Advertisement

ಗರ್ಭಿಣಿ ಆಡಿನ ಮೇಲೆ ಅತ್ಯಾಚಾರ!

06:00 AM Jul 29, 2018 | Team Udayavani |

ಚಂಡೀಗಢ: ಅತ್ಯಾಚಾರವೆಂದರೇ ಹೀನ ಕೃತ್ಯ. ಹರ್ಯಾಣದ ಮೇವಾತ್‌ ಪಟ್ಟಣದಲ್ಲಿ ಎಂಟು ಮಂದಿ ಕಿಡಿಗೇಡಿಗಳು ಗರ್ಭಿಣಿ ಆಡಿನ ಮೇಲೆ ಅತ್ಯಾಚಾರವೆಸಗಿ ಕೊಂದಿದ್ದಾರೆ. ಮಾದಕ ವಸ್ತು ಮತ್ತು ಮದ್ಯದ ಅಮಲಿನಿಂದ ಅವರು ಈ ಹೇಯ ಕೃತ್ಯವೆಸಗಿದ್ದಾರೆ ಎಂದು ಗೊತ್ತಾಗಿದೆ. ಈ ಬಗ್ಗೆ ನಗಿನಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

ಪ್ರಕರಣ ಸಂಬಂಧ 8 ಮಂದಿ ಪೈಕಿ ಮೂವರ ಗುರುತು ಸಿಕ್ಕಿದ್ದು, ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುತ್ತದೆ ಎಂದು ಪ್ರಭಾರ ಠಾಣಾಧಿಕಾರಿ ಹೇಳಿದ್ದಾರೆ. ಮೇವಾತ್‌ ಪಟ್ಟಣದ ನಿವಾಸಿ ಅಸು ಎಂಬುವರು ಪ್ರಕರಣದ ಬಗ್ಗೆ ದೂರು ನೀಡಿದ್ದರು. 

ಪೇಟಾ ಇಂಡಿಯಾ ಕೂಡ ಈ ಅಂಶವನ್ನು ದೃಢಪಡಿಸಿದೆ. ನುಹ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಇತರ ಪೊಲೀಸ್‌ ಅಧಿಕಾರಿಗಳ ಜತೆ ಸಂಘಟನೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದೆ. ಆಡಿನ ಮರಣೋತ್ತರ ಪರೀಕ್ಷೆ ವಿವರ ಇನ್ನಷ್ಟೇ ಬರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next