ಜಮಖಂಡಿ: ಪ್ರತಿಯೊಬ್ಬರು ಮಾತೃಭಾಷೆಗೆ ಆದ್ಯತೆ ನೀಡಬೇಕು. ಕಡ್ಡಾಯವಾಗಿ ಶಿಕ್ಷಣಕಲಿಯುವ, ಕಲಿಸುವ ಕೆಲಸ ನಿರಂತರವಾಗಿನಡೆಯಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಎಸ್‌ಆರ್‌ಎ ಕ್ಲಬ್ ಸಭಾಭವನದಲ್ಲಿ ರವಿವಾರ ಸಾವಿತ್ರಿಬಾಯಿ ಫುಲೆ 190ನೇ ಜಯಂತಿ ಮತ್ತು ಭಾರತದೇಶದ ಪ್ರಥಶಿಕ್ಷಕಿ ಸಾವಿತ್ರಿಬಾಯಿ ಫುಲೆ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಗ್ರಾಮದಲ್ಲಿಖಾಸಗಿ ಶಾಲೆ ಹಾಗೂ ದೇಶದ ಪ್ರಪ್ರಥಮ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಶಾಲೆ ತೆರೆದ ಕೀರ್ತಿಸಾವಿತ್ರಿ ಬಾಯಿ ಫುಲೆ ಅವರಿಗೆ ಸಲ್ಲುತ್ತದೆ ಎಂದರು.
ಶಿಕ್ಷಣ ನೀಡುವಲ್ಲಿ ದಿಟ್ಟಹೆಜ್ಜೆಯಿಟ್ಟುಸಮಾಜದ ಟೀಕೆಗೆ ಅಂಜದೆ ಎದೆಗಾರಿಕೆಯಿಂದಎಲ್ಲವನ್ನು ಎದುರಿಸಿ ಶಿಕ್ಷಣ ನೀಡಲು ಮುಂದಾದರು. ಇಂದಿನ ಮಹಿಳೆಯರು ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಮಟ್ಟದ ಜೀವನ ಸಾಗಿಸಬೇಕು. ಸಾವಿತ್ರಿಬಾಯಿ ಫುಲೆ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಪ್ರತಿಯೊಬ್ಬರಿಗೂ ಶಿಕ್ಷಣದಷ್ಟು ಆರೋಗ್ಯ ಕೂಡಾ ಮಹತ್ವದ್ದಾಗಿದೆ. ಜಮಖಂಡಿಯಲ್ಲಿ 22 ಲಕ್ಷಗಳ ಅನುದಾನದಲ್ಲಿ ತಾಯಿ-ಮಕ್ಕಳಆಸ್ಪತ್ರೆ, 1.20 ಕೋಟಿ ವೆಚ್ಚದಲ್ಲಿ ಡಿಜಿಟಲ್‌ಗ್ರಂಥಾಲಯ ನಿರ್ಮಿಸಲಾಗುತ್ತಿದೆ ಎಂದರು. ಕೃತಿ ಪರಿಚಯಿಸಿದ ಹಿರಿಯ ಸಾಹಿತಿ ಅಶೋಕ ನರೋಡೆ ಮಾತನಾಡಿ, ಕೃತಿಗಾರರಲ್ಲಿ ದೃಢತೆ, ನಿಷ್ಠೆ ಇರಬೇಕು. ಸಾವಿತ್ರಿಬಾಯಿಫುಲೆ ಅವರ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ, ಸಾಹಿತಿ ಸತೀಶಕುಮಾರಹೊಸಮನಿ ಕೃತಿ ಬಿಡುಗಡೆಗೊಳಿಸಿದರು.ಸಾಹಿತಿ ಡಾ| ಜೆ.ಪಿ.ದೊಡಮನಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಸಿದ್ದುಮೀಸಿ ಇದ್ದರು. ಪ್ರಾಚಾರ್ಯ ಎಸ್. ಎಂ.ಹಾದಿಮನಿ ಸ್ವಾಗತಿಸಿದರು. ಎಸ್.ಆರ್. ಹಂದಿಗುಂದ ನಿರೂಪಿಸಿದರು. ವಕೀಲ ಶಶಿಕಾಂತ ದೊಡಮನಿ ವಂದಿಸಿದರು.