Advertisement

ಅಕಾಲಿಕ ಮಳೆಗೆ ಭತ್ತ ಬೆಳೆ ನಾಶ

12:30 PM May 03, 2020 | mahesh |

ಬೆಂಗಳೂರು/ಗಂಗಾವತಿ/ಹೊಳೆನರಸೀಪುರ: ಶನಿವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಒಳನಾಡಿನ ಹೆಚ್ಚಿನ ಕಡೆ ಮತ್ತು ಕರಾವಳಿಯ ಒಂದೆರಡು ಕಡೆ ಮಳೆಯಾಗಿದೆ. ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಬಿದ್ದ 4 ಸೆಂ.ಮೀ. ಮಳೆ ರಾಜ್ಯದಲ್ಲಿಯೇ ಅತ್ಯಧಿಕವಾಗಿತ್ತು.

Advertisement

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಶ್ರೀರಾಮನಗರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಸುರಿದ ಅಕಾಲಿಕ ಮಳೆಗೆ ಭತ್ತ ಬೆಳೆ ನೆಲಕ್ಕುರುಳಿದ್ದು, ಅಪಾರ ಪ್ರಮಾಣದಲ್ಲಿ
ನಷ್ಟವುಂಟಾಗಿದೆ. ಕುಂಟೋಜಿ ಬರಗೂರು, ಮುಸ್ಟೂರು, ಅಂಜೂರಿಕ್ಯಾಂಪ್‌ ಕೊಕ್ಲೃಕಲ್‌ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಸುಮಾರು 300 ಎಕರೆ ಪ್ರದೇಶಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಸಂಪೂರ್ಣ ನೆಲಕ್ಕುರುಳಿದೆ. ಈ ಪ್ರದೇಶಕ್ಕೆ ಕಾರಟಗಿ ತಹಶೀಲ್ದಾರ್‌ ಕವಿತಾ ಭೇಟಿ ನೀಡಿ, ಸರ್ವೇ ಕಾರ್ಯ ಮಾಡುವಂತೆ ಸೂಚನೆ ನೀಡಿದ್ದಾರೆ.

20ಕ್ಕೂ ಮನೆಗಳಿಗೆ ಹಾನಿ: ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಹೋಬಳಿಗೆ ಸೇರಿದ ಗಂಜಿಗನಹಳ್ಳಿಯಲ್ಲಿ ಶುಕ್ರವಾರ ಬಿದ್ದ ಮಳೆಯಿಂದ 20ಕ್ಕೂ ಮನೆಗಳಿಗೆ ಹಾನಿಯಾಗಿದ್ದು, ಅಡಿಕೆ ಮರ ತೆಂಗಿನ ಮರ ಹಾಗೂ ಬಾಳೆ ಸಂಪೂರ್ಣವಾಗಿ ನೆಲಕಚ್ಚಿದೆ. ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಸುರಿದ ಮಳೆ ಪ್ರಮಾಣ ಹೀಗಿದೆ. (ಸೆಂ.ಮೀ.ಗಳಲ್ಲಿ) ಹೊಸದುರ್ಗ, ಕುಕನೂರು, ಯಲಬುರ್ಗಾ, ಮುನಿರಾಬಾದ್‌ ತಲಾ 3, ಚಿಕ್ಕಮಗಳೂರು, ಪಿರಿಯಾಪಟ್ಟಣ, ಆಲೂರು, ಕುಷ್ಟಗಿ, ಸುಬ್ರಹ್ಮಣ್ಯ ತಲಾ 2, ನಾಯಕನಹಟ್ಟಿ, ತೊಂಡೆಭಾವಿ,
ಕೃಷ್ಣರಾಜಸಾಗರ, ಬುಕ್ಕಪಟ್ಣ, ಚಿತ್ರದುರ್ಗ, ದೇವದುರ್ಗ, ಸುಳ್ಯ, ಧರ್ಮಸ್ಥಳ, ಮಾಗಡಿ ತಲಾ 1. ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 41.9 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಕರಾವಳಿಯ ಪಣಂಬೂರಿನಲ್ಲಿ 37 ಮತ್ತು ಮಂಗಳೂರು ವಿಮಾನ ನಿಲ್ದಾಣದಲ್ಲಿ 35 ಡಿ.ಸೆ. ತಾಪಮಾನ ದಾಖಲಾಗಿತ್ತು. ಸೋಮವಾರ ಬೆಳಗ್ಗಿನವರೆಗಿನ ಮುನ್ಸೂಚನೆಯಂತೆ ಕರಾವಳಿಯ ಕೆಲವು ಕಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next