Advertisement

ಕೌಶಲ ವೃದ್ಧಿಗೆ ಪ್ರತಿಭಾ ಕಾರಂಜಿ ಪೂರಕ

04:19 PM Jul 27, 2018 | Team Udayavani |

ಅಳ್ನಾವರ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರುತಿಸಿ ಪರಿಪೂರ್ಣತೆಯತ್ತ ಸಾಗುವಂತೆ ಮಾಡಲು ಹಾಗೂ ಅವರ ವ್ಯಕ್ತಿತ್ವ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಿಂಗಪ್ಪ ಘಾಟಿನ್‌ ಹೇಳಿದರು.

Advertisement

ಪಟ್ಟಣದಲ್ಲಿ ಗುರುವಾರ ನಡೆದ ಅಳ್ನಾವರ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗಲು ಇದು ಸೂಕ್ತ ವೇದಿಕೆಯಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರಿಂದ ಮಕ್ಕಳ ಸಂವೇದನಶೀಲತೆ, ಆತ್ಮವಿಶ್ವಾಸ, ಬುದ್ಧಿಶಕ್ತಿ ಅನಾವರಣಗೊಳ್ಳುತ್ತದೆ. ಇದರಿಂದ ಸಮಾಜದ ಪರಿವರ್ತನೆ ಮಾಡಲು ಯುವ ಮನಸ್ಸುಗಳಿಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಎಂದರು.

ಅಳ್ನಾವರ, ಕಾಶೇನಟ್ಟಿ, ಬೆಣಚಿ, ಕಡಬಗಟ್ಟಿ, ಹುಲಿಕೇರಿ ಶಾಲೆಗಳ ಸುಮಾರು 300 ಸ್ಪರ್ಧಾಳುಗಳು ಭಾಗಿಯಾಗಿದ್ದರು. 30ಕ್ಕೂ ಹೆಚ್ಚು ಸ್ಪರ್ಧೆಗಳು ನಡೆದವು. ಎಕ್ಸೆಲ್‌ ಲೈಫ್‌ ಇನ್ಸುರೆನ್ಸ್‌ ಕಂಪನಿಯ ಧಾರವಾಡ ಶಾಖೆ ಮುಖ್ಯಸ್ಥ ಆನಂದಸಿಂಗ್‌ ರಜಪೂತ ಸ್ಪರ್ಧಾ ವಿಜೇತರ ಬಹುಮಾನಗಳ ಪ್ರಾಯೋಜಕತ್ವ ವಹಿಸಿದ್ದರು. ಪಪಂ ಅಧ್ಯಕ್ಷೆ ಭಾಗ್ಯವತಿ ಕುರುಬರ, ಉಪಾಧ್ಯಕ್ಷ ಕಿರಣ ಗಡಕರ, ಎಸ್‌ ಡಿಎಂಸಿ ಅಧ್ಯಕ್ಷ ಉಸ್ಮಾನ ಬಾತಖಂಡಿ, ರೊಜಾರಿಯೊ ಫರ್ನಾಂಡಿಸ್‌, ಮಂಜುಳಾ ಮೇದಾರ, ಅನಪೂರ್ಣಾ ಹಿರೇಮಠ, ಬಿಆರ್‌ಸಿ ಎಸ್‌.ಸಿ. ಅಂಗಡಿ, ಚಿನ್ನಮ್ಮ ಬಾಗಲಕೋಟಿ, ಆರ್‌.ವಿ. ಪಂಚಾಳ, ಎಚ್‌.ಎಸ್‌. ಬಡಿಗೇರ, ಎಂ.ಐ. ದಿವಟಗಿ, ಪುಂಡಲೀಕ ಪಾರದಿ, ದೀಪಾ ಲಾಡ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next