Advertisement
ಅದರಲ್ಲಿ ಹಲವು ಕಥೆಗಳನ್ನು ಬೇಡ ಎಂದು ಬಿಟ್ಟಾಕಿ, ಒಳ್ಳೆಯ ಕಥೆಗಳಿಗೆ ಮಾತ್ರ ತನ್ನ ಮೊದಲ ಆದ್ಯತೆ ಎಂದು ತೀರ್ಮಾನ ಮಾಡಿ, ಆ ಪೈಕಿ ಸದ್ಯಕ್ಕೆ “ಲೈಫ್ ಜೊತೆಗೊಂದು ಸೆಲ್ಫಿ ಮಾತ್ರ ಒಪ್ಪಿಕೊಂಡಿದ್ದಾರೆ. “ಚೌಕ’ಗಿನ್ನ ಮುನ್ನ ಕಥೆ ಬೇರೆ ಇತ್ತು. ಆ ಚಿತ್ರ ಮಾಡಿದ ಮೇಲೆ ಜವಾಬ್ದಾರಿ ಜಾಸ್ತಿ ಆಗಿದೆ. ಆ ಚಿತ್ರದಲ್ಲಿ ಎರಡು ವಿಭಿನ್ನ ಶೇಡ್‌ಗಳಿರುವ ಪಾತ್ರವನ್ನು ಮಾಡಿದೆ. ಜನ ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಇನ್ನು ಮುಂದೆ ಬೇರೆ ತರಹದ ಪಾತ್ರಗಳನ್ನು ಮಾಡುವುದಕ್ಕೆ ತೀರ್ಮಾನ ಮಾಡಿದ್ದೇನೆ.
Related Articles
Advertisement
“ಬಹುತೇಕ ಹೊಸಬರೇ ಚಿತ್ರ ಮಾಡೋಣ ಅಂತ ಬರುತ್ತಿದ್ದಾರೆ. ಕೆಲವರು ತುಂಬಾ ಒಳ್ಳೆಯ ಕಥೆಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಆದರೆ, ಬರೀ ಕಥೆ ಇದ್ದರೆ ಸಿನಿಮಾ ಆಗುವುದಿಲ್ಲ. ಅದಕ್ಕೆ ಬ್ಯಾಕಪ್ ಆಗಿ ಒಳ್ಳೆಯ ನಿರ್ಮಾಪಕರು ಇರಬೇಕು. ನಾನು ಗಮನಿಸಿರುವಂತೆ ಎಷ್ಟೋ ಬಾರಿ ಒಳ್ಳೆಯ ಕಥೆಗಳಿಗೆ ಒಳ್ಳೆಯ ನಿರ್ಮಾಪಕರಿರುವುದಿಲ್ಲ, ಒಳ್ಳೆಯ ನಿರ್ಮಾಪಕರಿಗೆ ಒಳ್ಳೆಯ ಕಥೆಗಳು, ಚಿತ್ರಗಳು ಸಿಗುವುದಿಲ್ಲ. ಎಷ್ಟೋ ನಿರ್ಮಾಪಕರಿಗೆ ಸಿನಿಮಾ ಬಗ್ಗೆ ಗೊತ್ತಿರುವುದೇ ಇಲ್ಲ.
75 ಪರ್ಸೆಂಟ್ ಓಕೆ ಆದರೂ, ಒಂದು ಚಿತ್ರ ಮಾಡುವುದಕ್ಕೆ ಮುನ್ನುಗ್ಗಬಹುದು. ಆದರೆ, ಎಷ್ಟೋ ಚಿತ್ರಗಳಲ್ಲಿ ಎಲ್ಲವೂ ಸರಿಯಾಗಿದೆ ಅಂತ ಅನಿಸುವುದಿಲ್ಲ. ಸುಮ್ಮನೆ ಕಮಿಟ್ ಆದರೆ, ಅವರ ದುಡೂx ಹಾಳು, ನನ್ನ ಸಮಯಾನೂ ಹಾಳು ಅನ್ನೋ ಕಾರಣಕ್ಕೆ ನಾನು ಒಪ್ಪುವುದೇ ಇಲ್ಲ’ ಎನ್ನುತ್ತಾರೆ ಪ್ರೇಮ್. ಪ್ರೇಮ್ ಹೇಳುವಂತೆ ಅಪ್‌ಡೇಟ್ ಆಗದಿರುವುದೇ ಇದಕ್ಕೆಲ್ಲಾ ಕಾರಣವಂತೆ. “ಎಷ್ಟೋ ಜನ ಬಂದು ಕಥೆ ಹೇಳುತ್ತಾರೆ. ಅವರ್ಯಾರೂ ಅಪ್‌ಡೇಟ್ ಆಗಿರುವುದಿಲ್ಲ.
