ಮಂಗಳೂರು: ಹಿಂದೂ ಶ್ರದ್ಧಾ ಕೇಂದ್ರಗಳ ರಕ್ಷಣ ಸಮಿತಿ ನೀಡಿದ ಕರೆಯಂತೆ ದ.ಕ. ಮತ್ತು ಉಡುಪಿ ಜಿಲ್ಲೆಯ ನೂರಾರು ದೇವಾಲಯಗಳಲ್ಲಿ ಭಗವದ್ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಹಿಂದೂ ಭಕ್ತರ ಆರಾಧ್ಯ ಕೇಂದ್ರವಾದ ಧರ್ಮಸ್ಥಳ ದೇವಾಲಯದ ವಿರುದ್ಧ ನಡೆಯುತ್ತಿರುವ ವೃಥಾ ಆಪಾದನೆಗಳು ಹಾಗೂ ಧರ್ಮಾಧಿ ಕಾರಿಗಳ ಏಳಿಗೆ ಸಹಿಸದ ಕುಹಕಿಗಳ ಮನ ಪರಿವರ್ತನೆಯಾಗಲಿ ಹಾಗೂ ಸೌಜನ್ಯಾ ಪ್ರಕರಣದಲ್ಲಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಉಭಯ ಜಿಲ್ಲೆಯ ದೈವ ದೇವರಿಗೆ ಈ ಶ್ರಾವಣದ ಪರ್ವ ಕಾಲದಲ್ಲಿ ಪೂಜೆ, ಪ್ರಾರ್ಥನೆಯೊಂದಿಗೆ ಮೊರೆಯಿಡಲಾಯಿತು.
ಸಮಿತಿ ನೀಡಿದ ಕರೆಗೆ ಅವಿಭಜಿತ ಜಿಲ್ಲೆಗಳ ಹಿಂದೂ ಬಾಂಧವರು ಸಹಸ್ರಾರು ಸಂಖ್ಯೆಯಲ್ಲಿ ಪೂಜೆ ಸಲ್ಲಿಸಿದರು.
ಇದು ಸಮಿತಿಯ ಮೊದಲ ಹೆಜ್ಜೆಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ನ್ಯಾಯೋಚಿತ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.