ಹೊಸಕೋಟೆ: ತಾಲೂಕಿನ ಗ್ರಾಮಗಳಿಗೆ ಸರ್ಕಾರದ ಯೋಜನೆಗಳಡಿ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲೂಕಿನ ಗಂಗಾಪುರ ಗ್ರಾಮದಲ್ಲಿ ದಲಿತರ ಕಾಲೋನಿಯಲ್ಲಿ ಚರಂಡಿ, ಕಾಂಕ್ರೀಟ್ ರಸ್ತೆ ನಿರ್ಮಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕಾಮಗಾರಿಗೆ ಉತ್ತಮ ಗುಣ ಮಟ್ಟದ ಗುಣಮಟ್ಟದ ಸಿಮೆಂಟ್, ಜಲ್ಲಿ, ಮರಳನ್ನು ಬಳಸಲು ಗುತ್ತಿಗೆ ದಾರರು ಗಮನಹರಿಸಬೇಕೆಂದರು.
ಎಂಜಿನಿಯರ್‌ಗಳು ಸಹ ಈ ಬಗ್ಗೆ ಆಗಾಗ್ಗೆ ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಬೇಕು. ಗ್ರಾಮಸ್ಥರು ಒದಗಿಸಿರುವ ಸೌಲಭ್ಯ ಗಳನ್ನು ಕಾಪಾಡಿಕೊಂಡು ಹಾಳಾಗದಂತೆ ಎಚ್ಚರ ವಹಿಸಬೇಕು. ಸ್ಥಳೀಯ ಪ್ರದೇಶಾಭಿವೃ ದ್ಧಿಯಡಿ ನೀಡುವ ಅನುದಾನದೊಂದಿಗೆ ಸರ್ಕಾರದ ಯೋಜನೆಗಳ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾದ ಪ್ರಮುಖ ಕರ್ತವ್ಯ ತಮ್ಮದಾಗಿದೆ. ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಮಸ್ಯೆ ಗಳನ್ನು ನಿವಾರಿಸಿ ಜಿಲ್ಲೆಯಲ್ಲಿಯೇ ಮಾದರಿ ತಾಲೂಕ ನ್ನಾಗಿಸಲು ಮಿಸಲಾಗುವುದು. ಇದಕ್ಕಾಗಿ ಎಲ್ಲರೂ ಪಕ್ಷಾತೀತವಾಗಿ ಸಹ ಕರಿಸಬೇಕು ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ.ವಿ.ರಾಜಶೇಖರಗೌಡ, ಟಿ.ಎಸ್.ರಾಜಶೇಖರ್, ಉದ್ಯಮಿ ಬಿ.ವಿ.ಬೈರೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಮಂಜುನಾಥ್, ಮಂಜುಳಾ ಶ್ರೀನಿವಾಸ್, ಜಲಜಾಕ್ಷಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಂದರ್ ಭಾಗವಹಿಸಿದ್ದರು.