Advertisement

ಎಸ್‌ಐ ದೈಹಿಕ ಪರೀಕ್ಷೆಯಲ್ಲಿ ಗರ್ಭಿಣಿ ಪಾಸ್‌!

10:59 PM Aug 13, 2021 | Team Udayavani |

ಕಲಬುರಗಿ:  ಎಸ್‌ಐ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಎರಡೂವರೆ ತಿಂಗಳ ಗರ್ಭಿಣಿಯೊಬ್ಬರು ಪಾಲ್ಗೊಂಡು 400 ಮೀಟರ್‌ ಓಟ ಸಹಿತ ಎಲ್ಲ ಪರೀಕ್ಷೆಯಲ್ಲೂ ಉತ್ತೀರ್ಣಗೊಂಡು ಗಮನ ಸೆಳೆದಿದ್ದಾರೆ.

Advertisement

ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ಲಖನಗಾಂವ ಗ್ರಾಮದ ನಿವಾಸಿಯಾಗಿರುವ 24 ವರ್ಷದ ಅಶ್ವಿ‌ನಿ ಕೋರೆ ಅವರು ಈ ಸಾಧನೆ ಮಾಡಿದವರು. ಅವರು ಆ. 10ರಂದು ನಗರದ ಪೊಲೀಸ್‌ ಮೈದಾನದಲ್ಲಿ ನಡೆದಿದ್ದ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ನೇಮಕಾತಿ ನಿಯಮಗಳ ಪ್ರಕಾರ ಎತ್ತರ ಮತ್ತು ತೂಕ ಪರೀಕ್ಷೆ ಜತೆಗೆ ಉದ್ದ ಜಿಗಿತ, ಗುಂಡು ಎಸೆತ, ಓಟದಲ್ಲೂ ಭಾಗವಹಿಸಿದ್ದರು.

ಎರಡು ನಿಮಿಷಗಳಲ್ಲಿ ಮುಗಿಸಬೇಕಿದ್ದ  400 ಮೀಟರ್‌ ಓಟವನ್ನು 1.36 ನಿಮಿಷದಲ್ಲಿ ಪೂರೈಸಿದ್ದಾರೆ.  ಬಿ.ಇ. ಪದವೀಧರೆ ಆಗಿರುವ ಅವರು ಈ ಹಿಂದೆಯೂ ಎರಡು ಬಾರಿ  ಎಸ್‌ಐ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡು ತೇರ್ಗಡೆ ಆಗಿದ್ದರು. ಆದರೆ, ಲಿಖಿತ ಪರೀಕ್ಷೆಯಲ್ಲಿ  ಸೋತಿದ್ದರು.    ದೈಹಿಕ ಪರೀಕ್ಷೆಯಲ್ಲಿ ಗರ್ಭಿಣಿ ಪಾಲ್ಗೊಂಡಿದ್ದ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಕೆಲವು ಅಭ್ಯರ್ಥಿಗಳು ಇಂತಹ ವಿಷಯವನ್ನು ಮುಚ್ಚಿಡುತ್ತಾರೆ ಎಂದು ಈಶಾನ್ಯ ವಲಯ ಐಜಿಪಿ ಮನೀಷ್‌ ಖರ್ಬಿಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next