ಮಳೆ ನೀ ಬಂದರೆ ಜೀವನ ಭಲೇ
ಕಾಲ ಕಾಲಕ್ಕೆ ಬೆಳೆ
ಮಳೆ ನೀ ಮಿತಿ ಮೀರಿದರೆ ಪ್ರವಾಹದ ಹೊಳೆ
ಜನ-ಜೀವನ ದುಃಖ ಸಾಗರದ ಕಳೆ
ಇದ ಮರುಕಳಿಸದಂತೆ ನೀ ತಡೆ
ಆದರೂ ನೀ ಕಾಲ ಕಾಲಕ್ಕೆ ನಮ್ಮನ್ನು ಬಿಡೆ
ನೀನಿದ್ದರೆ ರೈತರ ಜೀವನ ಬಿಡುಗಡೆ
-ಸುಮಲತಾ, ಬಜಗೋಳಿ
ಓ ಮಳೆರಾಯ
ಈ ಬಾರಿಯ ಮಳೆಯಲಿ
ನೆಂದ ಮನಸುಗಳಿಗಿಂತ
ನೊಂದ ಮನಸುಗಳು ಹೆಚ್ಚಯ್ಯ
ತಪ್ಪು ನಿನ್ನದಲ್ಲ ನಮ್ಮದಯ್ಯ
ಇರುವ ಮರವನ್ನು ಕಡಿದು ಬಡಿದು ತಿಂದರಯ್ಯ
ಪರಿಣಾಮದ ಹೊರೆ ಹೊರುವವರಾರಯ್ಯ
-ವಿಶಾಲ ಕರೂರು, ಆಳ್ವಾಸ್ ಕಾಲೇಜು, ಮೂಡುಬಿದಿರೆ
ನೆರೆಗೆ ಹೆದರಿ ಹೋಗುವುದೇನು?
ಬದುಕ ಬೋನಿಗೆ ಸಿಕ್ಕ ಮೇಲೆ…
Advertisement