Advertisement

ಮುಂಬಯಿಯಲ್ಲಿ ಭಾರೀ ಮಳೆ :22 ವಿಮಾನಗಳ ಮಾರ್ಗ ಬದಲು

09:01 AM Jun 12, 2019 | Vishnu Das |

ಮುಂಬಯಿ: ಸೋಮವಾರ ಸಂಜೆಯಿಂದ ಮುಂಬಯಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ವಿಮಾನ ಸಂಚಾರ ಮತ್ತು ರೈಲು ಸಂಚಾರಕ್ಕೆ ತೊಡುಕು ಉಂಟಾಗಿದ್ದು 22 ವಿಮಾನಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ.

Advertisement

ಮುಂಬಯಿಯಲ್ಲಿ ಇಳಿಯಬೇಕಾಗಿದ್ದ 16 ದೇಶಿಯ ಮತ್ತು 6 ಅಂತರಾಷ್ಟ್ರೀಯ ವಿಮಾನಗಳನ್ನು ದೆಹಲಿ, ಹೈದರಾಬಾದ್‌ ಮತ್ತು ಅಹಮದಾಬಾದ್‌ನತ್ತ ತಿರುಗಿಸಲಾಗಿದೆ.

ಮುಂಗಾರು ಪೂರ್ವ ಭಾರೀ ಮಳೆಯಾಗುತ್ತಿದ್ದು ಮುಂಬಯಿ ನಗರದಲ್ಲಿದ್ದ ಭಾರೀ ಸೆಕೆಯ ವಾತಾವರಣವನ್ನು ಕಡಿಮೆ ಮಾಡಿ ತಂಪೆರೆದಿದೆ.

ಮುಂಬಯಿಯ ಲೋಕಲ್‌ ರೈಲುಗಳ ಸಂಚಾರಕ್ಕೂ ತೀವ್ರ ತೊಂದರೆಯುಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next