Advertisement

ಮತದಾನ ಕೇಂದ್ರದಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ

10:34 AM Apr 01, 2018 | |

ಹಳೆಯಂಗಡಿ: ರಾಜ್ಯ ವಿಧಾನಸಭಾ ಚುನಾವಣೆಗಾಗಿ ಚುನಾವಣಾ ಆಯೋಗದ ಸೂಚನೆಯಂತೆ, ಜಿಲ್ಲಾ ಸ್ವೀಮ್‌ ಸಮಿತಿಯು ‘ಗ್ರಾಮ ಪಂಚಾಯತ್‌ಗೆ ಬನ್ನಿ ಮತದಾನ ಕೇಂದ್ರಕ್ಕೆ’ ಎಂಬ ಘೋಷವಾಕ್ಯದೊಂದಿಗೆ ಪ್ರತಿ ಮತದಾನ ನಡೆಸುವ ಕೇಂದ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲು ತಿಳಿಸಲಾಗಿದೆ.

Advertisement

ಮತದಾನ ಕೇಂದ್ರದಲ್ಲಿ ಅಂಗವಿಕಲರಿಗೆ ಅನುಕೂಲವಾಗಲು  ರ‌್ಯಾಂಪ್‌ ಸೌಲಭ್ಯ, ವೃದ್ಧರು ಹಾಗೂ ಅಂಗವಿಕಲರಿಗೆ ಕ್ಯೂನಲ್ಲಿ ನಿಲ್ಲುವಂತಿಲ್ಲ, ಸುಗಮವಾಗಿ ಮತ ಚಲಾವಣೆ ನಡೆಸಲು ನಾಮಫಲಕಗಳನ್ನು ಅಳವಡಿಸಬೇಕು, ಹಿರಿಯ ನಾಗರಿಕರ ಹಾಗೂ ಮಹಿಳಾ ಸ್ನೇಹಿ ಮತಗಟ್ಟೆಯಾಗಬೇಕು, ಸ್ವಯಂ ಸೇವಕರ ಸಹಕಾರ, ಮತ ಚಲಾವಣೆಯ ಖಾತ್ರಿಗಾಗಿ ವಿವಿಪಿಟಿ, ಬಿಸಿಲಿನಿಂದ ರಕ್ಷಿಸಲು ನೆರಳಿನ ವ್ಯವಸ್ಥೆ, ಪೊಲೀಸರಿಂದ ಕಾನೂನು ಸುವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಬ್ರೈಲ್‌ ಸೌಲಭ್ಯಯುಕ್ತ ಮತ ಯಂತ್ರದ ವ್ಯವಸ್ಥೆಯನ್ನು ಕಲ್ಪಿಸಲು ಸೂಚನೆ ನೀಡಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾನರ್‌, ಬಂಟಿಂಗ್ಸ್ ಗಳಿಗೆ ಅನುಮತಿ ಅಗತ್ಯ
ಉಳ್ಳಾಲ: ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳನ್ನು ಮತ್ತು ಬ್ಯಾನರ್‌, ಬಂಟಿಂಗ್ಸ್‌ ಅಳವಡಿಸಲು ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಉಳ್ಳಾಲ ನಗರಸಭಾ ಪೌರಾಯುಕ್ತೆ ವಾಣಿ ವಿ. ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next