ಇವತ್ತಿನ ಸ್ಟೈಲ್, ನೇಟಿವಿಟಿಯ ಬಗ್ಗೆ ಯೋಚಿಸುವುದಿಲ್ಲ. ಸುಮ್ಮನೆ ಏನೋ ಮಾಡಿಕೊಂಡು ಬರುತ್ತಾರೆ. ನನಗೆ ಹೊಸಬರು, ಹಳಬರು ಅಂತ ಏನಿಲ್ಲ. ಸಿನಿಮಾ ಅಂದರೆ ನನ್ನ ಒಬ್ಬನ ಬದುಕು ಅಲ್ಲ. ಒಂದು ಸಿನಿಮಾ ಅಂದರೆ ಎಲ್ಲರಿಗೂ ಅದು ಕೆರಿಯರ್ ಆಗಿರುತ್ತದೆ. ಹಾಗಾಗಿ ಅದಕ್ಕೆ ನಿಷ್ಠರಾಗಿರಬೇಕು. ಒಂದು ಸಿನಿಮಾ ಸಿಗುತ್ತದೆ ಎಂದರೆ ಯಾರನ್ನೋ ಕಷ್ಟಕ್ಕೆ ಸಿಕ್ಕಿಸುವುದಕ್ಕೆ ನನಗೆ ಇಷ್ಟ ಇಲ್ಲ. ಒಂದು ಸಿನಿಮಾ ಅಂದರೆ ಮಿನಿಮಮ್ ಒಂದಿಷ್ಟು ಕೋಟಿ ಬೇಕು.
ಸರಿಯಾಗಿ ಪ್ಲಾನ್ ಮಾಡಿಕೊಂಡು ಬಂದರೆ ಓಕೆ. ನಾಳೆ ಆ ಹಣ ಸಿಕ್ಕಿಕೊಂಡರೆ, ಆಗ ಬರೀ ನನಗೆ ಕೆಟ್ಟ ಹೆಸರು ಬರುವುದಷ್ಟೇ ಅಲ್ಲ, ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತದೆ. ಸಿನಿಮಾದವರು ಸರಿ ಇಲ್ಲ ಎಂದು ಹೇಳಿಕೊಂಡು ಓಡಾಡಿದರೆ, ಅದರಿಂದ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ. ಹಾಗಾಗಿ ನಿರ್ದೇಶಕರಾಗಲೀ, ನಿರ್ಮಾಪಕರಾಗಲೀ ಮೊದಲು ಸರಿಯಾಗಿ ಹೋಂವರ್ಕ್ ಮಾಡಿಕೊಂಡು ಬರಬೇಕು. ನನ್ನ ಹತ್ತಿರ ಬರುವವರಿಗೆಲ್ಲಾ ಇದೇ ಹೇಳುತ್ತೇನೆ.
ಬರೀ ಹೆಸರು, ಜನಪ್ರಿಯತೆ, ಆಕರ್ಷಣೆಗೆ ಸಿನಿಮಾ ಮಾಡಬೇಡಿ, ಪೇಪರ್‌ನಲ್ಲಿ ಫೋಟೋ ಬರುತ್ತೆ ಅಂತ ಮಾಡಬೇಡಿ ಎಂದು ಹೇಳುತ್ತೇನೆ. ಕೆಲವರು ವಾಪಸ್ಸು ಬರುತ್ತಾರೆ. ಇನ್ನೂ ಕೆಲವರು ಅಲ್ಲೇ ಬ್ಯಾಕೌಟ್ ಆಗುತ್ತಾರೆ’ ಎನ್ನುತ್ತಾರೆ ಪ್ರೇಮ್. ಸಿನಿಮಾ ಅನ್ನೋದು ಯಾವತ್ತೂ ರಿಸ್ಕಾ ಎನ್ನುವುದು ಪ್ರೇಮ್ ಅಭಿಪ್ರಾಯ. “ಇಲ್ಲಿಗೆ ಬಂದ ಮೇಲೆ ರಿಸ್ಕ್ ಗ್ಯಾರಂಟಿ. ಎಷ್ಟೇ ಜಾಗರೂಕತೆ ವಹಿಸಿದರೂ 25 ಪರ್ಸೆಂಟ್ ರಿಸ್ಕ್ ಇದ್ದೇ ಇರುತ್ತದೆ.
