ಮಣಿಪಾಲ: ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರ ನಿಧನದ ಸುದ್ದಿ ರಾಜಕೀಯ ವಲಯದಲ್ಲಿ ಆಘಾತ ಉಂಟು ಮಾಡಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ ರಾಜಕೀಯ ನಾಯಕರು ಆಘಾತ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ‘ಉದಯವಾಣಿ’ ಜೊತೆ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರು, ಇದನ್ನು ನಿರೀಕ್ಷೆ ಮಾಡಿಕೊಂಡಿರಲಿಲ್ಲ, ಯಾರೂ ನಿರೀಕ್ಷೆ ಮಾಡಿಕೊಳ್ಳುವಂತಹದ್ದೂ ಅಲ್ಲ ಎಂದಿದ್ದಾರೆ.
ಧರ್ಮೇಗೌಡ ಅವರು ಉಪ ಸಭಾಪತಿಯಾದ ನಂತರ ಅವರೊಂದಿಗೆ ನಿಕಟ ಸಂಪರ್ಕಕ್ಕೆ ಬಂದ್ದಿದ್ದೆ. ತುಂಬಾ ಸೌಮ್ಯ ಸ್ವಭಾವದವರು. ಆದರೆ ಈ ನಿರ್ಧಾರವನ್ನು ಖಂಡಿತ ನಿರೀಕ್ಷೆ ಮಾಡಿರಲಿಲ್ಲ ಎಂದರು.
ಇದನ್ನೂ ಓದಿ:ಆತ್ಮಹತ್ಯೆಗೆ ಮುನ್ನ ರೈಲು ಬರುವ ಸಮಯದ ಬಗ್ಗೆ ಮಾಹಿತಿ ಪಡೆದಿದ್ದ ಧರ್ಮೇಗೌಡರು!
ಪರಿಷತ್ ನ ಕಾರ್ಯಕಲಾಪದ ಬಗ್ಗೆ ಯಾವುದೇ ಗೊಂದಲಗಳಿದ್ದಾಗ ಚರ್ಚೆ ಮಾಡುತ್ತಿದ್ದೆವು. ಅವರು ಕೂಡಾ ಸಮಿತಿಯಲ್ಲಿ ಚರ್ಚಿಸುತ್ತಿದ್ದರು ಎಂದು ಪ್ರತಾಪ್ ಚಂದ್ರ ಶೆಟ್ಟಿ ಅವರು ಹೇಳಿದರು.
ಇದನ್ನೂ ಓದಿ: ಎಸ್.ಎಲ್. ಧರ್ಮೇಗೌಡ ಆತ್ಮಹತ್ಯೆ: ಬಿಎಸ್ ವೈ, ದೇವೇಗೌಡ, ಎಚ್ ಡಿಕೆ ಸಂತಾಪ