Advertisement

ಬೀಜ ಹಂಚಿಕೆಯಲ್ಲಿ ಸರ್ಕಾರಿ, ಸಹಕಾರಿ ಸಂಸ್ಥೆಗಳಿಗೆ ಆದ್ಯತೆ

07:58 AM May 31, 2020 | Lakshmi GovindaRaj |

ಬೆಂಗಳೂರು: ಕೃಷಿ ಇಲಾಖೆಯಿಂದ ಬೀಜ ಹಂಚಿಕೆ ಮಾಡುವಾಗ ಸರ್ಕಾರಿ ಹಾಗೂ ಸಹಕಾರಿ ಸಂಸ್ಥೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್‌ ತಿಳಿಸಿದ್ದಾರೆ. ಕರ್ನಾಟಕ ಸಹಕಾರಿ ಎಣ್ಣೆ ಬೀಜ  ಬೆಳೆಗಾರರ ಮಹಾಮಂಡಳ ಕಚೇರಿಯಲ್ಲಿ ಮುಂಗಾರು ಹಂಗಾಮಿಗೆ “ಎಣ್ಣೆ ಕಾಳು ಬೀಜ ದಾಸ್ತಾನು ಹಾಗೂ ಪೂರೈಕೆ ಕುರಿತು ಸಭೆ ನಡೆಸಿ ನಂತರ ಮಾತನಾಡಿದರು.

Advertisement

ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಪೂರೈಸುವುದು ನಮ್ಮ  ಕರ್ತವ್ಯ. ಯಾವುದೇ ಕಾರಣಕ್ಕೂ ನಕಲಿ, ಕಳಪೆ ಬೀಜ ವಿತರಣೆಯಾಗಬಾರದು ಎಂದರು. ಕೃಷಿ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸುಮಾರು 11 ಸಾವಿರ ಕ್ವಿಂಟಲ್‌ ಕಳಪೆ ಮೆಕ್ಕೆಜೋಳ ಬಿತ್ತನೆ ಬೀಜವನ್ನು ಪತ್ತೆ  ಹಚ್ಚಲಾಗಿದೆ ಎಂದರು. ಮೆಕ್ಕೆಜೋಳ, ಶೇಂಗಾ ಸೇರಿ ಎಲ್ಲದಕ್ಕೂ ಮುಂದಿನ ದಿನಗಳಲ್ಲಿ ಏಕರೂಪ ಬೆಲೆ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದುತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next