Advertisement

ರಾಮ ಮಂದಿರಕ್ಕಾಗಿ ಸಂತರ ಪ್ರಾರ್ಥನೆ

06:00 AM Dec 07, 2018 | |

ಲಕ್ನೋ/ಅಯೋಧ್ಯೆ: ಬಾಬರಿ ಮಸೀದಿ ಧ್ವಂಸವಾಗಿ 26 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗುರುವಾರ ಅಯೋಧ್ಯೆಯಲ್ಲಿ ಶೀಘ್ರವೇ ರಾಮಮಂದಿರ ನಿರ್ಮಾಣವಾಗಬೇಕು ಎಂಬ ಆಶಯದೊಂದಿಗೆ ಸಾಧು ಸಂತರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಿಎಚ್‌ಪಿ, ಬಜರಂಗ ದಳ ಮತ್ತು ಇತರ ಹಿಂದೂ ಸಂಘಟನೆಗಳು ನಿಯೋಜಿಸಿದಂತೆಯೇ ಶೌರ್ಯ ದಿನವನ್ನಾಗಿ ಆಚರಿಸಿ, ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿವೆ. ಇನ್ನೊಂದೆಡೆ ಮುಸ್ಲಿಂ ಸಂಘಟನೆಗಳು “ಕರಾಳ ದಿನ’ ವನ್ನಾಗಿ ಆಚರಿಸಿವೆ.

Advertisement

ಇದರ ಜತೆಗೆ ಶೀಘ್ರ ಮಂದಿರ ನಿರ್ಮಾಣವಾಗಲಿ ಎಂದು ಸಾಧು- ಸಂತರಿಂದ ವಿಶೇಷ ಪ್ರಾರ್ಥನೆಯನ್ನೂ ನಡೆಸಲಾಗಿದೆ. ನಾಕಾ ಹುನುಮಾನ್‌ ಗಾಹಿಯಲ್ಲಿ ವಿಶೇಷ ಆರತಿಯನ್ನೂ ಕೈಗೊಳ್ಳಲಾಗಿದೆ.ಅಯೋಧ್ಯೆಯಲ್ಲಿ ಮಾತ ನಾಡಿದ ದಿಗಂಬರ ಅಖಾಡಾದ ಮಹಾಂತ ಸುರೇಶ್‌ ದಾಸ್‌, ದೇಶದಲ್ಲಿ, ಜನರ ಕೋಟೇ ಅವುಗಳಿಗಿಂತ ಮೇಲ್ಪಟ್ಟದ್ದು ಎಂದಿದ್ದಾರೆ.  

ಪಕ್ಷಗಳ ನಡುವೆ ಸಹಮತದಿಂದಲೇ ರಾಮ ಮಂದಿರ ನಿರ್ಮಾಣ ಆಗಬೇಕು. ಅದುವೇ ಬಿಜೆಪಿಯ ಆದ್ಯತೆ ಎಂದು ಉತ್ತರ ಪ್ರದೇಶ ಡಿಸಿಎಂ ಕೇಶವ ಮೌರ್ಯ ಹೇಳಿದ್ದಾರೆ. ಇದೇ ವೇಳೆ, ರಾಮಜನ್ಮಭೂಮಿ ವಿವಾದದ ಅರ್ಜಿದಾರರಾದ ಇಕ್ಬಾಲ್‌ ಅನ್ಸಾರಿ ಮಾತನಾಡಿ, ಮುಸ್ಲಿಂ ಸಮುದಾಯವು ಈ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿದೆ‌. ಆದರೆ, ಯಾವುದೇ ಪ್ರತಿಭಟನೆ, ರೋಡ್‌ಶೋ ಕೈಗೊಂಡಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next