ಕೊಟ್ಟಿಗೆಹಾರ: ಸುಂಕಸಾಲೆ ಗ್ರಾಪಂ ವ್ಯಾಪ್ತಿಯ ಬಲ್ಲಾಳರಾಯನ ದುರ್ಗದ ರಾಣಿಝರಿ ಪ್ರಪಾತದ ಅಂಚಲ್ಲಿ ಮಂಗಳವಾರ ಸಂಜೆ ಅರಣ್ಯ ಇಲಾಖೆ ಅನುಮತಿ ಪಡೆಯದೆ ಪ್ರಿವೆಡ್ಡಿಂಗ್‌ಫೋಟೋ ಶೂಟ್ ಮಾಡಲಾಗಿದ್ದು ಅರಣ್ಯ ಇಲಾಖೆ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ.
ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ವೇಳೆ ತೆಪ್ಪ ಮಗುಚಿ ನವಜೋಡಿಗಳು ಮೃತಪಟ್ಟ ಘಟನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು ಅಪಾಯಕಾರಿ ಸ್ಥಳಗಳಲ್ಲಿಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡುವುದಕ್ಕೆ ಎಲ್ಲೆಡೆ ವಿರೋಧವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ರಾಣಿಝರಿಯ ಪ್ರಪಾತದ ಅಂಚಿನಲ್ಲಿ ನವಜೋಡಿಗಳು ಮಂಗಳವಾರ ಫೋಟೋಶೂಟ್‌ನಲ್ಲಿ ತೊಡಗಿದ್ದರೂ ಕೂಡ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಾಣಿಝರಿ ಪ್ರಪಾತ, ದೇವರಮನೆ, ಚಾರ್ಮಾಡಿ ಘಾಟ್ ಶ್ರೇಣಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿದ್ದು ಅರಣ್ಯದೊಳಗೆ ಪ್ರವೇಶಿಸಲು ಅರಣ್ಯ ಇಲಾಖೆ ಅನುಮತಿ ಕಡ್ಡಾಯ. ಆದರೆ ಹಾಡಹಗಲೇ ನಾಲ್ಕೈದು ಜನರ ಗುಂಪು ಅಪಾಯಕಾರಿ ರಾಣಿಝರಿಯ ಪ್ರಪಾತದಂಚಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ತೊಡಗಿದ್ದರೂ ಕೂಡ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ತಂಡ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಲು ಅರಣ್ಯ ಇಲಾಖೆ ಅನುಮತಿ ಪಡೆದಿಲ್ಲ. ಪ್ರಪಾತದ ಅಂಚಿನಲ್ಲಿ ಪ್ರೀ ವೆಡ್ಡಿಂಗ್ ಶೂಟ್‌ಅಪಾಯಕಾರಿಯಾಗಿರುವುದರಿಂದ ಇದಕ್ಕೆಅನುಮತಿ ನೀಡುವುದಿಲ್ಲ.?-
ಯಾಸಿನ್, ಉಪ ವಲಯ ಅರಣ್ಯಾಧಿಕಾರಿ
ದುರ್ಗದಹಳ್ಳಿ, ದೇವರಮನೆ, ರಾಣಿಝರಿ ಮುಂತಾಧ ಸ್ಥಳಗಳಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಲು ಅವಕಾಶ ನೀಡಬಾರದು. ರಾಣಿಝರಿಯ ಪ್ರಪಾತದ ಅಂಚಿನಲ್ಲಿ ಫೋಟೋ ಶೂಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. –
ಅಭಿ ಗ್ರಾಮಸ್ಥರು, ದುರ್ಗದಹಳ್ಳಿ