Advertisement
ಅ. 3ರಂದು ಅಧಿಕೃತ ಚಾಲನೆ: ಅ. 3ರಂದು ಬೆಳಗ್ಗೆ 9.30ಕ್ಕೆ ಶಾಲಿನಿ ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ನವದುರ್ಗೆಯರು ಮತ್ತು ಶಾರದ ಮಾತೆಯ ವಿಗ್ರಹ ಪ್ರತಿಷ್ಠಾಪನೆ, 10.30ಕ್ಕೆ ಜಿಲ್ಲಾಧಿಕಾರಿ ಸಹಿತ ಗಣ್ಯರು ಉಚ್ಚಿಲ ದಸರಾಕ್ಕೆ ಚಾಲನೆ ನೀಡಲಿದ್ದಾರೆ.
ಅ. 3ರಿಂದ 12ರ ವರೆಗೆ ಪ್ರತಿದಿನ ಬೆಳಗ್ಗೆ ಚಂಡಿಕಾ ಹೋಮ, ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಭಜನೆ, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಾವಿರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ಶ್ರೀದುರ್ಗಾ ಕಲೊ³àಕ್ತ ಪೂಜೆ, ಪ್ರಸಾದ ವಿತರಣೆ, ಆಕರ್ಷಕ ಲೇಸರ್ ಶೋ ಮತ್ತು ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆಯಲಿವೆ.
Related Articles
ಅ. 12ರಂದು ಸಂಜೆ ಉಚ್ಚಿಲ – ಎರ್ಮಾಳು – ಉಚ್ಚಿಲ – ಮೂಳೂರು – ಕಾಪುವಿ ವರೆಗೆ ವೈಭವದ ಶೋಭಾಯಾತ್ರೆ ನಡೆದು ಕಾಪು ಲೈಟ್ ಹೌಸ್ ಬಳಿಯ ಕಡಲ ಕಿನಾರೆಯಲ್ಲಿ ಸುಮಂಗಲೆಯರಿಂದ ಮಹಾಮಂಗಳಾರತಿ, ಬೃಹತ್ ಗಂಗಾರತಿ, ಲೇಸರ್ ಶೋ, ಮ್ಯೂಸಿಕಲ್ ನೈಟ್ ಸಹಿತವಾಗಿ ರಾತ್ರಿ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಜಲಸ್ತಂಭನ ನಡೆಯಲಿದೆ.
Advertisement
ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದೊಂದಿಗೆ ನಡೆಯುವ 3ನೇ ವರ್ಷದ ಉಚ್ಚಿಲ ದಸರಾ ಪ್ರಯುಕ್ತ ಅ.3ರಂದು ಸಂಜೆ ನೃತ್ಯ ಸ್ಪರ್ಧೆ, ಅ. 5ರಂದು ಬೆಳಗ್ಗೆ ಮಕ್ಕಳಿಗಾಗಿ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಮಧ್ಯಾಹ್ನ ಚಿತ್ರಕಲಾ ಸ್ಪರ್ಧೆ, ಸಂಜೆ ಸಾಮೂಹಿಕ ಕುಣಿತ ಭಜನೆ, ಶ್ರೀ ರಾಮ ಹನುಮಂತ ನೃತ್ಯ ರೂಪಕ, ಅ. 6ರಂದು ಬೆಳಗ್ಗೆ ಕುಸ್ತಿ ಸ್ಪರ್ಧೆ, ಮಧ್ಯಾಹ್ನ ಹೆಣ್ಮಕ್ಕಳ ಹುಲಿಕುಣಿತ ಸ್ಪರ್ಧೆ, ಸಂಜೆ ಸಾಮೂಹಿಕ ದಾಂಡಿಯಾ ನೃತ್ಯ, ವಿಸ್ಮಯ ಜಾದೂ, ಅ. 7ರಂದು ಮಧ್ಯಾಹ್ನ ಮಹಿಳೆಯರಿಗೆ ಮತ್ತು ಪುರುಷರಿಗೆ ರಂಗೋಲಿ ಸ್ಪರ್ಧೆ, ಶತವೀಣಾವಲ್ಲರಿ, ಅ. 10ರಂದು ದೇಹದಾರ್ಢ್ಯ ಸ್ಪರ್ಧೆ, ಅ. 11ರಂದು ಅಜಯ್ ವಾರಿಯರ್ ಮತ್ತು ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ.