Advertisement

ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ

02:41 PM Sep 06, 2017 | |

ಸುರಪುರ: ಮಕ್ಕಳು ತಮ್ಮಲಿರುವ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

Advertisement

ನಗರದ ಬಾಲಕರ ಸರಕಾರಿ ಪ್ರೌಶಾಲೆಯಲ್ಲಿ ಶಿಕ್ಷಣ ಇಲಾಖೆ ಮಂಗಳವಾರ ಏರ್ಪಡಿಸಿದ್ದ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಹಾಗೂ ಶಿಕ್ಷರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ಶುಭಕೋರಿ ಅವರು ಮಾತನಾಡಿದರು. ಸುರಪುರ ಪ್ರತಿ ಕ್ಷೇತ್ರದಲ್ಲಿ ಮುಂದೆ ಇರುತ್ತದೆ. ಈ ಪರಂಪರೆಯನ್ನು ವಿದ್ಯಾರ್ಥಿಗಳು ಮೂಂದುವರೆಸಿಕೊಂಡು ಹೋಗಬೇಕು. ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಸಾಂಸ್ಕೃತಿಕ ನಾಡಾಗಿರುವ ತಾಲೂಕಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಶೈಕ್ಷಣಿಕ ಪ್ರಗತಿಗಾಗಿ ನಮ್ಮ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಮೇಲೆ ಬರಬೇಕು. ಕಠಿಣ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆದಕೊಳ್ಳಬೇಕು ಎಂದು ತಿಳಿದರು.  ಶಿಕ್ಷಕರು ಇಂದು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಶಿಕ್ಷಕರ ವೇತನ ಪರಿಷ್ಕರಣೆ ಮತ್ತು ತಾರತಮ್ಯ ಕುರಿತು ಈ ಬಾರಿ ಅ ಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನಿಡಿದರು. ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾ ಧಿಕಾರಿ ಮಾತನಾಡಿ, ಕಳೆದ ಭಾರಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ 10 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹತ್ತನೇ ತರಗತಿ ಫಲಿತಾಂಶದಲ್ಲಿ ಈ ಬಾರಿ ಶೇ. 81ರಷ್ಟು ಫಲಿತಾಂಶ ಪಡೆದ ಹೆಗ್ಗಳಿಕೆ ಇದೆ ಎಂದು ತಿಳಿಸಿದರು.

ತಾಲೂಕಿನ ವಿವಿಧ ಶಾಲೆಗಳ ಸುಮಾರು 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು. ನಗರಸಭೆ ಅಧ್ಯಕ್ಷ ಕವಿತಾ ಎಲಿಗಾರ, ಎಪಿಎಂಸಿ ಅಧ್ಯಕ್ಷ ನಿಂಗಣ° ಬಾದ್ಯಾಪುರ, ನಗರ ಯೋಜನಾ ಪ್ರಾ ಧಿಕಾರದ ಅಧ್ಯಕ್ಷ ಸೂಗೂರೇಶ ವಾರದ, ಅಫೆಕ್ಸ್‌ ಬ್ಯಾಂಕ್‌ ನಿರ್ದೇಶಕ ವಿಠಲ ಯಾದವ್‌, ಸರಕಾರಿ ನೌಕರರ ಸಂಘದ ಅಧ್ಯಕ್ಷ ಭೀಮಣ್ಣ ಬೋಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹಳ್ಳೆಪ್ಪ ಕಾಂಜಾಜಿ,
ತಾಲೂಕು ಅಧ್ಯಕ್ಷ ಸೋಮರೆಡ್ಡಿ ಮಂಗ್ಯಾಳ ಪ್ರಮುಖರಾದ ಶ್ರೀನಿವಾಸ ಜಾಲವಾದಿ ವೆಂಕೋಬ ಸಾಹು, ರಾಜಾ ಮುಕುಂದ ನಾಯಕ, ವೆಂಕಟೇಶ ಹೊಸ್ಮನಿ, ಪಂಡಿತ ನಿಂಬೂರ, ವಿಜಯಕುಮಾರ ವೇದಿಕೆಯಲ್ಲಿದ್ದರು, ಬಿಆರ್‌ಸಿ ಅಮರೇಶ ಕುಂಬಾರ ಪ್ರಾಸ್ತವಿಕ ಮಾತನಾಡಿದರು. ಭೀಮಣ್ಣ ನಾಯೊಡಿ ಸ್ವಾಗತಿಸಿದರು. ಅಬ್ದುಲ್‌ ಪಟೇಲ ನಿರೂಪಿಸಿದರು. ಖಾದರ ಪಟೇಲ ವಂದಿಸಿದರು.

ಸೂಕ್ತ ವೇದಿಕೆ ಕೊರತೆಗೆ ಪಾಲಕರ ಬೇಸರ 
ಪ್ರತಿಭಾ ಕಾರಂಜಿ ಕಾರ್ಯಕ್ರಮ ಅನುಷ್ಠಾನಕ್ಕೆ ಸರಕಾರ ಸಾಕಷ್ಟು ಅನುದಾನ ನೀಡುತ್ತದೆ. ಆದರೆ ಇದು ಸಮರ್ಪಕವಾಗಿ ಬಳೆಕೆ ಆಗುತ್ತಿಲ್ಲ. ನಮ್ಮ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸರಿಯಾದ ವೇದಿಕೆ ನಿರ್ಮಾಣ ಮಾಡಿಲ್ಲ. ಯಾವುದೇ ಅನುಕೂಲಗಳನ್ನು ಕಲ್ಪಿಸಿಲ್ಲ. ವ್ಯವಸ್ಥೆ ಇಲ್ಲದ ವೇದಿಕೆಯಲ್ಲಿ ಮಕ್ಕಳು ಪ್ರತಿಭೆ ಹೇಗೆ ಅನಾವರಣಗೊಳಿಸಬೇಕು ಎಂದು ಪ್ರತಿಭಾ ಕಾರಂಜಿಗೆ ಮಕ್ಕಳನ್ನು ಕರೆತಂದ ಪಾಲಕರು ದೂರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next