Advertisement
ಇಂದಿನ ಕಾಲಘಟ್ಟದಲ್ಲಿ ಶಿಕ್ಷಣದಲ್ಲಿನ ಬದಲಾವಣೆ ಬಹಳಷ್ಟು ಅಗತ್ಯವಾಗಿದೆ.
Related Articles
Advertisement
ವಿದ್ಯಾರ್ಥಿಗಳಲ್ಲಿ ಯೋಚಿಸುವ ಶಕ್ತಿ ಕುಂದಿದೆ. ಏನನ್ನು ಯೋಚಿಸಬೇಕು ಎಂಬುದನ್ನು ತಿಳಿಸುವ ಬದಲು, ಯಾವ ರೀತಿ ಯೋಚಿಸಬೇಕು ಎನ್ನುವುದನ್ನು ತಿಳಿಸಿದರೆ ಮಾತ್ರ ಹೊಸ ವಿಚಾರಧಾರೆಗಳು ಹುಟ್ಟಲು ಸಾಧ್ಯ.
ನೂತನ ಶಿಕ್ಷಣ ವ್ಯವಸ್ಥೆಯಂತೆ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ದೊರೆಯುತ್ತಿರುವುದು ಉತ್ತಮ ಅಂಶ. ಅದೆಷ್ಟೋ ಜನ ತಮ್ಮ ವೃತ್ತಿ, ಘನತೆಗೆ ಅನುಗುಣವಾಗಿ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ದಾಖಲಿಸುತ್ತಾರೆ. ಇಂಗ್ಲಿಷ್ ಶಿಕ್ಷಣ ಪಡೆದವರು ಬುದ್ಧಿವಂತರು ಎಂಬ ಕಲ್ಪನೆ ಬದಲಾಗಲಿದೆ.
ಯಾವುದೇ ಕೆಲಸ ಅಥವಾ ವೃತ್ತಿಪರ ಚಟುವಟಿಕೆಯಲ್ಲಿ ಆಂಗ್ಲ ಭಾಷೆಯ ಅತಿಯಾದ ಬಳಕೆ ಅದೆಷ್ಟೋ ಮಾತೃಭಾಷೆಗಳ ಅಸ್ತಿತ್ವಕ್ಕೆ ಕಳಂಕ ತಂದಿದೆ. ವಿಕಿಪೀಡಿಯ ತಿಳಿಸುವಂತೆ ಸಾವಿರಾರು ಭಾಷೆಗಳು ಇಂದು ಮರೆಯಾಗಿವೆ. ಶಿಕ್ಷಣಕ್ಕೂ, ಭಾಷೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೂ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ನೀಡಿದರೆ ವಿದ್ಯಾರ್ಥಿಗಳ ಯೋಚನ ಶಕ್ತಿ ವೃದ್ಧಿಸುತ್ತದೆ. ಬೀಳುವ ಕನಸುಗಳು, ಆಡುವ ಮಾತುಗಳು ನಮ್ಮ ಮಾತೃಭಾಷೆಯಾದರೆ, ಕಲಿಯುವ ಶಿಕ್ಷಣವೇಕೆ ಪರಭಾಷೆಯಲ್ಲಿರಬೇಕು? ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಕೀಳರಿಮೆ ಏಕೆ? ಪರಭಾಷೆಯಿಂದ ಮಂಕಾಗಿರುವ ಮಾತೃಭಾಷೆ ಮೇಲೇಳಲಿ. ಇಂಗ್ಲಿಷ್ ಶಿಕ್ಷಣಕ್ಕೆ ಹೆದರಿ ಅದೆಷ್ಟೋ ಪ್ರತಿಭೆಗಳು ಸರಿಯಾದ ಶಿಕ್ಷಣ ಪಡೆಯಲಾಗದೆ ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಆದರೆ ಇಂದಿನ ಉನ್ನತ ಶಿಕ್ಷಣ ಸುಧಾರಣೆಯಲ್ಲಿ ವಿದ್ಯಾರ್ಥಿ ತನಗೆ ಇಷ್ಟವಿರುವ ಭಾಷೆಯಲ್ಲಿ ಶಿಕ್ಷಣ ಪಡೆಯುವ ಅವಕಾಶವಿದೆ. ಈ ಬದಲಾದ ಶಿಕ್ಷಣ ವ್ಯವಸ್ಥೆಯಿಂದಾಗಿ ಯಾವುದೇ ಎಲ್ಲ ವಿದ್ಯಾರ್ಥಿಗಳಿಗೂ ಸಹಾಯವಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಉನ್ನತ ಶಿಕ್ಷಣದ ಸುಧಾರಣೆ ಪ್ರಬುದ್ಧ ಭಾರತಕ್ಕೆ ಮುನ್ನುಡಿಯಾಗಿದೆ. ಯುವ ಭಾರತ ನಿರ್ಮಾಣದಲ್ಲಿ ಯುವ ಪೀಳಿಗೆಗೆ ಹೊಸ ಶಿಕ್ಷಣ ಪದ್ಧತಿ ಪ್ರೇರಕವಾಗಲಿ. ಯುವ ಭಾರತ ನಿರ್ಮಾಣದಲ್ಲಿ ನಾವು ಕೈ ಜೋಡಿಸೋಣ.