Advertisement

Christians: ಕರಾವಳಿ ಕ್ರೈಸ್ತರಿಂದ ಸಮಾಧಿ ಸ್ಥಳಗಳಲ್ಲಿ ಪ್ರಾರ್ಥನೆ

12:29 AM Nov 03, 2023 | Team Udayavani |

ಮಂಗಳೂರು: ಮರಣ ಹೊಂದಿದ ಕುಟುಂಬಸ್ತರನ್ನು ಕ್ರೈಸ್ತರು ಸ್ಮರಿಸುವ ಸಂಪ್ರದಾಯವಿದ್ದು, ಅದರಂತೆ ಮೃತಪಟ್ಟ ಭಕ್ತ ವಿಶ್ವಾಸಿಗಳ ಸ್ಮರಣೆ ದಿನ (ಆಲ್‌ ಸೋಲ್ಸ್‌ ಡೇ)ವನ್ನು ಗುರುವಾರ ಕರಾವಳಿಯಲ್ಲಿ ಆಚರಿಸಲಾಯಿತು.

Advertisement

ದ.ಕ. ಹಾಗೂ ಉಡುಪಿ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ ಹಾಗೂ ಸಮಾಧಿ ಸ್ಥಳದಲ್ಲಿ ಪ್ರಾರ್ಥನೆ ನಡೆಸಲಾಯಿತು.

ಸಮಾಧಿ (ಸಿಮೆಟ್ರಿ) ಸ್ಥಳಗಳನ್ನು ಶುಚಿಗೊಳಿಸಿ ಹೂ ಗಳನ್ನು ಅರ್ಪಿಸುವುದು, ಧರ್ಮಗುರುಗಳಿಂದ ಆಶೀ ರ್ವಚನ, ಶುದ್ಧೀಕರಣ, ದೀಪ, ಮೋಂಬತ್ತಿಗಳನ್ನಿಟ್ಟು ಸಾರ್ವತ್ರಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಅಗಲಿದ ಆತ್ಮಗಳನ್ನು ಸ್ಮರಿಸಲಾಯಿತು.

ಸಮಾಜದಲ್ಲಿ ಬಾಳಿ ಬುದುಕಿದ ಸಂದರ್ಭದಲ್ಲಿ ಆದರ್ಶ ಜೀವನ ನಡೆಸಿದವರು ಸ್ವರ್ಗಸ್ಥರಾಗುತ್ತಾರೆ. ಉಳಿದ ಆತ್ಮಗಳು ಶುದ್ಧೀಕರಣ (ಪರ್ಗೆಟರಿ)ಸ್ಥಿತಿಯಲ್ಲಿರುತ್ತವೆ ಎನ್ನುವುದು ಕ್ರೈಸ್ತರ ನಂಬಿಕೆ. ಅಂತಹ ಆತ್ಮಗಳು ಸ್ವರ್ಗ ಸೇರಲು ಅವರಿಗಾಗಿ ಸಮೂಹ ಪ್ರಾರ್ಥನೆ ನಡೆಸುವ ದಿನವಾಗಿದೆ.

ಸಮಸ್ತ ಸಂತ ಭಕ್ತರ ದಿನ
ಕ್ರೈಸ್ತರಲ್ಲಿ ಇಹಲೋಕ ತ್ಯಜಿಸಿ ಸ್ವರ್ಗಸ್ಥರಾದವರನ್ನು ಸಂತ ಭಕ್ತರು ಎಂದು ಗುರುತಿಸಲಾಗುತ್ತದೆ. ಪವಿತ್ರ ಸಭೆಯಿಂದ ಗುರುತಿಸಲ್ಪಟ್ಟ ಹಾಗೂ ಗುರುತಿಸಲ್ಪಡದ ದೇವರ ಸಾಮ್ರಾಜ್ಯದಲ್ಲಿರುವ ಎಲ್ಲ ಸಂತ ಭಕ್ತರನ್ನು ನ. 1ರಂದು ಸಾಮೂಹಿಕ ಪೂಜೆ, ಪ್ರಾರ್ಥನೆ ಮೂಲಕ ಸ್ಮರಿಸುವ ದಿನವಾಗಿದ್ದು, ಅವರೊಡನೆ ಕೂಡಿ ದೇವರಿಗೆ ಸ್ತುತಿ, ಸ್ತೋತ್ರ ಅರ್ಪಿಸಲಾಗುತ್ತದೆ. ದೇವರ ವಾಕ್ಯದಂತೆ ಸಂಪೂರ್ಣವಾಗಿ ನಡೆಯದೆ ಪಾಪಗಳ ನಿಮಿತ್ತ ಶುದ್ಧೀಕರಣದ ಸ್ಥಿತಿಯಲ್ಲಿರುವ ಆತ್ಮಗಳಿಗೆ ಸ್ವರ್ಗ ಪ್ರಾಪ್ತಿಯಾಗಲು ನ. 2ರಂದು ಪವಿತ್ರಸಭೆ, ಸಮಸ್ತ ಕೆಥೋಲಿಕರು ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಮಂಗಳೂರು ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್‌ ಸಲ್ಡಾನ್ಹಾ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next