Advertisement
ಮಂಗಳೂರು ಧರ್ಮಪ್ರಾಂತದ ಚರ್ಚ್‌ಗಳಲ್ಲಿ ಕೋವಿಡ್ ಸುರಕ್ಷಾ ಮಾರ್ಗಸೂಚಿಯನ್ನು ಅನುಸರಿಸಿ ಕೊಂಡು ಜೂ. 13ರಿಂದ ಸಾಮೂಹಿಕ ಪ್ರಾರ್ಥನೆ ಪುನರಾರಂಭ ಮಾಡ ಲಾಗುವುದು ಎಂದು ಜೂ. 6ರಂದು ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಪ್ರಕಟಿಸಿದ್ದರು.
ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಚರ್ಚ್‌ಗೆ ಬರುವ ವಿಶ್ವಾಸಿಗಳ ಕೈ ತೊಳೆಯಲು ವ್ಯವಸ್ಥೆ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸೇಶನ್, ಬೆಂಚುಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ, ಪರಮ ಪ್ರಸಾದ ಸ್ವೀಕಾರ, ನಿರ್ಗಮನ- ಹೀಗೆ ಪ್ರತಿಯೊಂದು ಹಂತದಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಬರಲಾಯಿತು.
Related Articles
ರೊಜಾರಿಯೊ ಕೆಥೆಡ್ರಲ್‌ನಲ್ಲಿ ಬಲಿ ಪೂಜೆಯಲ್ಲಿ ಪಾಲ್ಗೊಳ್ಳಲು ವಿಶ್ವಾಸಿಗಳಿಗೆ ವಾರ್ಡ್‌ವಾರು ವ್ಯವಸ್ಥೆ ಮಾಡಲಾಗಿದೆ. ಒಟ್ಟು 14 ವಾರ್ಡ್‌ಗಳಿದ್ದು, ಶನಿವಾರ 1 ಬಲಿ ಪೂಜೆಗೆ 3 ವಾರ್ಡ್‌ಗಳ ಜನರಿಗೆ ಹಾಗೂ ರವಿವಾರ 3 ಬಲಿ ಪೂಜೆಗಳಲ್ಲಿ ತಲಾ 4 ವಾರ್ಡ್‌ಗಳ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್ ಮುಖಾಂತರ ಗೂಗಲ್ ಫಾರಂನಲ್ಲಿ ಪ್ರವೇಶವನ್ನು ಆಹ್ವಾನಿಸಲಾಗಿತ್ತು. 60-70 ಜನ ಎಂಟ್ರಿ ಸಲ್ಲಿಸಿದಾಗ ಫಾರಂ ಕ್ಲೋಸ್ ಮಾಡುವ ವ್ಯವಸ್ಥೆಯನ್ನು ಅನುಸರಿಸಲಾಗಿತ್ತು ಎಂದು ಕೆಥೆಡ್ರಲ್‌ನ ಮುಖ್ಯ ಗುರು ವಂ| ಜೆ.ಬಿ. ಕ್ರಾಸ್ತಾ ಅವರು ತಿಳಿಸಿದ್ದಾರೆ.
Advertisement