜ್ಜಿಯ ಸಮಾಧಿ ಮಧ್ಯೆ ಅಂತ್ಯಕ್ರಿಯೆ ನಡೆಯಲಿದೆ. ಕುಂದೂರಿನಲ್ಲಿ ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಜನರು ಮುಚ್ಚಿದ್ದಾರೆ. ಬಂದ್ ವಾತಾವರಣ ನಿರ್ಮಾಣವಾಗಿದೆ.