ಭರಮಸಾಗರ (ಚಿತ್ರದುರ್ಗ) : ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಅಪರೇಷನ್ ಥಿಯೇಟರ್ ನಲ್ಲಿ ಪ್ರಿವೆಡ್ಡಿಂಗ್ ವಿಡಿಯೋ ಶೂಟ್ ನಡೆಸಿದ್ದ ಡಾ.ಡಿ.ಆರ್.ಅಭಿಷೇಕ್ ರವರನ್ನು ಸೇವೆಯಿಂದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇಲ್ಲಿನ ಆಸ್ಪತ್ರೆಯ ಐಸಿಯು ವೈದ್ಯರಾಗಿದ್ದ ಡಾ.ಡಿ.ಆರ್. ಅಭಿಷೇಕ್ ರವರು ಫೆ7 ರಂದು ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿತ್ತು.
ಮಾಧ್ಯಮದ ವರದಿ ಪ್ರಕಟಗೊಂಡಿತ್ತು. ಮತ್ತು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅನುಮತಿ ಪಡೆದಿರುವುದಿಲ್ಲ. ಕಾನೂನು ಬಾಹಿರ ಕೃತ್ಯ ಎಸಗಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕಗೊಂಡಿದ್ದ ಗುತ್ತಿಗೆ ಆಧಾರಿತ ವೈದ್ಯರಾಗಿದ್ದ ಡಾ.ಅಭಿಷೇಕ್ ರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಳ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಿವೆಡ್ಡಿಂಗ್ ವಿಡಿಯೋ ಸಾಮಾಜಿಕ ಜಾಲತಾಲಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋದಲ್ಲಿ ವ್ಯಕ್ತಿಯೊಬ್ಬರಿಗೆ ಆಪರೇಷನ್ ಥಿಯೇಟರ್ ನಲ್ಲಿ ಅಪರೇಷನ್ ನಡೆಸುತ್ತಿರುವ ಡಾ.ಅಭಿಷೇಕ್ ತನ್ನ ಭಾವಿ ಪತ್ನಿಯನ್ನು ಮತ್ತೊಂದು ಬದಿಯಲ್ಲಿ ನಿಲ್ಲಿಸಿಕೊಂಡು ತನಗೆ ಸಹಾಯ ಮಾಡುತ್ತಿರುವಂತೆ ನಟಿಸಿರುವ ವಿಡಿಯೋ, ಇತರರು ಖುಷಿಯಲ್ಲಿ ನಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸರಕಾರಿ ಆಸ್ಪತ್ರೆಯ ಅಪರೇಷನ್ ಥಿಯೇಟರ್ ನ್ನು ಹೀಗೆ ಸ್ವಂತಕ್ಕೆ ಬಳಕೆ ಮಾಡಿಕೊಳ್ಳುವ ಮೂಲಕ ಬೇಜವಬ್ದಾರಿ ಮೇರೆದಿರುವ ಡಾ.ಅಭಿಷೇಕ್ ಜೋಡಿಯ ವಿರುದ್ದ ಎಲ್ಲೆಡೆಯಿಂದ ತೀವ್ರ ಖಂಡನೆ ವ್ಯಕ್ತವಾಗಿತ್ತು.