Advertisement

ಬಹುಮತ ತಂದುಕೊಟ್ಟವರಿಗೆ ಆದ್ಯತೆ: ಈಶ್ವರಪ್ಪ

09:17 AM Feb 06, 2020 | Team Udayavani |

ಶಿವಮೊಗ್ಗ: ಬಿಜೆಪಿ ಸರ್ಕಾರ ರಚನೆಗೆ ಪೂರ್ಣ ಬಹುಮತ ತಂದುಕೊಟ್ಟವರಿಗೆ ಆದ್ಯತೆ ಕೊಡುವಂತೆ ಕೇಂದ್ರದ ವರಿಷ್ಠರು ಸೂಚಿಸಿದ್ದು, ಈ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, 10 ನೂತನ ಶಾಸಕರು ಹಾಗೂ ಅವರೊಂದಿಗೆ ಇನ್ನೂ ಮೂವರಿಗೆ ಸಚಿವ ಸ್ಥಾನ ನೀಡುವ ಮಾಹಿತಿ ಇದೆ. ಸಿ.ಪಿ.ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡುವ ಕುರಿತು ಪಕ್ಷದ ಕೆಲವರು ಅಸಮಾಧಾನ ವ್ಯಕ್ತಪಡಿಸಿ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಅಪ್ಪನ ಆಸ್ತಿ ಹಂಚಿಕೊಳ್ಳುವಾಗ ಬಡಿದಾಡಿಕೊಳ್ಳುತ್ತಾರೆಂದರು.

ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ಹಂಚಿಕೆ ವೇಳೆ ಸ್ವಾಭಾವಿಕವಾಗಿ ತನಗೂ ಬೇಕು ಎಂದು ಕೇಳುವುದು ತಪ್ಪಲ್ಲ. ನಾವು ವಿರೋಧ ಮಾಡುತ್ತಿಲ್ಲ. ಬಂಡಾಯವಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಕೆಲವರು ಪ್ರತ್ಯೇಕ ಸಭೆ ನಡೆಸಿದ್ದಾರೆ. ಆದರೆ ಎಲ್ಲರೂ ಬಿಜೆಪಿಗೆ ನಿಷ್ಠರಾಗಿದ್ದಾರೆ. ಈ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆ ಇದ್ದು ಎಲ್ಲವೂ ಸರಿ ಹೋಗಲಿದೆ.

ವಿಶ್ವನಾಥ್‌ ಮತ್ತು ಎಂಟಿಬಿ ನಾಗರಾಜ್‌ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಸಿಎಂ ಈಗಾಗಲೇ ಹೇಳಿದ್ದಾರೆಂದರು. ಸಿ.ಪಿ.ಯೋಗೇಶ್ವರ್‌ ಬೇರೆ ಪಕ್ಷದ ಶಾಸಕರನ್ನು ಬಿಜೆಪಿಗೆ ಸೇರಿಸಿದ್ದಾರೆ ಎಂದೆಲ್ಲಾ ಹೇಳಲಾಗಿದೆ. ಇದರ ಬಗ್ಗೆ ತನಗೆ ಮಾಹಿತಿ ಇಲ್ಲ. ಬಿಜೆಪಿಗೆ ಬಹುಮತ ಇರಲಿಲ್ಲ. ಈಗ ಬಹುಮತ ಬಂದಿದೆ. ಹಾಗಾಗಿ ಇಂತಹ ಸುದ್ದಿ ಹರಿದಾಡುತ್ತಿವೆ. ಗುರುವಾರ ಸಂಪುಟ ವಿಸ್ತರಣೆ ಆದ ನಂತರ ಖಾತೆ ಹಂಚಿಕೆ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next