Advertisement

ಮೂಲ ಸೌಲಭ್ಯಕ್ಕೆ ಆದ್ಯತೆ: ರಾಜುಗೌಡ

06:10 PM Mar 28, 2022 | Team Udayavani |

ಸುರಪುರ: ಕ್ಷೇತ್ರದ ಪ್ರತಿಯೊಂದು ಹಳ್ಳಿ ಹಳ್ಳಿಗೂ ಕುಡಿವ ನೀರು, ರಸ್ತೆ ಸೇರಿ ಮೂಲಸೌಲಭ್ಯಗಳಿಗೆ ಒತ್ತು ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅಚ್ಚುಕಟ್ಟಾದ ರಸ್ತೆಗಳು ನಿರ್ಮಾಣವಾಗಿವೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷ, ರಾಜುಗೌಡ ಹೇಳಿದರು.

Advertisement

ತಾಲೂಕಿನ ರತ್ತಾಳ ಗ್ರಾಮದಲ್ಲಿ ರವಿವಾರ 1.80 ಕೋಟಿ ವೆಚ್ಚದ ಜಿಪಂ ಇಲಾಖೆಯ ಮುಖ್ಯಮಂತ್ರಿಗಳ ಮಾದರಿ ಯೋಜನೆ ಅಡಿಯಲ್ಲಿ ರತ್ತಾಳ-ರಂಗಂಪೇಟೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಹೋಗಲು ಉತ್ತಮವಾದ ರಸ್ತೆಗಳ ನಿರ್ಮಾಣಕ್ಕೆ ಒತ್ತು ಕೊಟ್ಟು ರಸ್ತೆಗಳನ್ನು ನಿರ್ಮಿಸಲಾಗಿದೆ. ಇದರಿಂದ ಸುಗಮ ಸಾರಿಗೆ ಸಂಚಾರಕ್ಕೂ, ಜನರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.

ಕ್ಷೇತ್ರದಲ್ಲಿ ಇಂದು ಸಾವಿರಾರೂ ಕೋಟಿ ವೆಚ್ಚದಲ್ಲಿ ಗ್ರಾಮೀಣ ಪ್ರದೇಶಗಳು ಸೇರಿ ನಗರ ಮತ್ತು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಅನೇಕ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿವೆ. ಇನ್ನೂ ಅಲ್ಲಲ್ಲಿ ಕೆಲವು ರಸ್ತೆಗಳ ನಿರ್ಮಾಣ ಕಾಮಗಾರಿ ಕೂಡ ಶೀಘ್ರದಲ್ಲಿ ಆರಂಭವಾಗಲಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ (ತಾತಾ), ಮುಖಂಡರಾದ ದೊಡ್ಡ ದೇಸಾಯಿ, ಭೀಮಣ್ಣ ಬೇವಿನಾಳ, ರಂಗನಗೌಡ ಪಾಟೀಲ ದೇವಿಕೇರಾ, ಬಲಭೀಮನಾಯಕ ಬೈರಿಮಡ್ಡಿ, ವಿಜಯಕುಮಾರ ಮಂಗಿಹಾಳ ಗ್ರಾಪಂ ದೇವಿಕೇರಾ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಸದಸ್ಯರು ಮತ್ತು ರತ್ತಾಳ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next