ರಿಸ್ಕ್ ತೆಗೆದುಕೊಳ್ಳೋದು ಪರವಾಗಿಲ್ಲ ಎಂದರೆ ಓಕೆ. ಇಲ್ಲ ಕಷ್ಟ. ಬರೀ ಸಿನಿಮಾ ಮಾಡೋದಷ್ಟೇ ಅಲ್ಲ, ಅದನ್ನು ಜನರಿಗೆ ಮುಟ್ಟಿಸಬೇಕು. ಹಾಗೆ ಮುಟ್ಟಿಸಿದರೆ, ಜನ ಒಳ್ಳೆಯ ಮಾತಾಡಿದರೆ ಆಗ ಒಂದು ವಾರದಲ್ಲಿ ಎತ್ತಬಹುದು. ಇಲ್ಲ ಕಷ್ಟವಾಗುತ್ತೆ. ಇದೆಲ್ಲಕ್ಕೂ ಬೇಕಾಗಿರುವುದು ಒಳ್ಳೆಯ ಹೋಂವರ್ಕ್ ಮತ್ತು ಪ್ಲಾನಿಂಗ್. ಎಷ್ಟು ಹೋಂವರ್ಕ್ ಮತ್ತು ಪ್ಲಾನಿಂಗ್ ಮಾಡುತ್ತೇವೋ ಅಷ್ಟು ಒಳ್ಳೆಯದು. ಆದರೆ, ಆಗಲೇ ಹೇಳಿದ್ನಲ್ಲಾ. ಎಷ್ಟೋ ಜನ ಒಳ್ಳೆಯ ಕಥೆ ಮಾಡಿಕೊಂಡು ಬರ್ತಾರೆ, ಅವರಿಗೆ ಒಳ್ಳೆಯ ನಿರ್ಮಾಪಕರು ಸಿಗುವುದಿಲ್ಲ.
ತುಕಾಲಿ ಕಥೆಗೆ ಒಳ್ಳೆಯ ನಿರ್ಮಾಪಕರು ಸಿಕ್ಕಿಬಿಡುತ್ತಾರೆ. ಅವರು ಫ್ಯಾನ್ಸಿ ದುಡ್ಡು ಕೊಡೋದಕ್ಕೂ ರೆಡಿ. ಆದರೆ, ಅದರಿಂದ ಅವರೂ ಹಾಳು. ನಾವೂ ಹಾಳು. ಅವರಿಗೆ ಬುದ್ಧಿ ಹೇಳಿ ಕಳಿಸುವಷ್ಟರಲ್ಲಿ ಸುಸ್ತಾಗಿ ಬಿಟ್ಟಿರುತ್ತೇವೆ’ ಎಂದು ನಗುತ್ತಾರೆ ಪ್ರೇಮ್. ಈ ಮಧ್ಯೆ ಅವರ ಅಭಿನಯದ “ದಳಪತಿ’ ಬಿಡುಗಡೆಗೆ ಸಿದ್ಧವಾಗಿದೆ. ಆ ಚಿತ್ರ ಶುರುವಾಗಿದ್ದು ಮೂರು ವರ್ಷಗಳ ಹಿಂದೆ. ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಇದಲ್ಲದೆ ಇನ್ನೂ ಒಂದೆರೆಡು ಕಥೆಗಳನ್ನು ಓಕೆ ಮಾಡಿಟ್ಟಿದ್ದಾರಂತೆ ಪ್ರೇಮ್. “ಲೈಫ್ ಜೊತೆಗೊಂದು ಸೆಲ್ಫಿ’ ಚಿತ್ರದ ನಂತರ ಆ ಚಿತ್ರಗಳು ಶುರುವಾಗಲಿದೆ.
ಸಿನಿಮಾ ಜೊತೆಗೆ ಕೃಷಿಮುಂದಿನ ದಿನಗಳಲ್ಲಿ ಸಿನಿಮಾ ಜೊತೆಗೆ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಪ್ರೇಮ್ ಐಡಿಯಾ. “ಸಿನಿಮಾ ಜೊತೆಜೊತೆಗೆ ಜಮೀನು ತಗೊಂಡು ಕೃಷಿ ಮಾಡುವ ಯೋಚನೆ ಇದೆ. ಇಲ್ಲೇ ಬೆಂಗಳೂರು ಸುತ್ತಮುತ್ತ ಎಲ್ಲಾದರೂ ಜಮೀನು ಕೊಂಡುಕೊಳ್ಳುವ ಯೋಚನೆ ಇದೆ. ಇನ್ನು ಮುಂದೆ ಭೂಮಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಈಗಲಾದರೂ ನಮಗೆ ಬೆಳೆದುಕೊಳ್ಳುವಷ್ಟು ಒಂದು ಸಣ್ಣ ಜಮೀನು ಮಾಡುವ ಯೋಚನೆ ಇದೆ. ಹಾಗಂತ ಅದರಿಂದ ಸಿನಿಮಾಗೆ ತೊಂದರೆ ಆಗುವುದಿಲ್ಲ. ಒಳ್ಳೆಯ ಸ್ನೇಹಿತರಿದ್ದಾರೆ. ಅವರು ನೋಡಿಕೊಳ್ಳುತ್ತಾರೆ. ನನಗೆ ಸಮಯ ಇದ್ದಾಗ ಹೋಗಿ ಬರಿ¤àನಿ’ ಎನ್ನುತ್ತಾರೆ ಪ್ರೇಮ್.