Advertisement

ದಿಲ್ಲಿ ಗಲಭೆ ಕೇಸ್: ಜಾಮೀಯಾ ವಿವಿ ಗರ್ಭಿಣಿ ವಿದ್ಯಾರ್ಥಿನಿ ಜಾರ್ಗರ್ ಗೆ ಜಾಮೀನು!

05:29 PM Jun 23, 2020 | Nagendra Trasi |

ನವದೆಹಲಿ: ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಜಾಮೀಯಾ ಯೂನಿರ್ವಿಸಿಟಿ ವಿದ್ಯಾರ್ಥಿನಿ ಸಾಫೂರಾ ಜಾರ್ಗರ್ ಗೆ ದೆಹಲಿ ಹೈಕೋರ್ಟ್ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿದೆ. ಈಕೆ ಗರ್ಭಿಣಿಯಾಗಿರುವುದಾಗಿ ವರದಿ ತಿಳಿಸಿದೆ.

Advertisement

ದೆಹಲಿ ಗಲಭೆ ಪ್ರಕರಣದಲ್ಲಿ ವಿದ್ಯಾರ್ಥಿನಿ ಸಾಫೂರಾಳನ್ನು ಯುಎಪಿಎ ಭಯೋತ್ಪಾದಕ ನಿಗ್ರಹ ಕಾಯ್ದೆಯಡಿ ದೂರು ದಾಖಲಿಸಿ ಬಂಧಿಸಲಾಗಿತ್ತು. ಜಾಮೀಯಾ ಯೂನಿರ್ವಸಿಟಿ ಎಂ ಫಿಲ್ ವಿದ್ಯಾರ್ಥಿನಿ ಇದೀಗ 23 ವಾರಗಳ ಗರ್ಭಿಣಿಯಾಗಿದ್ದು, ಮಾನವೀಯತೆ ನೆಲೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಜಾರ್ಗರ್ ಜಾಮೀನು ಅರ್ಜಿಗೆ ಯಾವುದೇ ಅಕ್ಷೇಪ ವ್ಯಕ್ತಪಡಿಸಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.

ಸಾಫೂರಾ ಜಾರ್ಗರ್ ಜಾಮೀಯಾ ಮಿಲ್ಲಿಯಾ ಇಸ್ಲಾಮಿಯಾ ಯೂನಿರ್ವಸಿಟಿಯ ವಿದ್ಯಾರ್ಥಿನಿ ಹಾಗೂ ಜಾಮೀಯಾ ಕೋ ಆರ್ಡಿನೇಷನ್ ಕಮಿಟಿ ಸದಸ್ಯೆ. ಈಕೆಯನ್ನು ಏಪ್ರಿಲ್ ತಿಂಗಳಿನಲ್ಲಿ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.

ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಫೂರಾ ಯಾವುದೇ ಸಾಕ್ಷ್ಯವನ್ನು ತಿರುಚುವ ಅಥವಾ ಇತರ ಚಟುವಟಿಕೆಯಲ್ಲಿ ಶಾಮೀಲಾಗಬಾರದು ಎಂದು ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ. ಅಷ್ಟೇ ಅಲ್ಲ ದೆಹಲಿ ಬಿಟ್ಟು ಹೊರ ಹೋಗುವಂತಿಲ್ಲ. ಒಂದು ವೇಳೆ ದಿಲ್ಲಿ ಬಿಟ್ಟು ಹೊರಗೆ ಹೋಗಲು ಕೋರ್ಟ್ ಅನುಮತಿ ಅಗತ್ಯ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next