Advertisement

ಮತ್ತೆ ಪ್ರೀ ರಿಲೀಸ್‌ ಇವೆಂಟ್‌ ಶುರು : ಅ.10ಕ್ಕೆ ‘ಸಲಗ’ ಅದ್ಧೂರಿ ಕಾರ್ಯಕ್ರಮ

09:24 AM Oct 06, 2021 | Team Udayavani |

ಸ್ಟಾರ್‌ ಗಳ ಸಿನಿಮಾ ಬಿಡುಗಡೆ ಶುರುವಾಗುತ್ತಿದ್ದಂತೆ ಮತ್ತೆ ಪ್ರೀ ರಿಲೀಸ್‌ ಇವೆಂಟ್‌ ಗಳು ಕೂಡಾ ಆರಂಭವಾಗುತ್ತಿವೆ.

Advertisement

ಕಳೆದ ಬಾರಿ “ಪೊಗರು’, “ರಾಬರ್ಟ್‌’, “ಯುವರತ್ನ’ ಚಿತ್ರಗಳು ಪ್ರೀ ರಿಲೀಸ್‌ ಇವೆಂಟ್‌ ಮಾಡಿ ಅಭಿಮಾನಿಗಳನ್ನು ತನ್ನತ್ತ ಸೆಳೆದಿದ್ದವು. ಈಗ ಇತರ ಸಿನಿಮಾಗಳು ಕೂಡಾ ಪ್ರೀ ರಿಲೀಸ್‌ ಇವೆಂಟ್‌ಗೆ ಇಳಿದಿವೆ.

ಮೊದಲ ಹಂತವಾಗಿ “ದುನಿಯಾ’ ವಿಜಯ್‌ ನಟನೆಯ “ಸಲಗ’ ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ ನಡೆಯಲಿದೆ. ಈ ಚಿತ್ರ ಅ.14ಕ್ಕೆ ಬಿಡುಗಡೆಯಾಗುತ್ತಿದ್ದು, ಅಕ್ಟೋಬರ್‌ 10ಕ್ಕೆ ಚಿತ್ರದ ಇವೆಂಟ್‌ ನಡೆಯಲಿದೆ. ಅದ್ಧೂರಿಯಾಗಿ ನಡೆಯಲಿರುವ ಈ ಕಾರ್ಯಕ್ರಮ ದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿ ಸಿನಿಮಾ ಬಗೆಗಿನ ಮಾಹಿತಿ ಹಂಚಿಕೊಳ್ಳಲಿದೆ.

ಜೊತೆಗೆ ಚಿತ್ರದ ಟ್ರೇಲರ್‌, ಹಾಡುಗಳ ಪ್ರದರ್ಶನ ಕೂಡಾ ನಡೆಯಲಿದೆ. ಇದರ ಬೆನ್ನಿಗೆ “ಕೋಟಿಗೊಬ್ಬ-3′ ಹಾಗೂ “ಭಜರಂಗಿ-2′ ಚಿತ್ರದ ಇವೆಂಟ್‌ ಗಳು ನಡೆಯಲಿವೆ. ಈ ಮೂಲಕ ಮತ್ತೆ ಕನ್ನಡ ಚಿತ್ರರಂಗ ಕಲರ್‌ ಫ‌ುಲ್‌ ಆಗಿ ಕಂಗೊಳಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next