Advertisement

ಪಲ್ಸ್‌ ಪೋಲಿಯೋಗೆ ಪೂರ್ವ ಸಿದ್ಧತೆ: ವೈಶಾಲಿ

05:01 PM Jan 30, 2021 | Team Udayavani |

ಶಿವಮೊಗ್ಗ: ಜ. 31ರಂದು ಪ್ರಸಕ್ತ ಸಾಲಿನ ಮೊದಲ ಹಂತದ ಪಲ್ಸ್‌ ಪೋಲಿಯೋ ಲಸಿಕೆಯನ್ನು ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶದ 91,415 ಮತ್ತು ನಗರ ಪ್ರದೇಶದ 5 ವರ್ಷದೊಳಗಿನ 44,423 ಮಕ್ಕಳಿಗೆ ಹಾಕುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅ ಧಿಕಾರಿ ಎಂ.ಎಲ್‌. ವೈಶಾಲಿ ಹೇಳಿದರು. ಜಿಪಂ ಅಬ್ದುಲ್‌ ನಜೀರ್‌ಸಾಬ್‌ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೋಲಿಯೋ ಲಸಿಕಾ ಆಂದೋಲನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

200ಕ್ಕಿಂತ ಹೆಚ್ಚಿನ ಸಂಖ್ಯೆಯ ಮಕ್ಕಳಿರುವಲ್ಲಿ ಮತ್ತೂಂದು ಲಸಿಕಾ ಕೇಂದ್ರ ತೆರೆಯಲು ಕ್ರಮ ವಹಿಸಲಾಗುವುದು. ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ 1019 ಬೂತ್‌ಗಳನ್ನು ಹಾಗೂ ತಂಡಗಳನ್ನು ರಚಿಸಲಾಗಿದ್ದು, 3,472 ವ್ಯಾಕ್ಸಿನೇಟಸ್‌ ìಗಳನ್ನು ಬಳಸಿಕೊಳ್ಳಲಾಗುವುದು. 199 ಮೇಲ್ವಿಚಾರಕರು,33 ಟ್ರಾನ್ಸಿಟ್‌ ತಂಡ ಹಾಗೂ 22 ಸಂಚಾರಿ ತಂಡಗಳನ್ನು ರಚಿಸಿ,  ಅಧಿ ಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.

ಇದನ್ನೂ ಓದಿ:ಭೂದೇವಿ ಮಡಿಲಿಗೆ ಮನಗೂಳಿ ಮುತ್ಯಾ

ಇದಲ್ಲದೇ 557 ಆರೋಗ್ಯ ಸಿಬ್ಬಂದಿ  ಮತ್ತು ಮೇಲ್ವಿಚಾರಕರು, 2,418 ಅಂಗನವಾಡಿ ಮತ್ತು 13337 ಆಶಾ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 4312 ಸಿಬ್ಬಂ ದಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು.ಇವರೊಂದಿಗೆ 162  ಜನ ಕಾರ್ಯಕ್ರಮ ಅನುಷ್ಠಾನಾ ಧಿಕಾರಿಗಳು, ಉಸ್ತುವಾರಿ ಅಧಿ ಕಾರಿಗಳು ಮತ್ತು ವೈದ್ಯಾ ಧಿಕಾರಿಗಳು ಇರಲಿದ್ದಾರೆ ಎಂದು ತಿಳಿಸಿದರು. ಸಭೆಯಲ್ಲಿ ಡಾ| ರಘುನಂದನ್‌, ಡಾ| ನಾಗರಾಜ್‌, ಡಾ| ಶಂಕರಪ್ಪ, ಡಾ| ಪಿ.ನಾರಾಯಣ್‌, ಡಾ| ಶ್ರೀಧರ್‌, ಡಾ| ಶಮಾ, ಡಾ| ಶ್ರೀನಿವಾಸ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next