Advertisement

ಮೇ 12-16ರವರೆಗೆ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ

01:24 PM May 09, 2018 | |

ವಾಮದಪದವು : ಬಂಟ್ವಾಳ ತಾ| ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ನೀಲಿ ವಿಷ್ಣುಮೂರ್ತಿ ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮ ಬೈದರ್ಕಳ ಗರೋಡಿ ಜೀರ್ಣೋದ್ಧಾರ ಗೊಂಡು ಪುನರ್‌ ನಿರ್ಮಾಣಗೊಂಡಿದ್ದು, ಮೇ 12ರಿಂದ 16ರ ವರೆಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.

Advertisement

ಕಾರಣಿಕ ಕ್ಷೇತ್ರ
ಈ ದೈವಸ್ಥಾನ ಹಲವು ಶತಮಾನಗಳ ಇತಿಹಾಸ ಹೊಂದಿದೆ. ಸತ್ಯ ಪ್ರಮಾಣ ನಡೆಯುವಂತಹ ಸಾನ್ನಿಧ್ಯವಾಗಿದೆ. ಈ ಕ್ಷೇತ್ರದ ಗಂಧ ಪ್ರಸಾದವನ್ನು ಸ್ವೀಕರಿಸಿದರೆ ಚರ್ಮರೋಗ, ವಿಷಭಯ ಮತ್ತು ಸರ್ಪ ಭಯಗಳು ಪರಿಹಾರವಾಗುವುದೆಂಬ ನಂಬಿಕೆಯಿದೆ. ಅನಾದಿ ಕಾಲದಿಂದಲೂ ಇಲ್ಲಿ ಜಾತ್ರೆ, ಉತ್ಸವಾದಿಗಳು ಕಾಲ ಕಾಲಕ್ಕೆ ಊರ-ಪರವೂರ ಭಕ್ತ ಜನರ ಸಹಕಾರದೊಂದಿಗೆ, ಪಾರಂಪರಿಕ ಸಂಪ್ರದಾಯದಂತೆ ನಡೆಯುತ್ತಿದೆ.

50 ಲಕ್ಷ ರೂ. ವೆಚ್ಚ
ಈ ದೇವಸ್ಥಾನವನ್ನು ನವೀಕರಣಗೊಳಿಸಿ ಪುನರ್‌ ನಿರ್ಮಾಣ ಮಾಡಬೇಕೆಂದು ಭಕ್ತಜನರು ಸಂಕಲ್ಪಿಸಿದಂತೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತಹ ಪರಿಹಾರ ಕಾರ್ಯಗಳು ಹಾಗೂ ಪುನರ್‌ ನಿರ್ಮಾಣ ಕಾರ್ಯ ನಡೆಸಲಾಗಿದೆ. ಸುಮಾರು 50 ಲಕ್ಷ ರೂ. ವೆಚ್ಚದ ಜೀರ್ಣೋದ್ಧಾರಗೊಳಿಸಲಾಗಿದೆ. ಶ್ರೀ ಕೊಡಮಣಿ ದೈವಸ್ಥಾನ ಚಾವಡಿ, ಉಗ್ರಾಣ, ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಪುನರ್‌ ನಿರ್ಮಾಣಗೊಂಡಿದೆ. ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಶ್ರೀ ವಿಷ್ಣುಮೂರ್ತಿ ದೈವಸ್ಥಾನವನ್ನು ನವೀಕರಣಗೊಳಿಸಲಾಗಿದೆ. ಅಂಗಣಕ್ಕೆ ಇಂಟರ್‌ ಲಾಕ್‌ ಅಳವಡಿಸಲಾಗುತ್ತಿದ್ದು, ಚಾವಡಿ, ಧ್ವಜಸ್ತಂಭ, ದಂಬೆಕಲ್ಲು, ಪರಿಧಿಗಳನಿರ್ಮಾಣಗೊಳಿಸಲಾಗಿದೆ.

ಬಾಬು ರಾಜೇಂದ್ರ ಶೆಟ್ಟಿ ಅಧ್ಯಕ್ಷರಾಗಿರುವ ವ್ಯವಸ್ಥಾಪನ ಸಮಿತಿ, ಸದಸ್ಯರು ಮತ್ತು ಉದ್ಯಮಿ ಶ್ರೀನಿವಾಸ ನಾಯಕ್‌ ಗೌರವಾಧ್ಯಕ್ಷತೆಯಲ್ಲಿ ನವೀನ ಚಂದ್ರ ಶೆಟ್ಟಿ ಅಧ್ಯಕ್ಷರಾಗಿ, ಪ್ರವೀಣ್‌ ಗಟ್ಟಿ ಕಾರ್ಯದರ್ಶಿಯಾಗಿರುವ ಜೀರ್ಣೋದ್ಧಾರ ಸಮಿತಿ ಮತ್ತಿತರ ಪದಾಧಿಕಾರಿಗಳು ಗ್ರಾಮಸ್ಥರು ಕಾರ್ಯಕ್ರಮದ ಯಶಸ್ಸಿಗೆ ಕಾರ್ಯ ಪ್ರವೃತ್ತವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next