ಮುಂಬಯಿ: ಬಲಿಷ್ಠ ರಾಯಲ್ ಚಾಲೆಂಜರ್ ಬೆಂಗಳೂರು ವಿರುದ್ಧ ಗೆಲುವಿಗೆ ಕಠಿನ ಸವಾಲು ಇದ್ದರೂ ಅದ್ಭುತವಾಗಿ ಹೋರಾಡಿ ತಂಡ ಐದು ವಿಕೆಟ್‌ಗಳ ಜಯಭೇರಿ ಬಾರಿಸಿದ್ದಕ್ಕೆ ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲಕಿ ಪ್ರೀತಿ ಝಿಂಟಾ ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೆ ನೀಡಿದ ಅವರು “ಹೊಸ ತಂಡ, ಹೊಸ ನಾಯಕ ಮತ್ತು ಹೊಸ ಅಭಿಮಾನಿಗಳು. ರನ್ ಚೇಸ್ ಮಾಡಿ ಅದ್ಭುತ ಗೆಲುವು ಸಾಧಿಸಿದ್ದಕ್ಕೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಥ್ಯಾಂಕ್ಸ್. ನನ್ನ ಅವಳಿ ಮಕ್ಕಳಾದ ಜೈ ಮತ್ತು ಜಿಯಾ ಅವರ ಮೊದಲ ಐಪಿಎಲ್ ಪಂದ್ಯವನ್ನು ಸ್ಮರಣೀಯಗೊಳಿಸಿದ್ದೀರಿ. ನನಗೆ ನಗುವನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬರೆದಿದ್ದಾರೆ.
ಇದನ್ನೂ ಓದಿ:ಗೆಲುವಿನ ಗಂಟೆ ಬಾರಿಸಿದ ಗುಜರಾತ್ ಟೈಟಾನ್ಸ್
ಜತೆಗೆ ಮಕ್ಕಳಿಬ್ಬರು ಟಿವಿ ಎದುರು ಪಂದ್ಯವನ್ನು ವೀಕ್ಷಿಸುತ್ತಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ. ಪ್ರೀತಿ ಮತ್ತು ಪತಿ ಜೆನೆ ಗೂಡೆನಾಗ್ ಅವರಿಗೆ ಕಳೆದ ವರ್ಷದ ನವೆಂಬರ್‌ನಲ್ಲಿ ಅವಳಿ ಮಕ್ಕಳು ಜನಿಸಿದ್ದರು.
ಪಂಜಾಬ್ ಮುಂದಿನ ಪಂದ್ಯದಲ್ಲಿ ಎಪ್ರಿಲ್ ಒಂದರಂದು ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಎದರಿಸಲಿದೆ.