Advertisement

1950ರ ಉಡುಗೆಯಲ್ಲಿ ಗರ್ಭಿಣಿ ಸೆರೆನಾ ಮಿಂಚು

12:40 PM Aug 08, 2017 | |

ನ್ಯೂಯಾರ್ಕ್‌: ವಿಶ್ವದ ಮಾಜಿ ನಂ.1 ಶ್ರೇಯಾಂಕಿತ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಗರ್ಭಿಣಿಯಾಗಿರುವುದು ಹಳೆ ಸುದ್ದಿ. ಇದೇ ಸಂಭ್ರಮಲ್ಲಿರುವ ಸೆರೆನಾ 1950ರ ಕಾಲದಲ್ಲಿ ಜನರು ತೊಡುವ ಉಡುಗೆಯನ್ನು ತೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ ಲೋಡ್‌ ಮಾಡಿದ್ದು, ಭಾರೀ ಪ್ರತಿಕ್ರಿಯೆಗಳು ಬರುತ್ತಿವೆ.

Advertisement

ಮೊದಲ ಮಗುವಿಗಾಗಿ ಕಾತರದಿಂದಿರುವ ಸೆರೆನಾ ತಮ್ಮ ಕುಟುಂಬ ಮತ್ತು ಸ್ನೇಹಿತರ ಜತೆ ಸಂಭ್ರಮ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸೆರೆನಾ ಹಳದಿ ಸ್ಕರ್ಟ್‌, ಕಪ್ಪು ಟಾಪ್‌ ಧರಿಸಿ ತಮ್ಮ ಕುಟುಂಬದವರು ಮತ್ತು ಸ್ನೇಹಿತರ ಜತೆ ಹಳೆಯ ಕಾರಿನ ಎದುರು ನಿಂತು ಚಿತ್ರ ತೆಗೆಸಿಕೊಂಡಿದ್ದಾರೆ. ಸೆರೆನಾ ಸ್ನೇಹಿತೆಯರು ಕೂಡ ಅದೇ ರೀತಿ 1950ರ ಮಾದರಿಯ ಉಡುಗೆಯನ್ನೇ ತೊಟ್ಟಿದ್ದಾರೆ. ಸೆರೆನಾ ಗರ್ಭಿಣಿಯಾಗಿರುವ ಬಗ್ಗೆ ಕಳೆದ ಏಪ್ರಿಲ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಸೆಲ್ಫಿ ಚಿತ್ರಹಾಕಿ ಪ್ರಕಟಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೆರೆನಾ, ನನ್ನ ಮಗು ಹೆಣ್ಣಾಗಲಿ, ಗಂಡಾಗಲಿ ನಾನು ಖುಷಿ ಪಡುತ್ತೇನೆ. ಈ ಬಗ್ಗೆ ಯಾವುದೇ ಷರತ್ತಿಲ್ಲ. ನಾನು ಯಾವತ್ತಿಗೂ ಮಹಿಳೆಯರ ಹಕ್ಕಿಗಾಗಿ ಧ್ವನಿ ಎತ್ತುವವಳು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next