ಸರ್ವಧರ್ಮ ಕಾರ್ಯಕ್ರಮವು ಸಂಯುಕ್ತ ಅರಬ್ ಸಂಸ್ಥಾನದ ರಾಷ್ಟ್ರ ಗೀತೆಯೊಂದಿಗೆ ಮತ್ತು ಕರ್ನಾಟಕ ನಾಡಗೀತೆಯೊಂದಿಗೆ ಪ್ರಾರಂಭಿಸಲಾಯಿತು.
ಪದ್ಮಶ್ರೀ ಇಬ್ರಾಹಿಂ ಸುತಾರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ತಂಡದ ಗೌರವಾಧ್ಯಕ್ಷರು ಮತ್ತು ಉದ್ಯಮಿ ಎಂ ಸ್ಕ್ವೇರ್ ಮುಸ್ತಫಾ ಅವರು ಉದ್ಘಾಟಿಸಿದರು.
Advertisement
ಭಾವ್ಯಕ್ಯತಾ ಸಮಾರಂಭದಲ್ಲಿ ಪಾಲ್ಗೊಂಡ ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕರು ಮತ್ತು ವಿದ್ವಾಂಸರು ಆದ ಮೊಹಮ್ಮದ್ ಕುಂಜ್ ಅವರು ಮಾತನಾಡಿ, ಉಪವಾಸ ವ್ರತದ ಕಲ್ಪನೆ ಎಲ್ಲ ಧರ್ಮಗಳಲ್ಲೂ ಇದೆ. ಉಪವಾಸದ ಉದ್ದೇಶ ಮನುಷ್ಯ ತನ್ನನ್ನು ತಾನು ಆಂತರಿಕವಾಗಿ ಮತ್ತು ಮಾನಸಿಕವಾಗಿ ಸಂಸ್ಕರಿಸುವುದು, ಊಟ ಮಾಡದೆ ಇರುವುದರ ಜತೆಗೆ ಮನುಷ್ಯ ತನ್ನ ಎಲ್ಲ ಇಚ್ಛೆಗೆ ಕಡಿವಾಣ ಹಾಕಿ ಆತ್ಮ ನಿಯಂತ್ರಣ ಮಾಡವುದು ಎಂದು ಹೇಳಿದರು.ಇಂದಿನ ತಾಂತ್ರಿಕ ಸಂಪರ್ಕ ನಿಜವಾಗಲೂ ಮನುಷ್ಯತ್ವದ ಕೊಂಡಿ ಆಗಬೇಕಾಗಿತ್ತು. ಆದರೆ, ದುರಾದೃಷ್ಟವಾಗಿ ಅದು ದ್ವೇಷದ ಕೊಂಡಿಯಾಗಿದೆ. ತಾಂತ್ರಿಕ ಸಂಪರ್ಕ ಹೆಚ್ಚಿದ್ದು, ಕೌಟುಂಬಿಕ ಸಂಪರ್ಕ ಕಡಿತಗೊಂಡು ವೃದ್ಧಾಶ್ರಮಗಳು ಹೆಚ್ಚಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
Related Articles
Advertisement
ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳು, ಅತಿವೃಷ್ಟಿ ಇನ್ನಿತರ ಪ್ರಾಕೃತಿಕ ವಿಕೋಪ ಮುಂತಾದ ಸಂಕಷ್ಟ ಸಮಯ ಬಂದಾಗ ಹೇಗೆ ಎಲ್ಲರೂ ಪರಸ್ಪರ ಸಹೋದರತೆಯಿಂದ ಸಹಾಯ ಸಹಕಾರ ಮಾಡುತ್ತಾರೋ ಅದನ್ನು ಮುಂದುವರಿಸಿಕೊಂಡು ಹೋಗಲು ಕರೆ ನೀಡಿದರು.ಪ್ರಪಂಚದ ಸರ್ವ ಜೀವರಾಶಿ ಜತೆ ಕರುಣೆ ತೋರಬೇಕೆಂದು ಇಸ್ಲಾಂ ಧರ್ಮ ಸಂದೇಶವಾಗಿದೆ ಎಂದು ಹೇಳಿದ ಅವರು, ಹಸಿದವನ ಹೊಟ್ಟೆ ತುಂಬಿಸುವ ಕಾರ್ಯ ಈ ರಂಜಾನ್ ತಿಂಗಳ ದೊಡ್ಡ ಸಂದೇಶವಾಗಿದೆ ಎಂದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕರ್ನಾಟಕ ಎನ್‌ಆರ್‌ಐ ಫೋರಮ್ ಮಾಜಿ ಉಪಾಧ್ಯಕ್ಷರಾದ ಡಾ| ಆರತಿ ಕೃಷ್ಣ, ದುಬೈಯಲ್ಲಿ ವಕೀಲ ವೃತ್ತಿಯಲ್ಲಿರುವ ಮತ್ತು ಕೇರಳದ ಪ್ರಸಿದ್ಧ ಅನಿವಾಸಿ ಸಂಘಟನೆಯಾದ ಕೆಎಂಸಿಸಿ ದುಬೈ ಘಟಕದ ಮುಖ್ಯ ಸಂಚಾಲಕರಾದ ಅಡ್ವೋಕೇಟ್ ಖಲೀಲ್ ಕಾಸರಗೋಡು ಅವರು ಪಾಲ್ಗೊಂಡು, ಮುಂದಿನ ದಿನಗಳಲ್ಲಿ ಅನಿವಾಸಿ ಕನ್ನಡಿಗರಿಗೆ ಕೈಲಾದ ಸಹಾಯವನ್ನು ಒದಗಿಸುವುದಾಗಿ ತಿಳಿಸಿದರು.
