Advertisement

ಮೋದಿ, ನಿತೀಶ್ ಕುಮಾರ್​ಗೂ ಮಕ್ಕಳಾಗಲಿ ಎಂದು ದೇವರಲ್ಲಿ ಪಾರ್ಥಿಸುವೆ; ಲಾಲೂ ಪ್ರಸಾದ್ ಕಿಡಿ

09:22 PM Feb 11, 2022 | Team Udayavani |

ನವದೆಹಲಿ: “ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರದ ಸಿಎಂ ನಿತೀಶ್‌ ಕುಮಾರ್‌ಗೆ ಮಕ್ಕಳಾಗಲಿ.’ ಹೀಗೆಂದು ಹರಸಿರುವುದು ರಾಷ್ಟ್ರೀಯ ಜನತಾದಳ ಪಕ್ಷದ(ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌.

Advertisement

ಪ್ರಧಾನಿ ಮೋದಿಯವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುವಾಗ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದರು. “ಕುಟುಂಬ ರಾಜಕೀಯ ಮಾಡದವರು ಸಮಾಜವಾದಿಯಾಗಿರುತ್ತಾರೆ. ಮಾಡುವವರದ್ದು ಸುಳ್ಳು ಸಮಾಜವಾದ’ ಎಂದಿದ್ದರು.

ಇದನ್ನೂ ಓದಿ:ಭಾರತದ ಜೋಶ್‌; ವಿಂಡೀಸಿಗೆ ವೈಟ್‌ವಾಶ್‌

ಅದಕ್ಕೆ ಪ್ರತಿಯಾಗಿ ಮಾತನಾಡಿರುವ ಲಾಲು, “ಪ್ರಧಾನಿ ಮೋದಿ ಅವರಿಗೆ ಮಕ್ಕಳಿಲ್ಲ ಅಂದರೆ ನಾನೇನು ಮಾಡಲಿ? ನಿತೀಶ್‌ ಅವರಿಗೆ ಮಗನಿದ್ದಾರಾದರೂ ಆತ ರಾಜಕೀಯಕ್ಕೆ ಯೋಗ್ಯನಲ್ಲ.

ಅವರಿಬ್ಬರಿಗೂ ಮಕ್ಕಳಾಗಲಿ. ಆಗ ಅವರೂ ಕುಟುಂಬ ರಾಜಕರಣ ಮಾಡಬಹುದು’ ಎಂದು ನುಡಿದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next