Advertisement
ಸರಿಯಾದ ಯೋಜನೆ ಇರಲಿ ನಮ್ಮ ಯಾವುದೇ ಚಟುವಟಿಕೆಗೆ ಒಂದು ನಿರ್ದಿಷ್ಟ ಪ್ಲ್ರಾನಿಂಗ್ ಕೈಗೊಂಡಾಗ ಸುಲಭವಾಗಿ ಮತ್ತು ದಿನದ ಎಲ್ಲ ಕೆಲಸಕ್ಕೂ ಸರಿಯಾದ ಸಮಯ ಹೊಂದಾಣಿಕೆ ಮಾಡಬಹುದು. ತರಾತುರಿಯಲ್ಲಿ ಕೈಗೊಂಡರೆ ಶರೀರದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವುದೇ ಜಾಸ್ತಿ.
ಯಾವುದೇ ಕಾರ್ಯ ಕೈಗೊಳ್ಳುವ ಮೊದಲಿಗೆ ಆ ಕಾರ್ಯದ ಬಗ್ಗೆ ದೃಢ ಮನಸ್ಥಿತಿ ಬಹಳ ಮುಖ್ಯ. ನಾನು ವ್ಯಾಯಾಮ ಮಾಡಬೇಕು ಎಂಬ ದೃಢ ಮನಸ್ಸು, ಏಕಾಗ್ರತೆ ಬಹಳ ಮುಖ್ಯ. ವಕೌìಟ್ ಎಂದಿಗೂ ಹೊರೆ ಎನಿಸದಿರಲಿ. ಮನಸ್ಸಿನಲ್ಲಿ ತೃಪ್ತಿ ಇಲ್ಲದೆ ಮಾಡಿದ ವ್ಯಾಯಾಮ ವ್ಯರ್ಥ. ಸ್ಥಳಗಳ ಆಯ್ಕೆ
ವ್ಯಾ ಯಾಮದ ಚಟುವಟಿಕೆಗೆ ಸ್ಥಳಗಳ ಆಯ್ಕೆಗೆ ಮೊದಲ ಆದ್ಯತೆಯನ್ನು ನೀಡಬೇಕು. ಹೊರಾಂಗಣ ಸೂಕ್ತವೇ ಇಲ್ಲವೇ ಜಿಮ್, ಮನೆಗಳಲ್ಲೇ ಒಳಾಂಗಣ ಸ್ಥಳಗಳು ಸಾಕೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ಇಲ್ಲಿ ಜಾಗಿಂಗ್, ವಾಕಿಂಗ್‌ನಂತಹ ವ್ಯಾಯಾವಗಳು ಮುಖ್ಯವಾಗಿ ಹೊರಾಂಗಣ ಸೂಕ್ತ. ಬೆಳಗ್ಗೆ ಬೇಗ,ಸಂಜೆ ವ್ಯಾಯಮಕ್ಕೆ ಸೂಕ್ತ ಸಮಯ.
Related Articles
Advertisement
ಇವುಗಳ ಜತೆಗೆ ಸ್ವಚ್ಛತೆಯನ್ನು ಕಾಪಾಡಿ. ವಕೌìಟ್ ಮಾಡುವಾಗ ಬೆವರು ಒರೆ ಸಲು ಸದಾ ಟವೆಲ್ ಬಳಿ ಇರಲಿ. ಪ್ರತಿ ವಕೌìಟ್‌ನ ನಂತರ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸ.
ವಾರ್ಮ್ಅಪ್ವಕೌìಟ್ ಮುಂಚೆ ವಾರ್ಮ್ ಅಪ್ ಅತ್ಯಾವಶ್ಯಕ. ಸ್ನಾಯುಗಳನ್ನು ಸಡಿಲಗೊಳಿಸಲು ಜಾಗಿಂಗ್, ಸ್ಟ್ರೆಚಿಂಗ್ ನಂತಹ ವಾರ್ಮ್ ಆಪ್ ಸಹಕಾರಿ. ಇದರಿಂದ ಭಾರೀ ವ್ಯಾಯಾಮದ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಸ್ನಾಯುಗಳು ಮತ್ತು ದೇಹ ಪಡೆದು ಕೊಳ್ಳುತ್ತದೆ. ವಕೌìಟ್ ಮುಂಚೆ ವಾರ್ಮ್ ಅಪ್ ಎಷ್ಟು ಮುಖ್ಯವೋ ಕೂಲ್ ಡೌನ್ ಕೂಡ ಅಷ್ಟೇ ಮುಖ್ಯ.ಸ್ನಾಯು,ದೇಹದ ಮೇಲೆ ಆಗಿರುವ ಒತ್ತಡ ಕಡಿಮೆ ಮಾಡಲು ಕೂಲ್ ಡೌನ್ ಅವಶ್ಯಕ. ವಿವಿಧತೆ ಇರಲಿ
ವ್ಯಾಯಾಮದಲ್ಲಿ ವಿವಿಧತೆ ಇರಲಿ. ವಾರದಲ್ಲಿ ಇಂತಹ ದಿನ ಈ ವ್ಯಾಯಾಮ ಎಂದು ನಿಗದಿಪಡಿಸುವುದು ಉತ್ತಮ.
ಸ್ವಿಮ್ಮಿಂಗ್, ಬೀಚ್ ಸೈಡ್ ವಾಲಿಬಾಲ್ ಲಾಂಗ್ ವಾಕ್ ಒಳಾಂಗಣ ವ್ಯಾಯಾಮಗಳಾದ ಏರೋಬಿಕ್ಸ್ , ಯೋಗ ವಿವಿಧ ಆಯ್ಕೆ ಇರಲಿ. -ಕಾರ್ತಿಕ್ ಚಿತ್ರಾಪುರ