Advertisement

ಧರ್ಮ ಸಂಸದ್‌ ರಾಷ್ಟ್ರೋತ್ಥಾನಕ್ಕೆ ಮುನ್ನುಡಿ: ಒಡಿಯೂರು ಶ್ರೀ

11:23 AM Oct 28, 2017 | Team Udayavani |

ಮಂಗಳೂರು: ರಾಷ್ಟ್ರ ಕಟ್ಟುವುದು, ಧರ್ಮ ಸಂರಕ್ಷಣೆ ನಮ್ಮ ಕರ್ತವ್ಯ. ಧರ್ಮ ಸಂಸದ್‌ ಮೂಲಕ ರಾಷ್ಟ್ರೋತ್ಥಾನಕ್ಕೆ ಮುನ್ನುಡಿಯಾಗಬೇಕು ಎಂದು ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನಂನ ಶ್ರೀ ಗುರು ದೇವಾನಂದ ಸ್ವಾಮೀಜಿಯವರು ಹೇಳಿದರು.  

Advertisement

ಉಡುಪಿಯಲ್ಲಿ ನ. 24ರಿಂದ 26ರ ವರೆಗೆ ನಡೆಯುವ ಐತಿಹಾಸಿಕ ಧರ್ಮ ಸಂಸದ್‌ ಕಾರ್ಯಕ್ರಮದ ಸಲುವಾಗಿ ಮಂಗಳೂರು ಜಿಲ್ಲಾ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಅವರು ಶುಕ್ರವಾರ ಆಶೀರ್ವಚನ ನೀಡಿದರು. ಸನಾತನ ಹಿಂದೂ ಧರ್ಮ ನಾಶ ರಹಿತವಾದದ್ದು. ಆದರೂ ಸಮಾಜದ ಮೇಲೆ ಆಗುವ ಕೆಲವು ಸವಾಲುಗಳನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕಾರ್ಯ ಪ್ರವೃತ್ತರಾಗಬೇಕು. ಇದಕ್ಕಾಗಿ ಸಮಸ್ತ ಹಿಂದೂ ಬಾಂಧವರು ಒಗ್ಗಟ್ಟಾಗಬೇಕು. ಋಷಿ ಮುನಿಗಳು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುವ ಮೂಲಕ ಧರ್ಮಜಾಗೃತಿ ಕಾರ್ಯ ನಡೆಸಬೇಕು ಎಂದವರು ಆಶಿಸಿದರು.

ಧಾರ್ಮಿಕ ಮುಂದಾಳು ಹರಿಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಪದಾಧಿಕಾರಿಗಳ ಪದಗ್ರಹಣ ಈ ವೇಳೆ ನಡೆಯಿತು. ಸ್ವಾಗತ ಸಮಿತಿ ಸದಸ್ಯರಾದ ಪುಷ್ಪರಾಜ ಜೈನ್‌, ಡಾ| ಆಶಾಜ್ಯೋತಿ ರೈ, ಮಮತಾ ಅಣ್ಣಯ್ಯ ಕುಲಾಲ್‌, ಪುರುಷೋತ್ತಮ ಕೊಟ್ಟಾರಿ, ವಿಹಿಂಪ ಕಾರ್ಯದರ್ಶಿ ಗೋಪಾಲ್‌ ಮೊದಲಾದವರು ಉಪಸ್ಥಿತರಿದ್ದರು.

ವಿಹಿಂಪ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಪ್ರಸ್ತಾವನೆಗೈದರು. ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ ಶೇಣವ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next