Advertisement

ಯುವ ಅಭ್ಯರ್ಥಿಗಳಿಗೆ ಆದ್ಯತೆ

09:33 PM Nov 14, 2020 | Suhan S |

ರಾಮನಗರ: ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಯುವ ಸ್ಪರ್ಧಿಗಳನ್ನು ಬೆಂಬಲಿಸುವುದಾಗಿ ಹಾಗೂ ತಾಪಂ, ಜಿಪಂ ಚುನಾವ ಣೆಗಳಲ್ಲಿ ಯುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಶಿಫಾರಸು ಮಾಡುವುದಾಗಿ ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖೀಲ್‌ಕುಮಾರಸ್ವಾಮಿ ಹೇಳಿದರು.

Advertisement

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,2023ರ ಸಾರ್ವತ್ರಿಕ ಚುನಾವಣೆ ಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ತಮ್ಮ ಗುರಿಯಾಗಿದ್ದು, ರಾಜ್ಯಾದ್ಯಂತ ಪ್ರವಾಸಮಾಡುತ್ತೇನೆ. ಸಂಘಟನೆ ಕಾರ್ಯವನ್ನು ತಮ್ಮ  ಕುಟುಂಬಕ್ಕೆ ರಾಜಕೀಯವಾಗಿ ಜನ್ಮ ನೀಡಿದರಾಮನಗರದಿಂದಲೇ ಆರಂಭಿಸುವುದಾಗಿ ತಿಳಿಸಿದರು.

ಮನೆಯಲ್ಲಿ ಕೂರುವುದಿಲ್ಲ: ಗ್ರಾಪಂ ಚುನಾವಣೆಗಳ ದಿನಾಂಕವನ್ನು ಸರ್ಕಾರ ಇದೇ ನ.20ರಂದು ಘೋಷಿಸಲಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ರಾಜ್ಯ ಜೆಡಿಎಸ್‌ ಅಧ್ಯಕ್ಷರು ವಿಶ್ವಾಸವಿಟ್ಟು ಯುವ ಅಧ್ಯಕ್ಷ ಸ್ಥಾನಕೊಟ್ಟಿದ್ದಾರೆ. ಗ್ರಾಪಂ ಚುನಾವಣೆಗಳಲ್ಲಿಯುವ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸುವೆ.2023ರ ಸಾರ್ವತ್ರಿಕ ಚುನಾವಣೆಗೂ ಅಭ್ಯ ರ್ಥಿಗಳ ಗೆಲುವಿಗೆ ಜವಾಬ್ದಾರಿ ವಹಿಸಲು ತಾವು ಸಿದ್ಧ ಎಂದರು.

ಫ್ರೀ ಹ್ಯಾಂಡ್‌ ಇರಲಿಲ್ಲ: ಮೈತ್ರಿ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯ ಮಂತ್ರಿಗಳಾಗಿದ್ದರೂ ಅವರಿಗೆ ಫ್ರೀ ಹ್ಯಾಂಡ್‌ ಇರಲಿಲ್ಲ. ಪಕ್ಷಕ್ಕೆ ದುಡಿದ ಕಾರ್ಯಕರ್ತರನ್ನು ನಿಗಮ, ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಿಲ್ಲ. ತಕ್ಕ ಹುದ್ದೆ ಕೊಡಲಿಲ್ಲ. ಚುನಾವಣೆಗಳ ವೇಳೆ ಮಾತ್ರ ಬಳಸಿಕೊಳ್ಳುತ್ತಾರೆ ಎಂಬ ಆರೋಪ ಕೇಳಿ ಬರುತ್ತಿವೆ ಎಂದು ಸುದ್ದಿಗಾರರು ಗಮನ ಸೆಳೆದಾಗ, ಮೈತ್ರಿ ಸರ್ಕಾರದಲ್ಲಿ ಎಚ್‌.ಡಿ.ಕು ಮಾರಸ್ವಾಮಿ ಸಿಎಂ ಆಗಿದ್ದರೂ ಅವರಿಗೆ ಫ್ರೀ ಹ್ಯಾಂಡ್‌ ಸಿಗದ ಕಾರಣ ಕಾರ್ಯಕರ್ತರಿಗೆ ಹುದ್ದೆ, ಸ್ಥಾನ ಕಲ್ಪಿಸಲಾಗಲಿಲ್ಲ ಎಂಬ ದುಃಖವಿದೆ ಎಂದರು.

