Advertisement

ಉಡುಪಿಗೆ ರಾಷ್ಟ್ರಪತಿ-ಪೂರ್ವಭಾವಿ ಸಭೆ

02:10 PM Jun 08, 2017 | Team Udayavani |

ಉಡುಪಿ: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಜೂ. 18ರಂದು ಉಡುಪಿ ಕೃಷ್ಣ ಮಠ ಹಾಗೂ ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಸಂಬಂಧ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಬೇಕಾದ ಸುರûಾ ಕ್ರಮಗಳ ಬಗ್ಗೆ ಸವಿವರ ಚರ್ಚೆ ನಡೆಸಲಾಯಿತು.

Advertisement

ವಿವಿಧ ವಿಭಾಗಗಳಿಗೆ ನೋಡಲ್‌ ಅಧಿಕಾರಿಗಳ ನೇಮಕ, ಮುಂಜಾಗರೂಕತೆ, ಮುನ್ನೆಚ್ಚರಿಕೆ ಕೈಗೊಳ್ಳಲು ಅಧಿಕಾರಿಗಳಿಗೆ ಹೊಣೆ ವಹಿಸಲಾಯಿತು. ಮೆಡಿಕಲ್‌ ಯೂನಿಟ್‌, ಆಹಾರ ಸುರûಾ ಅಧಿಕಾರಿಗಳಬಗ್ಗೆ ಸಭೆಯಲ್ಲಿ ಚರ್ಚಿ ಸಲಾಯಿತು. ಅಪರ ಜಿಲ್ಲಾಧಿಕಾರಿಗಳಾದ ದಕ್ಷಿಣ ಕನ್ನಡದ ಕುಮಾರ್‌, ಉಡುಪಿಯ ಅನುರಾಧ, ಉಪವಿಭಾಗಾಧಿಕಾರಿ ಶಿಲ್ಪಾನಾಗ್‌, ಅಡಿಷನಲ್‌ ಎಸ್‌ಪಿ ವಿಷ್ಣುವರ್ಧನ್‌, ಡಿಸಿಎಫ್ ಅಮರನಾಥ್‌, ಎಲ್ಲ ತಹಶೀಲ್ದಾರ್‌ ಮತ್ತು ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next