ನಿರ್ದೇಶಕ ಪ್ರೇಮ್ ಲಾಕ್ ಡೌನ್‌ನಲ್ಲೂ ಸುಮ್ಮನೆ ಕುಳಿತಿಲ್ಲ. ತಮ್ಮ ಹೊಸ ಚಿತ್ರದ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಅದು ಏಕ್ ಲವ್ ಯಾ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಈ ಚಿತ್ರದ ಪೋಸ್ಟ್ ಪೊ›ಡಕ್ಷನ್ ಕೆಲಸಗಳಲ್ಲಿ ಪ್ರೇಮ್ ಬಿಝಿಯಾಗಿದ್ದಾರೆ. ಚಿತ್ರದ ಸಂಗೀತ, ಹಿನ್ನೆಲೆ ಸಂಗೀತದಲ್ಲಿ ಬಿಝಿಯಾಗಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ರಕ್ಷಿತಾ ಸಹೋದರ ರಾಣಾ ನಾಯಕನಾಗಿ, ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿತ್ತು. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದ್ದು, ವಿಲನ್ ನಂತರ ಪ್ರೇಮ್ ಮಾಡುತ್ತಿರುವ ಸಿನಿಮಾವಿದು.
ಅರ್ಜುನ್ ಫೋಟೋ ಹಂಚಿಕೊಂಡ ಪ್ರೇಮ್: ಕೊರೊನಾ ಲಾಕ್‌ಡೌನ್‌ನಿಂದ ಇಡೀ ಚಿತ್ರರಂಗವೇ ಸ್ತಬವಾಗಿತ್ತು. ಈಗ ಸ್ವಲ್ಪ ಮಟ್ಟಿಗೆ ಸಡಿಲಿಕೆ ಸಿಕ್ಕ ನಂತರ ಕೆಲ ಚಿತ್ರಗಳ ಚಟುವಟಿಕೆ ಆರಂಭವಾಗಿದೆ. ಅಂತೆಯೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಹಾಡುಗಳ ರಚನೆಯಲ್ಲಿ ಮಗ್ನರಾಗಿದ್ದಾರೆ. ಜೊತೆಗೆ ಲಾಕ್ ಡೌನ್‌ನಲ್ಲಿ ಗಡ್ಡಬಿಟ್ಟು ಜನ್ಯ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಅರ್ಜುನ್ ಜನ್ಯಾ ಅವರ ಈ ಫೋಟೋಗಳನ್ನು ಹಂಚಿಕೊಂಡಿರುವ ನಿರ್ದೇಶಕ ಪ್ರೇಮ್ ಅವರು, ಇವರು ಯಾರೋ ಹೊಸ ಸ್ವಾಮೀಜಿ ಎಂದು ಗೊಂದಲವಾಗಬೇಡಿ. ಇವರು ನಮ್ಮ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯನೇ ಅಪ್‌ಡೇಟ್ ಸಾಂಗ್‌ಗಳನ್ನು ಕೊಡುವುದರ ಜೊತೆಗೆ ಅವರ ಗೆಟಪ್ ಅನ್ನು ಕೂಡ ಆಪ್‌ಡೇಟ್ ಮಾಡಿಕೊಂಡಿದ್ದಾರೆ ಎಂದಿದ್ದಾರೆ. ಏಕ್ ಲವ್ ಯಾ ಸಿನಿಮಾದ ಹಾಡುಗಳ ರೆಕಾರ್ಡ್ ನಡೆಯುತ್ತಿದೆ. ಆಡಿಯೋ ಬಹುಬೇಗ ಬರಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಆರೋಗ್ಯ ಸಮಸ್ಯೆ ಬಳಲುತ್ತಿದ್ದ ಅರ್ಜುನ್ ಜನ್ಯಾ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದರು. ಈಗ ಸದ್ಯ ಲಾಕ್‌ಡೌನ್ ನಂತರ ಮತ್ತೆ ಕೆಲಸಕ್ಕೆ ವಾಪಸ್ ಆಗಿರುವ ಜನ್ಯ ಏಕ್ ಲವ್ ಯಾ ಸಿನಿಮಾದ ಹಾಡುಗಳನ್ನು ಸಿದಟಛಿಮಾಡುತ್ತಿದ್ದಾರೆ. ಈ ವೇಳೆ ಅವರು ತಮ್ಮ ಗೆಟಪ್ ಅನ್ನು ಚೆಂಚ್ ಮಾಡಿಕೊಂಡಿದ್ದು, ಕೆಂಪು ಪಂಚೆ, ಜೊತೆಗೆ ಕೆಂಪು ಪೇಟ ಹಾಕಿಕೊಂಡು ಬಿಳಿ ಬಣ್ಣದ ಶರ್ಟ್ ತೊಟ್ಟು ಸ್ವಾಮೀಜಿಯ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.