ನೋವಿದೆ: ಶಿರಾ, ಆರ್‌.ಆರ್‌.ನಗರದ ಮತದಾರರ ತೀರ್ಪನ್ನು ಗೌರವಿಸುವುದಾಗಿ ತಿಳಿಸಿದರು. ಶಿರಾಕ್ಷೇತ್ರವನ್ನು ಪಕ್ಷಕಳೆದುಕೊಂಡಿರುವುದಕ್ಕೆ ತಮಗೆ ನೋವಿದೆ ಎಂದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪಚುನಾವಣೆಗಳಲ್ಲಿ ಮತ ದಾರರು ಆಡಳಿತ ಪಕ್ಷದ ಪರ ನಿಲ್ಲುತ್ತಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿ ಕಾರವಧಿಯಲ್ಲಿ ನುಡಿದಂತೆ ನಡೆದುಕೊಂಡಿದ್ದಾರೆ. ಆದರೆ ಮತದಾರರು ಕೈ ಹಿಡಿಯುತ್ತಿಲ್ಲ ಎಂಬ ನೋವಿದೆ. ಈ ಬಗ್ಗೆ ಪಕ್ಷದಲ್ಲಿ ಆತ್ಮಾವ ಲೋಕನ ನಡೆಯುತ್ತಿದೆ ಎಂದರು. ಜೆಡಿಎಸ್‌ ಪ್ರಮುಖರಾದ ರಾಜಶೇಖರ್‌,ಬಿ.ಉಮೇಶ್‌, ದೊರೆಸ್ವಾಮಿ, ಅಜಯ್‌, ಗೂಳಿಗೌಡ, ಪರ್ವೀಜ್‌ ಪಾಷಾ, ಜಯಕುಮಾರ್‌, ಮಾವಿನ ಸಸಿ ವೆಂಕಟೇಶ್‌, ಕುಮಾರ್‌, ರಮೇಶ್‌ ಇದ್ದರು.

Advertisement

ಶಿವನಹಳ್ಳಿ ಸೇತುವೆಕಾಮಗಾರಿ ಶೀಘ್ರ ಆರಂಭ :ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮದಲ್ಲಿ ಸೇತುವೆ ನಿರ್ಮಾಣಕ್ಕೆ ಎಚ್‌.ಡಿ.ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ಮಂಜೂರಾಗಿದೆ. ಆದರೆ ಕಾಮಗಾರಿ ಆರಂಭವಾಗಿಲ್ಲ. ಈ ವಿಚಾರವನ್ನು ಕ್ಷೇತ್ರದ ಶಾಸಕರ ಗಮನ ಸೆಳೆದಿರುವುದಾಗಿ, ಅವರು ಅಧಿಕಾರಿಗಳ ಬಳಿ ಚರ್ಚಿಸಿದ್ದಾರೆ. ಇನ್ನು 15 ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು. ರಾಮನಗರ ಮತ್ತು ಚನ್ನಪಟ್ಟಣ ಶಾಸಕರು ಕ್ಷೇತ್ರಕ್ಕೆ ಭೇಟಿ ಕೊಡುತ್ತಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಕೋವಿಡ್‌ ಕಾರಣ ಬರಲಿಲ್ಲ. ಆದರೆ, ಅಧಿಕಾರಿಗಳ ಬಳಿ ಇಬ್ಬರೂ ಶಾಸಕರು ನಿರಂತರ ಚರ್ಚೆ ಮಾಡುತ್ತಿದ್ದಾರೆ. ಸಾಕಷ್ಟು ಅಭಿವೃದ್ಧಿಕಾಮಗಾರಿಗಳು ನಡೆಯುತ್ತಿವೆ ಎಂದರು.

ರಾಮನಗರದಿಂದ ಸ್ಪರ್ಧೆ ಈಗಲೇ ಹೇಳಲಾಗೊಲ್ಲ : ರಾಮನಗರ ಅಥವಾ ಚನ್ನಪಟ್ಟಣ ಕ್ಷೇತ್ರಗಳಿಂದ 2023ರ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ತಮಗಿಲ್ಲ. ಆದರೆ, ಈ ಬಗ್ಗೆ ಈಗಲೇ ಏನನ್ನು ಹೇಳಲು ಸಾಧ್ಯ ವಿಲ್ಲ. ಈ ಬಗ್ಗೆ ಮುಂದೆ ಯೋಚನೆ ಮಾಡ್ತೀನಿ. ರಾಮನಗರ ಕ್ಷೇತ್ರದ ಪ್ರವಾಸದ ವೇಳೆ ಜನರ ಅಹವಾಲು ಆಲಿಸುವೆ. ಕ್ಷೇತ್ರದ ಸಮಸ್ಯೆಗಳನ್ನು ತಾವು ಕ್ಷೇತ್ರದ ಶಾಸಕರ (ಅನಿತಾ ಕುಮಾರಸ್ವಾಮಿ) ಗಮನ ಸೆಳೆಯುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next