Advertisement

ಶೋಷಿತರು,ಅಶಕ್ತರಿಗೆ ದನಿಯಾಗಿ

07:06 PM Dec 06, 2020 | Suhan S |

ನಂಜನಗೂಡು: ಸಮಾಜದಲ್ಲಿನ ಶೋಷಿತರು, ಅಶಕ್ತರ ಧ್ವನಿಯಾಗುವುದೇ ನಿಜವಾದ ಪತ್ರಕರ್ತರ ಕರ್ತವ್ಯ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್‌.ಟಿ.ರವಿಕುಮಾರ್‌ ಹೇಳಿದರು.

Advertisement

ನಗರದ ಶ್ರಾವಣ ಮಂಟಪದಲ್ಲಿ ತಾಲೂಕು ಪತ್ರಕರ್ತರ ಸಂಘವು ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ಮಾತನಾಡಿದಅವರು, ಪತ್ರಿಕೋದ್ಯಮದ ಘನತೆ ಗೌರವವನ್ನು ಪ್ರೋತ್ಸಾಹಿಸಲು ಸೂತ್ತೂರು ಮಠ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿಯನ್ನು ಸ್ಥಾಪಿಸಿದೆ. ಶ್ರೀ ಮಠದ ಉದ್ದೇಶವನ್ನು ನಾವೆಲ್ಲ ಸಾಕಾರಗೊಳಿಸಬೇಕಿದೆ ಎಂದರು.

ಕ್ಷೇತ್ರದ ಶಾಸಕರು ಸೂರಿಲ್ಲದ ಪತ್ರಕರ್ತರಿಗೆ ಸೂರು ಕಲ್ಪಿಸಲು ಸಹಕಾರ ನೀಡ ಬೇಕೆಂದು ಅವರು ಇದೇ ಸಂದರ್ಭದಲ್ಲಿ ಕೋರಿದರು. ಶಾಸಕ ಹರ್ಷವರ್ಧನ್‌ ಮಾತನಾಡಿ, ಪತ್ರಕರ್ತರು ಓಲೈಕೆ ಬಿಟ್ಟು ವಸ್ತುನಿಷ್ಠ ವರದಿಗೆ ಮಹತ್ವ ನೀಡಿದಾಗ ಮಾತ್ರ ಈ ವೃತ್ತಿಯ ಘನತೆ ಗೌರವ ಉಳಿಯುತ್ತದೆ ಎಂದರು. ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ದೀಪಕ್‌ ಮಾತನಾಡಿ, ರಾಷ್ಟ್ರದ ಮೊಟ್ಟ ಮೊದಲ ಮಹಿಳಾ ಪತ್ರಕರ್ತೆ ನಂಜನಗೂಡು ತಿರುಮಲಾಂಬ ಅವರನ್ನು ಈ ವೇದಿಕೆಯಲ್ಲಿ ಸ್ಮರಿಸದಿದ್ದರೆ ಪತ್ರಿಕಾ ದಿನಾಚರಣೆಗೆ ಅರ್ಥವೇ ಇಲ್ಲ ದಂತಾಗುತ್ತದೆ ಎಂದರು.

ವೇದಿಕೆಯಲ್ಲಿ ಜೆಎಸ್‌ಎಸ್‌ ಸಂಸ್ಥೆಯ ಆಡಳಿತ ನಿರ್ದೇಶಕ ಶಂಕರಪ್ಪ, ರಾಜ್ಯ ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಎನ್‌.ಆರ್‌.ಕೃಷ್ಣಪ್ಪ ಗೌಡ, ನಗರ ಸಭಾ ಅಧ್ಯಕ್ಷ ಮಹದೇವ ಸ್ವಾಮಿ, ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯದರ್ಶಿ ಸುಬ್ರಮಣ್ಯ, ನಿರ್ದೇಶಕ ಹುಲ್ಲಹಳ್ಳಿ ಶ್ರೀನಿವಾಸ್‌, ತಾಲೂಕು ಸಂಘದ ಅಧ್ಯಕ್ಷ ಮೊಹನ್‌, ತಾಲೂಕು ಕಾರ್ಯದರ್ಶಿ ಪ್ರತಾಪ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next