ದುಬೈ ವಿದ್ಯಾರ್ಥಿ ಮೊಹಮ್ಮದ್ ಆಫlರ್ ಸೊಂಪಾಡಿ ಅವರು ಕುರಾನ್ ಪಠಿಸಿದರು. ಉದ್ಘಾಟನೆ ಪ್ರಾರ್ಥನೆಯನ್ನು ಮೌಲಾನಾ ಇಸಾಕ್ ಕೌಸರಿ ಮಂಗಳೂರು ಅವರು ನೆರವೇರಿಸಿದರು. ತಂಡದ ಮಹಿಳಾ ಘಟಕದ ಸಂಚಾಲಕಿ ಪಲ್ಲವಿ ದಾವಣಗೆರೆ ಅವರು ಆಗಮಿಸಿದ ಸರ್ವ ಅತಿಥಿಗಳಿಗೆ ಮತ್ತು ಧರ್ಮಗುರುಗಳನ್ನು ಸ್ವಾಗತಿಸಿದರು.
ರಂಜಾನ್ ಭಕ್ತಿ ಗೀತೆಯನ್ನು ನಿಜಾಮುದ್ದೀನ್ ದುಬೈ ಕನ್ನಡಿಗ ನೆರವೇರಿಸಿದರು. ಹೆಮ್ಮೆಯ ಕನ್ನಡಿಗರು ತಂಡದ ಬಗ್ಗೆ ಸಂಕ್ಷಿಪ್ತವಾಗಿ ಸಮಿತಿ ಸದಸ್ಯೆ ಹಾದಿಯ ಮಂಡ್ಯ ಅವರು ವಿವರಿಸಿದರು. ತಂಡದ ವಿವಿಧ ಕಾರ್ಯಗಳ ಬಗ್ಗೆ ತಂಡದ ಅಧ್ಯಕ್ಷರಾದ ಮಮತಾ ಮೈಸೂರು ಅವರು ತಿಳಿಸಿದರು.
ವಿಷ್ಣುಮೂರ್ತಿ ಮೈಸೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರದಲ್ಲಿ ಪಾಲ್ಗೊಂಡ ಎಲ್ಲ ಅತಿಥಿಗಳಿಗೆ, ಧರ್ಮಗುರುಗಳಿಗೆ, ಕುರಾನ್ ಪಠಣ ಮತ್ತು ಭಕ್ತಿ ಗೀತೆ ಹಾಡಿದವರಿಗೆ ಮತ್ತು ಯುಎಇಯಲ್ಲಿ ಕನ್ನಡ ಸೇವೆ, ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸತ್ತಿರುವ ಎÇÉಾ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕಾರ್ಯಕ್ರಮದ ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು, ಸುದೀಪ್ ದಾವಣಗೆರೆ, ತಾಂತ್ರಿಕ ಕಾರ್ಯ ನಿರ್ವಹಿಸದ ಸೆಂತಿಲ್ ಬೆಂಗಳೂರು, ಸಾದತ್ ಬೆಂಗಳೂರು ಮತ್ತು ಸರ್ವ ಸಮಿತಿ ಸದಸ್ಯರಿಗೆ ಅಶ್ರಫ್ ಪೆರುವಾಯಿ ಮಂಗಳೂರು ಅವರು ಧನ್ಯವಾದ ಸಲ್ಲಿಸಿದರು.