Advertisement

ವಿದ್ಯೆಯನ್ನು ಒಲಿಸಿಕೊಳ್ಳುವತ್ತ ಆದ್ಯತೆ ನೀಡಿ

02:05 PM Jun 19, 2018 | Team Udayavani |

ಮೈಸೂರು: ಜೀವನದ ಕಟ್ಟಕಡೆಯವರೆಗೂ ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪದವಿ ಹಂತದ ವಿದ್ಯಾಭ್ಯಾಸವನ್ನು ಆಹ್ಲಾದಕರ ಮತ್ತು ಸಂತೋಷದಿಂದ ಕಳೆಯಿರಿ ಎಂದು ಸಂಸದ ಪ್ರತಾಪಸಿಂಹ ಕಿವಿಮಾತು ಹೇಳಿದರು.

Advertisement

ನಗರದ ವಿದ್ಯಾವರ್ದಕ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಅಭಿವಿನ್ಯಾಸ ಮತ್ತು ಮಾರ್ಗದರ್ಶಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಗೆ ಕಲಿಕೆ ಎನ್ನುವುದು ಜೀವನದ ಕೊನೆಯವರೆಗೂ ನಿರಂತರವಾಗಿ ನಡೆಯಲಿದೆ. ಆದರೆ ಬಹುತೇಕ ವಿದ್ಯಾರ್ಥಿಗಳು ಕಾಲೇಜಿನಲ್ಲಿರುವಾಗ ಜೀವನದ ಜತೆ ಆಟವಾಡುವ ಮೂಲಕ ಓದಿನ ಕಡೆಗೆ ಹೆಚ್ಚಿನ ಆಸಕ್ತಿ ತೋರುವುದಿಲ್ಲ,

ಇದರಿಂದಾಗಿ ಕಾಲೇಜಿನ ಅಧ್ಯಯನದ ನಂತರ ಜೀವನ ಎಂಬುದು ವಿದ್ಯಾರ್ಥಿಗಳೊಂದಿಗೆ ಆಟವಾಡುತ್ತದೆ. ಪೋಷಕರ ಕಷ್ಟ ದೂರವಾಗಬೇಕಾದರೆ ಮಕ್ಕಳು ಜವಾಬ್ದಾರಿಯಿಂದ ವರ್ತಿಸಬೇಕಿದ್ದು, ಈ ನಿಟ್ಟಿನಲ್ಲಿ ವಿದ್ಯೆಯನ್ನು ಒಲಿಸಿಕೊಳ್ಳುವುದರ ಬಗ್ಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ. ಜ್ಞಾನ ಎನ್ನುವುದು ಬ್ಯಾಂಕಿನ ಖಾತೆ ಇದ್ದಂತೆ, ಅದು ಪ್ರತಿ ನಿತ್ಯವು ವೃದ್ಧಿಯಾಗಲು ಅಧ್ಯಯನದಿಂದ ಮಾತ್ರ ಸಾಧ್ಯ ಎಂದು ಹೇಳಿದರು. 

ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್‌ ಮಾತನಾಡಿ, ಕಾಲೇಜಿಗೆ ಹೊಸದಾಗಿ ಪ್ರವೇಶವನ್ನ ಪಡೆದಿರುವ ವಿದ್ಯಾರ್ಥಿಗಳು ಈ ವ್ಯವಸ್ಥೆಗೆ ಹೊಂದಿಕೊಳ್ಳಲು ಮತ್ತು ಅವರ ದೃಷ್ಠಿಕೋನವನ್ನು ಸುವ್ಯವಸ್ಥಿತವಾಗಲು ಮಾರ್ಗದರ್ಶಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ವಿದ್ಯಾರ್ಥಿಗಳು ನಂಬಿಕೆ ಮತ್ತು ದೃಢ ನಿಶ್ಚಯದಿಂದ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯವಿದ್ದು, ಯಾವ ವ್ಯಕ್ತಿಗೆ ಮಾನವೀಯತೆ ಮತ್ತು ತನ್ನ ಸಂಪಾದನೆಯ ಬಗ್ಗೆ ತೃಪ್ತಿ ಇರುತ್ತದೆ ಅವರು ಮಾತ್ರವೇ ತಮ್ಮ ಗುರಿಮುಟ್ಟಲು ಸಾಧ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎಸ್‌. ಮರೀಗೌಡ ಮತ್ತಿತರರು ಹಾಜರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next