Advertisement

ಕೋವಿಡ್‌ ಮೂರನೇ ಅಲೆ ತಡೆಗೆ ಮುನ್ನೆಚ್ಚರಿಕೆ ಕ್ರಮ

05:39 PM Aug 18, 2021 | Team Udayavani |

ಕಾರವಾರ: ಕೋವಿಡ್‌-19 ಸಂಭವನೀಯ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಗಂಭೀರ ಪರಿಣಾಮ ಆಗಬಹುದೆಂಬ ತಜ್ಞರ ಅಭಿಪ್ರಾಯವಿದೆ. ಈ ಕಾರಣ ಜಿಲ್ಲೆಯಲ್ಲಿರುವ ಮಕ್ಕಳ ಮತ್ತು ಗರ್ಭಿಣಿಯರ ಹಾಗೂ ಬಾಣಂತಿಯರ ಆರೋಗ್ಯದ ಕುರಿತಾಗಿ ವಿಶೇಷ ಗಮನ ಹಾಗೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ ಎಂದು ಜಿಪಂ ಸಿಇಒ ಪ್ರಿಯಾಂಗಾ ಹೇಳಿದರು.

Advertisement

ನಗರದ ಜಿಪಂ ಕಾರ್ಯಾಲಯ ಸಭಾಂಗಣದಲ್ಲಿ ಕೋವಿಡ್‌-19 ಮತ್ತು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಜಿಲ್ಲಾಮಟ್ಟದ ಲಸಿಕಾ
ಕಾರ್ಯಾಪಡೆಯ ಸಭೆ ನಡೆಸಿ ಮಾತನಾಡಿದರು.

ಲಸಿಕಾ ಕಾರ್ಯಕ್ರಮದಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅದೇ ರೀತಿ ಎಲ್ಲ ತಾಲೂಕು ಗಳಲ್ಲಿ ನಡೆಯುವ ಲಸಿಕಾ ಕಾರ್ಯಕ್ರಮವನ್ನು ವಿಡಿಯೋ ಸಾಕ್ಷ್ಯಚಿತ್ರ ರೂಪಿಸಬೇಕು.ಗ್ರಾಮ ಮತ್ತು ವಾರ್ಡ್‌ವಾರು ಆರೋಗ್ಯ ಸೇವೆ ಶಿಬಿರ ನಡೆಸಬೇಕು ಎಂದರು.|

ಇದನ್ನೂ ಓದಿ:ಬೆಳಗ್ಗೆ ಸಾರ್ವಕಾಲಿಕ ದಾಖಲೆ ಬರೆದಿದ್ದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 163 ಅಂಕ ಕುಸಿತ!

ವಲಸೆ ಪ್ರದೇಶದ ಮಕ್ಕಳಿಗೂ ಆದ್ಯತೆ ನೀಡಿ: ಅದೇ ರೀತಿ ವಲಸೆ ಪ್ರದೇಶಗಳು, ಅಲೆಮಾರಿ ನಿವಾಸಿ ಸ್ಥಳಗಳಿಗೆ ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಅವರವರ ವ್ಯಾಪ್ತಿಯಲ್ಲಿರುವ ಫಲಾನುಭವಿಗಳ ಪಟ್ಟಿ ನೀಡುವುದರೊಂದಿಗೆ ಶಿಬಿರದ ಸ್ಥಳ ದಿನಾಂಕ ಸಮಯದ ಮಾಹಿತಿ ನೀಡಿ ಶಿಬಿರ ಯಶಸ್ವಿಗೊಳಿಸಬೇಕೆಂದರು. ಶಿಬಿರದಲ್ಲಿ ಹೆಚ್ಚಿನ ವೈದ್ಯಕೀಯ ಸೇವೆಗಳಿಗೆ ಗುರುತಿಸಲ್ಪಟ್ಟ ಮಕ್ಕಳನ್ನು ಹತ್ತಿರದ ಉನ್ನತಮಟ್ಟದ ಆಸ್ಪತ್ರೆಗೆ ಅದೇ ದಿನದಂದು ದಾಖಲು ಮಾಡಬೇಕು. ಇದಕ್ಕಾಗಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಲಭ್ಯವಿರುವ ನಗು-ಮಗು ವಾಹನಗಳನ್ನು ಬಳಸಿಕೊಳ್ಳಿ ಎಂದರು.

Advertisement

ಆಂಬ್ಯೂಲೆನ್ಸ್‌ ಮತ್ತು ಡ್ರೈವರ್ ಗಳ ಕೊರತೆ ಬಗ್ಗೆ ಗಮನಿಸಿದ ಅವರು, ಶಾಸಕರ ನಿಧಿಯಿಂದ ಎಲ್ಲ ತಾಲೂಕುಗಳಿಗೆ ನೀಡಲಾದ ಆಂಬ್ಯೂಲೆನ್ಸ್‌
ಗಳಿಗೆ ತಾತ್ಕಾಲಿಕವಾಗಿಯಾದರೂ ಡ್ರೈವರ್  ಗಳನ್ನು ನಿಯೋಜಿಸಬೇಕೆಂದು ಆಯಾ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಅದೇ ರೀತಿ ನಗರ ಪ್ರದೇಶದ ವಿಕಲಚೇತನರಿಗೆ ಆರೋಗ್ಯ ಕಾರ್ಡ್‌ ವಿತರಣೆಯಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಅ. 2ರ ಒಳಗಾಗಿ ಉಳಿದೆಲ್ಲ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್‌ ವಿತರಿಸಲು ಸೂಚಿಸಿದರು. ಐದು ವರ್ಷದೊಳಗಿನ ತೀವ್ರ ಅಪೌಷ್ಟಿಕ ಮಕ್ಕಳಿಗೆ ಪುನಶ್ಚೇತನ ಕೇಂದ್ರಗಳಲ್ಲಿ ಆರೈಕೆ ಹಾಗೂ ಮೇಲ್ವಿಚಾರಣೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೋಡಿಕೊಳ್ಳಬೇಕು. ಅರ್ಹ ಫಲಾನುಭವಿಗಳ ಸಜ್ಜುಗೊಳಿಸುವಿಕೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ನಗರಾಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ನೋಡಿಕೊಳ್ಳಬೇಕು ಎಂದರು. ಡಿಎಚ್‌ಒ ಡಾ| ಶರದ, ಡಾ| ರಮೇಶ ರಾವ್‌, ತಾಲೂಕು ವೈದ್ಯಾಧಿಕಾರಿಗಳು, ಡಿಡಿಪಿಐ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next