Advertisement

ಗ್ರಾಮ ಸ್ವಚ್ಛತೆಗೆ ಆದ್ಯತೆ ನೀಡಿದ ವಕೀಲ

03:20 PM Mar 22, 2021 | Team Udayavani |

ಮಧುಗಿರಿ: ಈ ಬಾರಿ ನಡೆದ ಗ್ರಾಪಂ ಚುನಾವಣೆಯಲ್ಲಿ ಬಹುತೇಕರುವಿದ್ಯಾವಂತರೇ ಹೆಚ್ಚು. ಅದರಲ್ಲಿ ಡಿವಿ ಹಳ್ಳಿ ಗ್ರಾಪಂನ ತಾಯಗೊಂಡನಹಳ್ಳಿ ಕ್ಷೇತ್ರದ ಸದಸ್ಯ ಬಾಣದ ರಂಗಯ್ಯ ವಕೀಲರಾಗಿದ್ದರೂ ಗ್ರಾಮದ ಸ್ವಚ್ಛತೆಗೆ ತನ್ನದೇ ಆದ ಸೇವೆ ಮಾಡುತ್ತಿದ್ದಾರೆ.

Advertisement

ತಾಲೂಕಿನ ಕಸಬಾ ಹೋಬಳಿ ಡಿವಿ ಹಳ್ಳಿ ಗ್ರಾಪಂನಲ್ಲಿನ ತಾಯಗೊಡನಹಳ್ಳಿ ಕ್ಷೇತ್ರದಿಂದ ಆಯ್ಕೆಯಾದ ವಕೀಲಬಾಣದ ರಂಗಯ್ಯ ಕಳೆದ ಬಾರಿ ನಮ್ಮಗ್ರಾಮ ನಮ್ಮ ಸ್ವತ್ಛತೆ ಎಂಬಯೋಜನೆಯಡಿ ಗ್ರಾಮದ ಮೂಲಸೌಕರ್ಯಗಳಿಗೆ ಆದ್ಯತೆ ನೀಡಿ ಕಾರ್ಯನಿರ್ವಹಣೆ ಮಾಡಿದ್ದರು. ಈ ಬಾರಿ ನಮ್ಮಗ್ರಾಮ ನಮ್ಮ ಸಮಸ್ಯೆ ಎಂಬ ವಿನೂತನಯೋಜನೆಯಲ್ಲಿ ತನ್ನ ಕ್ಷೇತ್ರ ವ್ಯಾಪ್ತಿ ಜನರಸಮಸ್ಯೆಗಳಾದ ಪಿಂಚಣಿ, ಜೀತಪದ್ಧತಿ,ಬಾಲ ಕಾರ್ಮಿಕ ತಡೆಯ ಬಗ್ಗೆ ಸಮೀಕ್ಷೆನಡೆಸಿದ್ದು, ಪರಿಸರದ ಬಗ್ಗೆ ಹಾಗೂಉಚಿತ ಕಾನೂನು ಸೇವೆ ನೀಡುವ ಬಗ್ಗೆಕಾನೂನಿನ ಅರಿವು ಹಾಗೂ ನೆರವಿನ ಬಗ್ಗೆಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಈ ಬಗ್ಗೆ ಗ್ರಾಪಂ ಸದಸ್ಯ ಬಾಣ ರಂಗಯ್ಯ ಮಾತನಾಡಿ, ಬೇರೆಯವರಂತೆ ಚುನಾವಣೆ ಯಲ್ಲಿ ನೀಡಿದ ಆಶ್ವಾಸನೆ ಮರೆಯಲುನಮಗೆ ಸಾಧ್ಯವಿಲ್ಲ. ವಿದ್ಯಾವಂತರಾದನಮಗೆ ಗ್ರಾಮದ ಸಮಸ್ಯೆ ಬಗೆಹರಿಸಲು ಮನಸ್ಸಿದ್ದು, ಕಾನೂನಿನ ಅರಿವೂ ಕೂಡ ಇದೆ. ಇದನ್ನೇ ಬಳಸಿಕೊಂಡು ಕಾನೂನಿನ ಚೌಕಟ್ಟಿನಲ್ಲಿ ಗ್ರಾಮದ ಸೇವೆ ಮಾಡಲು ಮುಂದಾಗಿದ್ದೇನೆ. ಮುಂದೆ ಗ್ರಾಮದ ಶಾಲೆ, ಅಂಗನವಾಡಿ ಹಾಗೂ ಸಮುದಾಯ ಭವನಗಳ ಬಗ್ಗೆ ಬೆಳಕುಚೆಲ್ಲಲಿದ್ದು, ಗ್ರಾಮದಲ್ಲಿನ ಯುವಕನೆರವಿನಿಂದ ಸ್ವಚ್ಛತೆ ಹಾಗೂ ಇವುಗಳ ಸದ್ಬಳಕೆಯನ್ನು ಮಾಡುತ್ತೇವೆ ಎಂದರು.

ಈ ಸಮಸ್ಯೆಗಳು ಈಗಲೂ ಯಥಾಸ್ಥಿತಿಯಲ್ಲಿದ್ದು, ಇಲ್ಲಿಂದಆಯ್ಕೆಯಾದ ಜಿಪಂ ಹಾಗೂ ತಾಪಂ ಸದಸ್ಯರಿಗೆ ಕಾಣುತ್ತಿಲ್ಲ ಎಂದುಆರೋಪಿಸಿದರು. ಮುಂದಿನ ದಿನಗಳಲ್ಲಿಅಪರೂಪಕ್ಕೆ ರಾಜಕೀಯ ಪ್ರವೇಶಿಸಿದ್ದು,ಗ್ರಾಮಸ್ಥರು ಮೆಚ್ಚುವಂತ ಕೆಲಸ ಮುಂದುವರೆಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next