Advertisement

ಮೊಬೈಲ್‌ ಮೂಲಕ ಜೆಇಇ ಪೂರ್ವಭಾವಿ ಪರೀಕ್ಷೆ?

03:45 AM Apr 25, 2017 | Team Udayavani |

ನವದೆಹಲಿ:  ಜೆಇಇ ಪೂರ್ವಭಾವಿ ಪರೀಕ್ಷೆಯನ್ನು ಮೊಬೈಲ್‌ ಮೂಲಕ ನಡೆಸುವ ವಿಧಾನಕ್ಕೆ ಚಾಲನೆ ನೀಡಲು ಪರೀಕ್ಷಾ ಸುಧಾರಣಾ ಸಮಿತಿ ಮುಂದಾಗಿದೆ. ಈಗಾಗಲೇ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ) ಆಡಳಿತ ಮಂಡಳಿ ಜತೆ ಈ ಕುರಿತು ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಸಮಿತಿ ತಿಳಿಸಿದೆ.

Advertisement

ಈ ಯೋಜನೆ ಆರಂಭಿಕ ಹಂತದಲ್ಲಿದ್ದು, ಅನುಷ್ಠಾನಕ್ಕೆ ಇನ್ನೂ ಕಾಲಾವಕಾಶದ ಅಗತ್ಯವಿದೆ. ಅಲ್ಲದೆ, ಆಗು-ಹೋಗುಗಳ ಬಗ್ಗೆ ಚರ್ಚೆ ಆಗಬೇಕಿದೆ. ಇತ್ತೀಚೆಗೆ ನಡೆದ ಜಂಟಿ ನೋಂದಣಿ ಮಂಡಳಿ (ಜೆಎಬಿ) ಮತ್ತು ಐಐಟಿ ಕೌನ್ಸಿಲ್‌ ಸಭೆಯಲ್ಲಿ ಒಮ್ಮೆ ಚರ್ಚಿಸಲಾಗಿದೆ. ಇಂಜಿನಿಯ ರಿಂಗ್‌ ಕಾಲೇಜ್‌ ಪ್ರವೇಶಕ್ಕೂ ಮುನ್ನ ಪೂರ್ವಭಾವಿ ಪರೀಕ್ಷೆ ಬರೆಯಬೇಕಾಗುತ್ತದೆ. ಸದ್ಯಕ್ಕೆ ಶೇ.10ರಷ್ಟು ಮಾತ್ರ ಡಿಜಿಟಲೀಕರಣ ಆಗಿದೆ. 2 ಲಕ್ಷಕ್ಕೂ ಜಾಸ್ತಿ ವಿದ್ಯಾರ್ಥಿಗಳು ಪೂರ್ವಭಾವಿ ಪರೀಕ್ಷೆ ಬರೆಯುತ್ತಾರೆ. ಅಂದಾಜು 1.3 ಲಕ್ಷದಷ್ಟು ಮಂದಿ ಅಂತಿಮ ಪರೀಕ್ಷೆ ಬರೆಯುತ್ತಾರೆ. ಹೀಗಾಗಿ ಈ ವ್ಯವಸ್ಥೆ ಸಾಕಷ್ಟು ಅನುಕೂಲಕರ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next