ನಂಜನಗೂಡು: ನಗರದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ದೇಹದಾಡ್ಯì ಸ್ಪರ್ಧೆಯಲ್ಲಿನ 2017 ರ ಸಾಲಿನ ವಜ್ರದೇಹಿಯಾಗಿ ಪ್ರೀತಮ ಚೋಗಲೆ ಹೊರಹೊಮ್ಮಿದರು. ಇಲ್ಲಿನ ಬಾಲಕರ ಕಿರಿಯ ಕಾಲೇಜಿನ ಮೈದಾನದಲ್ಲಿ ನಂಜನಗೂಡು ಸ್ಪೋರ್ಟ್ ಫೌಂಡೇಶನ್ ಭಾನುವಾರ ರಾತ್ರಿ ಏರ್ಪಡಿಸಿದ್ದ ರಾಜ್ಯ ಮಟ್ಟದ ದೇಹದಾಡ್ಯì ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿನ ಸುಮಾರು 100ಕ್ಕೂ ಹೆಚ್ಚು ಜನ ಭಾಗವಹಿಸಿ ತಮ್ಮ ಅಂಗಸೌಷ್ಠವ ಪ್ರದರ್ಶಿಸಿದರು.
ದಕ್ಷಿಣ ಕಾಶಿಯ ಹಿರಿಯ ಫುಟ್ಬಾಲ್ ಆಟಗಾರ ಯು.ಎನ್.ಪದ್ಮನಾಭರಾವ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಪಂದ್ಯಾವಳಿ 55ಕೆ.ಜಿ., 60, 65 ಕೆ.ಜಿ, 70ಕೆ.ಜಿ, 80 ಕೆ.ಜಿ, ಮತ್ತು 85ಕೆ.ಜಿ.ತೂಕದ ಸ್ಪರ್ಧೆ ನಡೆಯಿತು. ಯು.ಎನ್.ಪದ್ಮನಾಭರಾವ್ ಮಾತನಾಡಿ, ಪಂದ್ಯಾವಳಿಯ ಸ್ಪರ್ಧೆಗಳಲ್ಲಿ ಸ್ಥಳೀಯರು ಹೆಚ್ಚೆಚ್ಚು ಭಾಗವಹಿಸಿದರೆ ಸಂಘ ಸಂಸ್ಥೆಗಳ ಶ್ರಮ ಸಾರ್ಥಕವಾಗಲಿದೆ ಎಂದರು.
ದೇಹದಾಡ್ಯì ಸ್ಪರ್ಧೆಯ ಕಾರ್ಯಕ್ರಮದಲ್ಲಿ ನಂಜನಗೂಡಿನ ನ್ಪೋರ್ಟ್ಸ್ ಫೌಂಡೇಶನ್ ಅಧ್ಯಕ್ಷ ವಕೀಲ ಮಹದೇವಕುಮಾರ್, ರಾಜ್ಯ ವಾಲ್ಮೀಕಿ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ನಗರಸಭಾ ಅಧ್ಯಕ್ಷೆ ಪುಷ್ಪಲತಾ,ಮಾಜಿ ಪುರಸಭಾ ಅಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ಉಮಾಮಹೇಶ್, ಇಂಧನ್‌ಬಾಬು, ಎನ್.ಎಸ್.ಸುಬ್ರಮಣ್ಯ, ಸದಾಶಿವ ಭಟ್ ನೀಲಕಂಠ ಶ್ರೀನಿವಾಸ್, ಪ್ರಭಾಕರ್ ರೆಡ್ಡಿ, ಕೇಶವ್, ಬಿ.ಎಸ್.ಉಮೇಶ್, ಶ್ರೀನಾಥ್, ರವಿಕುಮಾರ್, ಭಾಸ್ಕರ್, ಸಂಚಾಲಕ ಸುಬ್ರಹ್ಮಣ್ಯ, ಪುರುಷೋತ್ತಮ್, ಯಶವಂತ್ ಮತ್ತಿತರರಿದ್ದರು.
ಪಂದ್ಯದ ಪ್ರಥಮ ಸ್ಥಾನಕ್ಕೆ 20 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 10 ಸಾವಿರ, ಎಸ್ಟ್ ಪೋಸ್ ಆಗಿ ಮಿಂಚಿದವರಿಗೆ 3ಸಾವಿರ ರೂ.,ಗಳನ್ನು ಪಂದ್ಯಾವಳಿ ಪರವಾಗಿ ನೀಡಲಾಯಿತು.
30 ಸಾವಿರ ಬಹುಮಾನ: 2017ರ ಸ್ಪರ್ಧೆಯ ಪ್ರಥಮ ಬಹುಮಾನಕ್ಕೆ ಮಂಗಳೂರಿನ ಧನರಾಜ್ ಭಾಜನರಾದರೆ, ಎರಡನೇ ಬಹುಮಾನವನ್ನು ಅದೇ ಜಿಲ್ಲೆಯ ಸಪನ್ ಪಡೆಯಲು ಶಕ್ತರಾದರು. ಬೆಸ್ಟ್ ಪೋಸೆಸ್ ಆಗಿ ಬೆಳಗಾಂ ನ ರಾಜ್‌ಕುಮಾರ್ ದುರ್ಗುಂಡೆ ಪಾರಿತೋಷಕ ಗಿಟ್ಟಿಸಿಕೊಂಡರು. ಶಾಸಕ ಕಳಲೆ ಕೇಶವಮೂರ್ತಿ ದೇಹದಾಡ್ಯì ಸ್ಪರ್ಧೆಯ ಪ್ರಥಮ ಬಹುಮಾನ ಮತ್ತು 2017 ಸಾಲಿನ ಟೈಟಲ್ ಹಾಗೂ ಪಾರಿತೋಷಕ ಪಡೆದ ಬೆಳಗಾಂನ ಪ್ರೀತಮ ಚೋಗಲೆಗೆ 30 ಸಾವಿರ ರೂ. ನೀಡಿ ಗೌರವಿಸಿದರು.